ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ವರ್ಷದಲ್ಲಿ ಬೆಂಗಳೂರಲ್ಲಿ ಸಬ್‌ಅರ್ಬನ್ ರೈಲು ಸಂಚಾರ: ಮಾರ್ಗಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಇನ್ನು ಮೂರೇ ವರ್ಷದಲ್ಲಿ ಬೆಂಗಳೂರಲ್ಲಿ ಉಪನಗರ ರೈಲು ಸಂಚರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಸಬ್‌ಸರ್ಬನ್ ರೈಲು ಯೋಜನೆ ಘೋಷಿಸಿದ್ದು ಅಂದಾಜು ವೆಚ್ಚ 18 ಸಾವಿರ ಕೋಟಿ ರೂ ನಿಗದಿಪಡಿಸಿದೆ.

ಕೇಂದ್ರ ಬಜೆಟ್‌ 2020: ಬೆಂಗಳೂರಿಗೆ ಸಿಕ್ಕಿದ್ದೇನು?ಕೇಂದ್ರ ಬಜೆಟ್‌ 2020: ಬೆಂಗಳೂರಿಗೆ ಸಿಕ್ಕಿದ್ದೇನು?

ಮುಂದಿನ ಮೂರು ವರ್ಷಗಳಲ್ಲಿ ರೈಲನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆ ಅನುಷ್ಠಾನಗೊಳ್ಳಬೇಕೆಂಬುದು ದಿವಂಗತ ಅನಂತಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಅನೇಕ ಬಾರಿ ಪ್ರಯತ್ನ ನಡೆಸಿದ್ದರು.

ನಾಲ್ಕು ಪ್ರಮುಖ ಮಾರ್ಗಗಳು

ನಾಲ್ಕು ಪ್ರಮುಖ ಮಾರ್ಗಗಳು

-ಬೈಯಪ್ಪನಹಳ್ಳಿ-ಬಾಣಸವಾಡಿ-ಯಶವಂತಪುರ 25.1 ಕಿ.ಮೀ
-ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್‌-35.52 ಕಿ.ಮೀ
-ಮಾಗಡಿ ರಸ್ತೆ-ಯಶವಂತಪುರ-ಯಲಹಂಕ-ವಿಮಾನ ನಿಲ್ದಾಣ-41.4 ಕಿ.ಮೀ
-ಹೀಲಲಿಗೆ-ಬೈಯಪ್ಪನಹಳ್ಳಿ-ಯಲಹಂಕ-ರಾಜಾನುಕುಂಟೆ 46.24 ಕಿ.ಮೀ.

ಒಟ್ಟು 57 ರೈಲುಗಳ ನಿರ್ಮಾಣ

ಒಟ್ಟು 57 ರೈಲುಗಳ ನಿರ್ಮಾಣ

ಒಟ್ಟು 57 ಸಬ್‌ಸರ್ಬನ್ ರೈಲುಗಳನ್ನು ನಿರ್ಮಿಸಲಾಗುತ್ತಿದೆ. ಸಬ್‌ಅರ್ಬನ್ ರೈಲುಗಳು ಬೆಳಗ್ಗೆ 5ರಿಂದ ಮಧ್ಯರಾತ್ರಯವರೆಗೂ ಸಂಚರಿಸಲಿದೆ. ಈ ರೈಲು ಹವಾನಿಯಂತ್ರಿತ ಬೋಗಿ ಒಳಗೊಂಡಿರುತ್ತದೆ. 57 ರೈಲು ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ 103 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

55 ಕಿ.ಮೀ ಎಲಿವೇಟೆಡ್ ಮಾರ್ಗ

55 ಕಿ.ಮೀ ಎಲಿವೇಟೆಡ್ ಮಾರ್ಗ

ಬೆಂಗಳೂರು ಹೊರವರ್ತುಲ ರಸ್ತೆಯಂತೆ ನಗರದ ಸುತ್ತಲೂ 148.17 ಕಿ.ಮೀ ರೈಲು ಮಾರ್ಗ ನಿರ್ಮಾಣ ಸಬ್ಅರ್ಬನ್ ರೈಲು ಯೋಜನೆಯಲ್ಲಿದೆ. ಈ ಮಾರ್ಗದಲ್ಲಿ 55 ಕಿ.ಮೀ ಮಾರ್ಗವು ಎಲಿವೇಟೆಡ್ ಆಗಿರಲಿದೆ.

ಉಪನಗರ ರೈಲು ಅಪ್ಪಟ ಬಡವರ ರೈಲು

ಉಪನಗರ ರೈಲು ಅಪ್ಪಟ ಬಡವರ ರೈಲು

ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಈ ಹಿಂದೆಯೇ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕಳಿದ ಕೆಲವು ಮಾಹಿತಿಯನ್ನು ರಾಜ್ಯ ಸರ್ಕಾರ ನೀಡದ ಕಾರಣ ವಿಳಂಬವಾಯಿತು. ಈಗ ಸಂಸದರು, ಅಧಿಕಾರಿಗಳು ಹಾಗೂ ತಾವು ಯೋಜನೆ ಜಾರಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ಸಹ ಈ ಕೆಲಸ ಮಾಡಿವೆ. ಒಟ್ಟಾರೆ ಈಗ ಆಯವ್ಯಯದಲ್ಲಿ ಯೋಜನೆ ಅನುಷ್ಠಾನಕ್ಕೆ ಘೋಷಿಸಿರುವುದರಿಂದ ತ್ವರಿತವಾಗಿ ಯೋಜನೆ ಕಾಮಗಾರಿ ಆರಂಭಗೊಳ್ಳಬೇಕಿದೆ. ಇದು ಅಪ್ಪಟ ಬಡವರ ರೈಲು ಎಂದು ಹೇಳಿದರು.

English summary
Chief Minister BS Yediyurappa said Bengaluru's Suburban Rail project will be taken up priority and will be completed within 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X