ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗಾಂಗ ದಾನ ಮಾಡಿ 6 ಜೀವ ಉಳಿಸಿದ ಮಂಡ್ಯದ ರೈತ

|
Google Oneindia Kannada News

ಬೆಂಗಳೂರು, ಫೆಬ್ರವರಿ 24 : ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ರೈತರೊಬ್ಬರು ಅಂಗಾಂಗ ದಾನ ಮಾಡಿ ಹಲವು ಜೀವಗಳನ್ನು ಉಳಿಸಿದ್ದಾರೆ. ಕುಟುಂಬದ ಒಪ್ಪಿಗೆಯ ಬಳಿಕ ಅಂಗಾಂಗಳನ್ನು ದಾನ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ತಟ್ಟಹಳ್ಳಿ ಗ್ರಾಮದ ರೈತ ರಾಜು (39) ಅಂಗಾಂಗಳನ್ನು ದಾನ ಮಾಡಿದವರು. ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ಎಡಭಾಗದ ಮೂತ್ರಪಿಂಡ ದಾನ ಮಾಡಿ ಜೀವ ಉಳಿಸಿದ್ದಾರೆ.

ಹೃದಯ ದಾನ ಮಾಡಿ ಮರುಜೀವ ಕೊಟ್ಟ 23ರ ಯುವಕಹೃದಯ ದಾನ ಮಾಡಿ ಮರುಜೀವ ಕೊಟ್ಟ 23ರ ಯುವಕ

ಬಲಭಾಗದ ಮೂತ್ರಪಿಂಡ, ಯಕೃತ್, ಶ್ವಾಸಕೋಶ, ಹೃದಯ ಕವಾಟ, ಕಾರ್ನಿಯಾಗಳನ್ನು ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ದಾನ ಮಾಡಿ ಆರು ಜನರ ಜೀವವನ್ನು ಉಳಿಸಿದ್ದಾರೆ.

ವೃದ್ಧೆಗೆ ಪುನರ್ಜನ್ಮ ನೀಡಿದ ಬೇಲೂರು ಮಹಿಳೆಯ ಹೃದಯವೃದ್ಧೆಗೆ ಪುನರ್ಜನ್ಮ ನೀಡಿದ ಬೇಲೂರು ಮಹಿಳೆಯ ಹೃದಯ

mandya

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 'ಜೀವ ಸಾರ್ಥಕತೆ' ಸಹಯೋಗದಲ್ಲಿ ಶುಕ್ರವಾರ ಅಂಗಾಂಗದಾನ ಮತ್ತು ಕಸಿ ಯಶ್ವಸ್ವಿಯಾಗಿದೆ. ರೈತನ ಕುಟುಂಬದವರ ಒಪ್ಪಿಗೆ ಪಡೆದು, ಅಂಗಾಂಗಗಳನ್ನು ದಾನ ಮಾಡಲಾಗಿದೆ.

46 ವರ್ಷದ ಮಹಿಳೆಗೆ ಹೃದಯ ದಾನ ಮಾಡಿದ 27ರ ಯುವಕ46 ವರ್ಷದ ಮಹಿಳೆಗೆ ಹೃದಯ ದಾನ ಮಾಡಿದ 27ರ ಯುವಕ

ರಾಜು ಅವರು ಫೆ.17ರಂದು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಯಶವಂತಪುರದ ಸ್ಪರ್ಶ್ ಸೂಪರ್ ಸೆಷ್ಪಾಲಿಟಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಣೆ ಮಾಡಿದ್ದರು.

English summary
39 year old farmer Raju who injured in road accident and announced brain dead donated organs. Raju from Mandya district and injured in bike accident on February 17, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X