ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಪ್ರತಿನಿತ್ಯ ನಡೆಯುವ ಕೊವಿಡ್ ತಪಾಸಣೆ ಸಂಖ್ಯೆ ಎಷ್ಟು?

|
Google Oneindia Kannada News

ಬೆಂಗಳೂರು, ಜುಲೈ.16: ಕರ್ನಾಟಕದಲ್ಲಿ ಕೊರೊನಾವೈರಸ್ ಅಟ್ಟಹಾಸ ಮೆರೆಯುತ್ತಿರುವುದಕ್ಕೆ ತಪಾಸಣೆಯಲ್ಲಿನ ವಿಳಂಬವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ.

Recommended Video

Jio 5G, Jio tv+, Jio AR glasses and much more | Oneindia Kannada

ಬುಧವಾರ ಒಂದೇ ದಿನ ರಾಜ್ಯದಲ್ಲಿ 22,400 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಡ್, ಐಸಿಯು ಇಲ್ಲ ಎಂದು ಚಿಕಿತ್ಸೆ ಕೊಡದ ಆಸ್ಪತ್ರೆ ಲೈಸನ್ಸ್ ರದ್ದು!ಬೆಡ್, ಐಸಿಯು ಇಲ್ಲ ಎಂದು ಚಿಕಿತ್ಸೆ ಕೊಡದ ಆಸ್ಪತ್ರೆ ಲೈಸನ್ಸ್ ರದ್ದು!

ಬೆಂಗಳೂರು ಇಂದಿರಾನಗರದಲ್ಲಿ ಇರುವ ಸಿ.ವಿ.ರಾಮನ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಅವರು, ಮುಂದಿನ ಎರಡನ್ಮೂರು ವಾರಗಳಲ್ಲಿ ಪ್ರತಿನಿತ್ಯ ಕೊವಿಡ್ ತಪಾಸಣೆ ಸಂಖ್ಯೆಯನ್ನು 30 ರಿಂದ 40 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ ಎಂದರು.

30 To 40 Thousand Covid Test Daily After Two-Three Weeks: Dr K Sudhakar

ಪ್ಲಾಸ್ಮಾ ದಾನ ಮಾಡುವುದಕ್ಕೆ ಸಚಿವರ ಮನವಿ:

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ಅಗತ್ಯವಾಗಿದೆ. ಈಗಾಗಲೇ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ಹೆಚ್ಚು ಹೆಚ್ಚಾಗಿ ದಾನ ಮಾಡಬೇಕು. ಹೀಗೆ ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದ ವತಿಯಿಂದ 5,000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

English summary
30 To 40 Thousand Covid Test Daily After Two-Three Weeks: Dr K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X