ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಹೊಸ್ತಿಲಲ್ಲಿ 32 ಐಪಿಎಸ್ ಅಧಿಕಾರಿಗಳ ವರ್ಗ ಮಾಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಲೋಕಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳಿದ್ದಾಗ ರಾಜ್ಯ ಸರ್ಕಾರವು 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

18 ಐಪಿಎಸ್ ಅಧಿಕಾರಿಗಳನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದರೆ, 14 ಅಧಿಕಾರಿಗಳನ್ನು ಬೆಂಗಳೂರಿನಿಂದ ಹೊರಕ್ಕೆ ವರ್ಗಾವಣೆ ಮಾಡಲಾಗಿದೆ.

ಬಿ.ದಯಾನಂದ ಅವರನ್ನು ಗುಪ್ತಚರಿಲಾಖೆಯ ಐಜಿಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ. ಅಮರ್ ಕುಮಾರ್ ಪಾಂಡೆ ಅವರನ್ನು ರಾಜ್ಯ ಮಾನವ ಹಕ್ಕು ಆಯೋಗದ ಎಡಿಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಮೈಸೂರು ದಕ್ಷಿಣ ಭಾಗದ ಐಜಿಪಿ ಆಗಿದ್ದ ಕೆ.ವಿ.ಶರತ್ ಚಂದ್ರ ಅವರನ್ನು ಬೆಂಗಳೂರು ಸೆಂಟ್ರಲ್ ಐಜಿಪಿ ಆಗಿ ನೇಮಿಸಲಾಗಿದೆ.

32 IPS officers transferd by state government

ಇಶಾಂತ್ ಪಂತ್ ಅವರನ್ನು ಬೆಂಗಳೂರು ದಕ್ಷಿಣ ಡಿಸಿಪಿ ಆಗಿ ವರ್ಗಮಾಡಲಾಗಿದೆ, ಚೇತನ್ ಸಿಂಗ್ ರಾಥೋಡ್ ಅವರನ್ನು ವಿಧಿವಿಜ್ಞಾನ ವಿಭಾಗದ ನಿರ್ದೇಶಕರ ಹುದ್ದೆಗೆ ವರ್ಗ ಮಾಡಲಾಗಿದೆ. ಎನ್ ಶಶಿಕುಮಾರ್ ಅವರನ್ನು ಬೆಂಗಳೂರು ಉತ್ತರಕ್ಕೆ ಡಿಸಿಪಿ ಆಗಿ ವರ್ಗ ಮಾಡಲಾಗಿದೆ, ಎಂಬಿ ಬೋರಲಿಂಗಯ್ಯ ಅವರನ್ನು ಗುಪ್ತಚರ ಇಲಾಖೆ ಎಸ್‌ಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ, ಎಚ್‌.ಎಸ್.ರೇವಣ್ಣ ಅವರನ್ನು ಕಾರಾಗೃಹ ಐಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಪಿಎಸ್‌ ಹರ್ಷವರ್ಧನ್ ಅವರನ್ನು ರಾಜ್ಯ ರಸ್ತೆ ಸಾರಿಗೆ ಭದ್ರತೆ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಅಭಿನವ್ ಖರೆ ಅವರನ್ನು ಹೋಮ್‌ಗಾರ್ಡ್ಸ್‌ ವಿಭಾಗದ ಎಸ್‌ಪಿ ಸ್ಥಾನಕ್ಕೆ ನೇಮಿಸಲಾಗಿದೆ, ಕಾರ್ತಿಕ್ ರೆಡ್ಡಿ ಅವರನ್ನು ಅಪರಾಧ ವಿಭಾಗಕ್ಕೆ ಎಐಜಿಪಿ ಆಗಿ ವರ್ಗ ಮಾಡಲಾಗಿದೆ.

ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಅಪರಾಧ ತನಿಖಾ ವಿಭಾಗದ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ, ಲಕ್ಷ್ಮಣ್ ನಿಂಬರ್ಗಿ ಅವರನ್ನು ಪೊಲೀಸ್ ಸಂಪರ್ಕ (ವೈರ್ಲೆಸ್‌) ವಿಭಾಗದ ಎಸ್‌ಪಿ ಆಗಿ ವರ್ಗ ಮಾಡಲಾಗಿದೆ, ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಗುಪ್ತಚರ ಇಲಾಖೆ ಡಿಐಜಿಪಿ ಆಗಿ ವರ್ಗ ಮಾಡಲಾಗಿದೆ.

ಟಿ.ಆರ್.ಸುರೇಶ್ ಅವರಿಗೆ ಸಿಎಆರ್‌ ನ ಜಂಟಿ ಆಯುಕ್ತ ಸ್ಥಾನ ನೀಡಲಾಗಿದೆ. ಎನ್ ವಿಷ್ಣುವರ್ಧನ ಅವರನ್ನು ಗುಪ್ತಚರ ಇಲಾಖೆ ಡಿಸಿಪಿ ಆಗಿ ವರ್ಗಾಯಿಸಲಾಗಿದೆ, ರಾಜೇಂದ್ರ ಪ್ರಸಾದ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ ಅನ್ನಾಗಿ ನೇಮಿಸಲಾಗಿದೆ.

English summary
State government transgerd 32 IPS officers ahed of Lok Sabha elections 2019. 18 were posted to Bengaluru, 14 were t other cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X