ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ

|
Google Oneindia Kannada News

ಬೆಂಗಳೂರು, ಮೇ 10; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಬೆಡ್ ಸಮಸ್ಯೆ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಬಿಬಿಎಂಪಿ ಕೋವಿಡ್ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಕೋವಿಡ್ ರೋಗಿಗಳಿಗೆ ಸಹಾಯಕವಾಗಲು ಯಲಹಂಕ ವಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ 380 ಹಾಸಿಗೆಗಳ ಹೊಸ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಬಿಜೆಪಿ ಶಾಸಕ ಮತ್ತು ಯಲಹಂಕ ವಲಯದ ಕೋವಿಡ್ ಉಸ್ತುವಾರಿಯಾದ ವಿಶ್ವನಾಥ್ ಮತ್ತು ಶಾಸಕ ಕೃಷ್ಣಭೈರೇಗೌಡ ಮತ್ತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಕೇಂದ್ರವನ್ನು ಉದ್ಘಾಟಿಸಿದರು.

ಬೆಂಗಳೂರು; 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಉದ್ಘಾಟನೆಬೆಂಗಳೂರು; 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಉದ್ಘಾಟನೆ

ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ 80 ಹಾಸಿಗೆಗಳು ಪುರುಷರಿಗೆ, 80 ಮಹಿಳೆಯರಿಗೆ ಮೀಸಲಾಗಿವೆ. 170 ಸಾಮಾನ್ಯ ಹಾಗೂ 50 ಆಮ್ಲಜನಕಯುಕ್ತ ಹಾಸಿಗೆ‌ಗಳನ್ನು ಕೇಂದ್ರ ಹೊಂದಿದೆ.

ಕೋವಿಡ್ ವಾರ್‌ ರೂಮ್‌: 17 ಮಂದಿ ಮುಸ್ಲಿಂ ನೌಕರರ ಮರುನೇಮಕ? ಕೋವಿಡ್ ವಾರ್‌ ರೂಮ್‌: 17 ಮಂದಿ ಮುಸ್ಲಿಂ ನೌಕರರ ಮರುನೇಮಕ?

380 Bed Covid Care Centre Inaugurated At Yelahanka

ಶೀಘ್ರದಲ್ಲೇ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳನ್ನು ಈ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಈ ಕೇಂದ್ರ ಬಿಬಿಎಂಪಿಗೆ ಸಹಾಯಕವಾಗಲಿದೆ, ನಗರದಲ್ಲಿನ ಬೆಡ್‌ಗಳ ಮೇಲಿನ ಅವಲಂಬನೆ ಸ್ವಲ್ಪ ಕಡಿಮೆಯಾಗಲಿದೆ.

ಏನಿದು ಡಿಆರ್‌ಡಿಒ Anti-ಕೋವಿಡ್ ಡ್ರಗ್ಸ್? ಹೇಗೆ ಉಪಯುಕ್ತ? ಏನಿದು ಡಿಆರ್‌ಡಿಒ Anti-ಕೋವಿಡ್ ಡ್ರಗ್ಸ್? ಹೇಗೆ ಉಪಯುಕ್ತ?

ಭಾನುವಾರದ ಮಾಹಿತಿಯಂತೆ ಬೆಂಗಳುರು ನಗರದಲ್ಲಿ 20,897 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,50,370ಕ್ಕೆ ಏರಿಕೆಯಾಗಿದೆ.

Recommended Video

Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಲಾಕ್ ಡೌನ್ ಜಾರಿಗೆ ಬಂದಿದ್ದು, ಮೇ 24ರ ತನಕ ಜಾರಿಯಲ್ಲಿರಲಿದೆ.

English summary
The 380 bed Covid Care Centre Inaugurated at GKVK campus in Yelahanka zone, Bengaluru. Centre has 170 general & 50 oxygenated beds. More oxygenated beds will be added shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X