ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ 30 ಲಕ್ಷ ಉದ್ಯೋಗ ನಷ್ಟ: ಸಚಿವ ಸಿ.ಟಿ. ರವಿ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾರ್ಚ್‌ ಮಧ್ಯದಿಂದ ಸುಮಾರು 30 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗುರುವಾರ ಹೇಳಿದ್ದಾರೆ.

Recommended Video

Lakshmi Hebbalkar, ಕೆಲವು ದಿನದ ಹಿಂದೆ ಮಗ.. ಈ ವಾರ ಮಗಳ ಸಿಹಿಸುದ್ಧಿ | Oneindia Kannada

''ಕೊರೊನಾವೈರಸ್ ಸಾಂಕ್ರಾಮಿಕ ಮಾರ್ಚ್‌ ಮಧ್ಯದಲ್ಲಿ ರಾಜ್ಯದಲ್ಲಿ ಹೆಚ್ಚಾದ ನಂತರ ಸುಮಾರು 30 ಲಕ್ಷ ಜನರ ಜೀವನೋಪಾಯವನ್ನು ಕಸಿದುಕೊಂಡಿದೆ ಮತ್ತು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ, ಏಕೆಂದರೆ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಮತ್ತು ನಿರ್ಬಂಧಗಳೊಂದಿಗೆ ಅದರ ವಿಸ್ತರಣೆಯು ಪ್ರವಾಸೋದ್ಯಮ ಕ್ಷೇತ್ರವನ್ನು ಕುಂಠಿತಗೊಳಿಸಿದೆ" ಎಂದು ಬೆಂಗಳೂರಿನಲ್ಲಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

25,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಕ್ಸೆಂಚರ್25,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಕ್ಸೆಂಚರ್

ಮಾರ್ಚ್ 25 ರಿಂದ ಹಠಾತ್ತನೆ ಲಾಕ್‌ಡೌನ್ ಜಾರಿಯಾಗಿ ಇದು ಮೇ 31 ರವರೆಗೆ ವಿಸ್ತರಣೆಗೊಂಡಿದೆ ಮತ್ತು ರೋಗವನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣ, ಸಾರಿಗೆ ಮೇಲಿನ ನಿರ್ಬಂಧಗಳನ್ನು ಮುಂದುವರೆಸುವುದು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ರಾಜ್ಯಕ್ಕೆ ಬರುವುದನ್ನು ತಡೆದಿದೆ.

30 lakh people in tourism sector lost their jobs across Karnataka due to COVID-19: Minister CT Ravi

"ದೇಶಾದ್ಯಂತ ಕೃಷಿ ಮತ್ತು ನಿರ್ಮಾಣದ ನಂತರ ಅತಿ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸುವ ಅತಿದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿ, ಸಾಂಕ್ರಾಮಿಕ ರೋಗದಿಂದಾಗಿ ಪ್ರವಾಸೋದ್ಯಮವು ಹೆಚ್ಚು ನಷ್ಟವನ್ನು ಅನುಭವಿಸಿದೆ" ಎಂದು ರವಿ ವಿಷಾದ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ನಷ್ಟವನ್ನು ಅನುಭವಿಸಿದವರಲ್ಲಿ ನೂರಾರು ಪ್ರವಾಸಿ ನಿರ್ವಾಹಕರು, ಟ್ಯಾಕ್ಸಿ ಚಾಲಕರು, ಹೋಟೆಲ್ ಮಾಲೀಕರು, ಪ್ರವಾಸಿ ಮಾರ್ಗದರ್ಶಿಗಳು ಮತ್ತು ಪೂರೈಕೆ ಸರಪಳಿಯಲ್ಲಿರುವವರೆಲ್ಲರೂ ಸೇರಿದ್ದಾರೆ ಎಂದಿದ್ದಾರೆ.

ರಸ್ತೆ, ರೈಲು ಮತ್ತು ವಿಮಾನ ಸೇವೆಗಳು ಸಂಪೂರ್ಣವಾಗಿ ಪುನರಾರಂಭಗೊಂಡರೆ, ಪ್ರವಾಸೋದ್ಯಮ ಕ್ಷೇತ್ರವು ಮತ್ತೆ ಪುಟಿದೇಳುತ್ತದೆ ಮತ್ತು ಸಂಕಷ್ಟದಲ್ಲಿರುವವರು ತಮ್ಮ ಉದ್ಯೋಗವನ್ನು ಮರಳಿ ಪಡೆಯುತ್ತಾರೆ ಎಂದು ಸಚಿವ ಸಿ.ಟಿ. ರವಿ ಆಶಿಸಿದ್ದಾರೆ

English summary
About 30 lakh people in the tourism sector lost their jobs across Karnataka due to the COVID-19 pandemic since mid-March, Karnataka Tourism Minister CT Ravi said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X