ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಗೆ ಮಕ್ಕಳಿಲ್ಲ ಎಂದು ಯಾರದ್ದೋ ಮಗುವನ್ನು ಅಪಹರಿಸಿದ ಕಳ್ಳರು

|
Google Oneindia Kannada News

ಬೆಂಗಳೂರು, ಏ.19: ಮಕ್ಕಳಿಲ್ಲವೆಂದರೆ ಸಾಮಾನ್ಯವಾಗಿ ದಂಪತಿಗಳಿಗೆ ಬೇಸರ ಇದ್ದೇ ಇರುತ್ತದೆ ಹಾಗೆಂದ ಮಾತ್ರಕ್ಕೆ ಯಾರದ್ದೋ ಮಗುವನ್ನು ಅಪಹರಿಸುವುದು ಎಷ್ಟರ ಮಟ್ಟಿಗೆ ಸರಿ? ಮಕ್ಕಳಿಲ್ಲವೆಂದು ಮೂರು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಸಂಪಿಗೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿ ಮಂಜುನಾಥ್(29) ಹಾಗೂ ವರ್ತೂರು ಹೋಬಳಿ ಗುಂಜೂರು ಪಾಳ್ಯದ ಎಚ್. ರಮೇಶ್(33) ಆರೋಪಿಗಳು.

ಸಂಬಳ ಕೊಡದ ಕಂಪನಿ ಮಾಲಿಕ 2 ಬಾರಿ ಕಿಡ್ನ್ಯಾಪ್ಸಂಬಳ ಕೊಡದ ಕಂಪನಿ ಮಾಲಿಕ 2 ಬಾರಿ ಕಿಡ್ನ್ಯಾಪ್

ಮೂರು ವರ್ಷದ ಮಗು ಮಮತಾ ತಿಂಡಿ ತರಲು ಅಂಗಡಿಗೆ ಹೋಗಿ ವಾಪಸ್ ಬರಲೇ ಇಲ್ಲ, ಎಲ್ಲಾ ಕಡೆಯೂ ವಿಚಾರಿಸಿ ನೋಡಾಯಿತು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು.

3 year old Girl baby kidnapped, police saved her

ಬಾಲಕಿ ಕಾಣೆಉಆಗಿದ್ದ ಸ್ಥಳಕ್ಕೆ ತೆರಳಿದ ಪೊಲೀಸರು, ಸಮೀಪದ ಕಟ್ಟಡದಲ್ಲಿನ ಸಿಸಿ ಕ್ಯಮಾರಾ ಪರಿಶೀಲನೆ ನಡೆಸಿದ್ದರು. ಈ ವೇಳೆ ಕಟ್ಟಡವೊಂದರಲ್ಲಿ ಸಿಸಿ ಕ್ಯಾಮರಾದಲ್ಲಿ ಇಬ್ಬರು ಹೆಲ್ಮೆಟ್ ಧಾರಿಗಳು ಬಾಲಕಿಯನ್ನು ಬೈಕ್‌ನ ಮಧ್ಯದಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಸೆರೆಯಾಗಿತ್ತು. ಆದರೆ ವಾಹನದ ಸಂಖ್ಯೆ ಅಸ್ಪಷ್ಟವಾಗಿತ್ತು.

ಈ ಹಿನ್ನೆಲೆಯಲ್ಲಿ ಕ್ಯಾಮರಾದಲ್ಲಿನ ವಿಡಿಯೋ ಲ್ಯಾಬ್‌ಗೆ ಕಳುಹಿಸಿ ಬೈಕ್‌ನ ನೋಂದಣಿ ಸಂಖ್ಯೆ ತಿಳಿಸುವಂತೆ ಮನವಿ ಮಾಡಲಾಗಿತ್ತು. ಅಲ್ಲಿ ಸಿಟಿ-100 ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಗಿತ್ತು.
ಆರೋಪಿಗಳು ಗುಂಜೂರಿನಲ್ಲಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ರಮೇಶ್‌ನನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ ಅಪಹರಣಕ್ಕೆ ತಮಗೆ ಮಕ್ಕಳಿಲ್ಲದಿರುವುದೇ ಕಾರಣ ಎಂದು ತಿಳಿಸಿದ್ದಾರೆ.

English summary
3 year old Girl baby kidnapped by a couple those who dont have children, Police Rescued baby and return her to their original parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X