ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು

|
Google Oneindia Kannada News

ಬೆಂಗಳೂರು, , ಜ.4 : ಬೆಂಗಳೂರು ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ನಗರದಾದ್ಯಂತ 3500 ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕ್ಯಾಮರಾಗಳು 2 ಕಿ.ಮೀ. ವ್ಯಾಪ್ತಿಯ ಕಾರ್ಯಚಟುವಟಿಕೆಗಳನ್ನು ಸೆರೆಹಿಡಿಯಲಿವೆ.

ವಿಧಾನಸೌಧ, ಹೈಕೋರ್ಟ್, ಎಂ.ಎಸ್.ಕಟ್ಟಡ, ಸರ್ಕಾರಿ ಕಚೇರಿಗಳು, ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಇಸ್ರೋ, ಎಚ್‌ಎಎಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳ ಸುತ್ತಮುತ್ತ ಸಿಸಿ ಕ್ಯಾಮರಾ ಕಣ್ಣಿಡಲಿದೆ.[ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ]

cctv

ನಗರದಾದ್ಯಂತ ಅಳವಡಿಕೆಯಾಗುವ ಸಿಸಿ ಕ್ಯಾಮರಾಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಫೆಬ್ರವರಿ ಮೊದಲ ವಾರದಲ್ಲೇ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ದೆಹಲಿ ಮತ್ತು ಮುಂಬೈ ಮಾದರಿಯಲ್ಲೇ ಕ್ಯಾಮಾರಾಗಳ ಕಣ್ಣು ಬೆಂಗಳೂರನ್ನು ಕಾಯಲಿದೆ.[ಬೆಂಗಳೂರು ಸ್ಫೋಟದ ಹೊಣೆ ಹೊತ್ತಿದ್ದ ಅಬ್ದುಲ್ ಪೊಲೀಸರಿಗೆ ಸಿಕ್ಕ!]

ಇದರೊಂದಿಗೆ ಪೊಲೀಸ್ ಠಾಣೆಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಜನನಿಬಿಡ ಪ್ರದೇಶ, ಬಾರ್ ಅಂಡ್ ರೆಸ್ಟೋರೆಂಟ್ ಬಳಿಯೂ ಕ್ಯಾಮರಾ ಅಳವಡಿಸುವಂತೆ ಗೃಹ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ಒಟ್ಟಿನಲ್ಲಿ ಜನರ ಹಿತ ಕಾಯಲು ಪೊಲೀಸ್ ಇಲಾಖೆ ಮುಂದಾಗಿದ್ದು ಕಾರ್ಯಕ್ರಮದ ಅನುಷ್ಠಾನ ಯಾವ ರೀತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.

English summary
All popular areas of Bengaluru will have a strong surveillance with the police set to install over 3,500 CCTV cameras across the city. The police seem to learnt the importance of CCTV the hard way, as officials investigating the Church Street blast have been struggling for clues in the absence of any footage from the blast site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X