ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಗೋಲ್‌ಮಾಲ್: ಉಪ ಕಾರ್ಯದರ್ಶಿ ವಿರುದ್ಧ ಆರೋಪ

|
Google Oneindia Kannada News

ಬೆಂಗಳೂರು, ಮೇ 13: ಬಿಡಿಎಯಲ್ಲಿ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 35 ನಿವೇಶನಗಳ ಖಾತಾವನ್ನು ತಡೆಹಿಡಿಯಲಾಗಿದೆ.

ಅಕ್ರಮ ಸೈಟು ಹಂಚಿಕೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಉಪ ಕಾರ್ಯದರ್ಶಿ-4 ಎಚ್‌ಎಸ್ ಸತೀಶ್ ಬಾಬು ನೋಟಿಸ್‌ಗೆ ಸಮಜಾಯಿಷಿ ನೀಡಿಲ್ಲ ಹಾಗಾಗಿ ಅಷ್ಟೂ ಸೈಟ್‌ಗಳ ಖಾತಾಗಳಿಗೆ ತಡೆ ಹಿಡಿಯಲಾಗಿದೆ.

ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

ಟ್ರಿನಿಟಿ ಸಂಘಕ್ಕೆ ಅರ್ಕಾವತಿ ಬಡಾವಣೆಯಲ್ಲಿ ನೀಡಿರುವ ಬದಲಿ ಸೈಟ್‌ಗಳಿಗೆ ಕಾನೂನು ಮಾನ್ಯತೆ ಲಭ್ಯವಾಗಿಲ್ಲ. ಹೈಕೋರ್ಟ್ ಆದೇಶವಿದ್ದರೂ ಕೂಡ ಹಂಚಿಕೆ ವೇಳೆ ನಿಯಮಾವಳಿಗಳನ್ನು ಪಾಲಿಸಿಲ್ಲ.

35 illegal sit distributed has been stalled

ಸರ್ಕಾರದ ಗಮನಕ್ಕೆ ತರದೆ ಅವರಿಗೆ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲು ಸತೀಶ್‌ ಬಾಬುಗೆ ಅಧಿಕಾರ ನೀಡಿರಲಿಲ್ಲ. ಈ ಮಧ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ತನಿಖೆಯನ್ನು ಪ್ರಾಧಿಕಾರದ ಎಸ್ಪಿ ವಹಿಸಲಾಗಿದೆ.

35 ಸೈಟ್‌ಗಳನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ಹಂಚಿಕೆ ಮಾಡಲಾಗಿದೆ. ಜೊತೆಗೆ ಅಷ್ಟೂ ಸೈಟ್‌ಗಳನ್ನು ಸಂಘದ ಸದಸ್ಯರಿಗೆ ಓಂದಣಿ ಮಾಡಿಕೊಡಲಾಗಿದೆ.

ಬಿಡಿಎ ಸೂಪರಿಂಟೆಂಡೆಂಟ್ ಕೆವಿ ರವಿಶಂಕರ್ ಉಪ ಕಾರ್ಯದರ್ಶಿ ಸತೀಶ್ ಬಾಬು ಮೇಲೆ ಆರೋಪ ಹೊರಿಸಿದ್ದಾರೆ.

ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ

ಪ್ರತಿ ಚದರ ಅಡಿಗೆ ಕೇವಲ 59 ರೂ ಅಭಿವೃದ್ಧಿ ಶುಲ್ಕ ಪಡೆದಿರುವುದರಿಂದ ಪ್ರಾಧಿಕಾರಕ್ಕೆ ನಷ್ಟವಾಗಿದೆ. ಆರೋಪಕ್ಕೆ ಗುರಿಯಾಗಿರುವ ಸತೀಶ್ ಬಾಬು ನಿರ್ವಹಿಸುತ್ತಿದ್ದ ಹುದ್ದೆಯನ್ನು ನವೀನ್ ಜೋಸೆಫ್‌ಗೆ ವಹಿಸಿಕೊಡಲಾಗಿದೆ.

English summary
Bengaluru Development Authority stalled 35 sites distribution after it came to the limelight that there were some irregularities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X