ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಟ್ಟು 37 ಮೆಟ್ರೋ ನಿಲ್ದಾಣಗಳ ಮರು ನಾಮಕರಣಕ್ಕೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ನವೆಂಬರ್ 19: ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಬರುವ 93 ನಿಲ್ದಾಣಗಳ ಪೈಕಿ 37 ನಿಲ್ದಾಣಗಳಿಗೆ ಹೆಸರು ದೊರೆತಿದೆ.

ಎರಡನೇ ಹಂತದ ಫೇಸ್ 2ಎ ಹಾಗೂ 2ಬಿ ನಿರ್ಮಾಣ ಕಾಮಗಾರಿ ಹಲವು ಬಾರಿ ಡೆಡ್‌ಲೈನ್‌ಗಳನ್ನು ದಾಟಿ ಮುಂದೆ ಹೋಗಿದ್ದರೂ ಕೂಡ ಇನ್ನೂ ಕಾಮಗಾರಿ ಮುಕ್ತಾಯಗೊಂಡಿಲ್ಲ.

ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರಿಗಿರುವ ಸಾಮ್ಯತೆ ಏನು?ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರಿಗಿರುವ ಸಾಮ್ಯತೆ ಏನು?

ಈ ಮಾರ್ಗದ ಒಟ್ಟು 93 ನಿಲ್ದಾಣಗಳ ಪೈಕಿ 37 ನಿಲ್ದಾಣಗಳಿಗೆ ಹೊಸ ಹೆಸರಿಗೆ ಅನುಮೋದನೆ ದೊರೆತಿದೆ. ಹೊಸ ಹೆಸರುಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ನವೆಂಬರ್ 11 ರಂದು ಇದಕ್ಕೆ ಅನುಮೋದನೆ ದೊರೆತಿದೆ.

37 Namma Metro stations Gets New Name

ಜೂನ್‌ನಲ್ಲಿ 42 ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಒಪ್ಪಿಗೆ ದೊರೆತಿತ್ತು.ಬಿಎಂಆರ್‌ಸಿಎಲ್ ಇನ್‌ಫೋಸಿಸ್ ಫೌಂಡೇಶನ್ ಜೊತೆಯಲ್ಲಿ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಟ್ರಂಪೆಟ್ ಇಂಟರ್‌ಚೇಂಜ್‌ಗೆ ದೊಡ್ಡಜಾಲ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗುತ್ತಿದೆ.

ಇನ್ನು ತುಮಕೂರು ರಸ್ತೆಯ ಜಿಂದಾಲ್‌ ಸ್ಟೇಷನ್‌ಗೆ ಚಿಕ್ಕಬಿದರಕಲ್ಲು ಎಂದು ನಾಮಕರಣ ಮಾಡಲಾಗುತ್ತಿದೆ. ಹಾಗೆಯೇ ಆರ್‌ವಿ ರಸ್ತೆಯ ನಿಲ್ದಾಣವು ಪಟ್ಟಣಗೆರೆ ಎಂದು ಮರು ನಾಮಕರಣವಾಗಲಿದೆ.

ಹಳೆಯ ಹೆಸರು -ಹೊಸ ಹೆಸರು

ದೊಡ್ಡನೆಕ್ಕುಂದಿ- ಹೂಡಿ ಜಂಕ್ಷನ್
ವೈದೇಹಿ ಆಸ್ಪತ್ರೆ- ನಲ್ಲೂರಹಳ್ಳಿ
ಸತ್ಯಸಾಯಿ ಆಸ್ಪತ್ರೆ- ಸದರಮಂಗಲ
ಐಟಿಪಿಎಲ್ - ಪಟ್ಟಂದೂರು ಅಗ್ರಹಾರ
ಬೆಂಗಳೂರು ಯೂನಿವರ್ಸಿಟಿ ಕ್ರಾಸ್-ಜ್ಞಾನಭಾರತಿ
ಬಿಐಇಸಿ ಟರ್ಮಿನಲ್-ಮಾದವಾರ
ಎಚ್‌ಎಸ್‌ಆರ್ ಲೇಔಟ್-ಬೊಮ್ಮನಹಳ್ಳಿ
ಆಕ್ಸ್‌ಫರ್ಡ್ ಕಾಲೇಜು- ಹೊಂಗಸಂದ್ರ
ಗೊಟ್ಟಿಗೆರೆ-ಕಾಳೇನ ಅಗ್ರಹಾರ
ಮೈಕೊ ಇಂಡಸ್ಟ್ರೀಸ್-ಲಕ್ಕಸಂದ್ರ
ವೆಲ್ಲಾರ-ರಾಷ್ಟ್ರೀಯ ಮಿಲಿಟರಿ ಸ್ಕೂಲ್
ಮಹಾದೇವಪುರ-ಸರಸ್ವತಿನಗರ

English summary
37 of the 93 Proposed Namma Metro Stations are already getting New Names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X