ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಕ್ಸ್‌ರೇನಲ್ಲಿ ನೋಡಿ ಬಾಲಕನ ಹೊಟ್ಟೆಯಲ್ಲಿ ಗಣೇಶ ವಿಗ್ರಹ ಪತ್ತೆ !

|
Google Oneindia Kannada News

ಬೆಂಗಳೂರು, ಜು. 24: ಮೂರು ವರ್ಷದ ಬಾಲಕನ ಹೊಟ್ಟೆಯಲ್ಲಿ ಗಣೇಶ ವಿಗ್ರಹ ಪತ್ತೆಯಾಗಿದೆ ! ಇದೇನಿದು ದೇವರ ಅವತಾರ ಎಂದು ಅಚ್ಚರಿ ಪಡಬೇಡಿ. ಆಟ ಆಡುತ್ತಿದ್ದ ಮೂರು ವರ್ಷದ ಮಗು ಗಣೇಶನ ಪುಟ್ಟ ವಿಗ್ರಹ ನುಂಗಿ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡಿತ್ತು. ಪೋಷಕರ ಸಮಯ ಪ್ರಜ್ಞೆಯಿಂದ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮೂಲಕ ವಿಗ್ರಹ ಹೊರ ತೆಗೆದು ಜೀವ ಉಳಿಸಿದ್ದಾರೆ.

ಹೌದು ಇಂತಹ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ವರ್ಷದ ಮಗು ಆಟ ಆಡುವ ವೇಳೆ ಗಣೇಶನ ವಿಗ್ರಹವನ್ನು ಆಕಸ್ಮಿಕವಾಗಿ ನುಂಗಿದೆ. ಉಸಿರಾಟಕ್ಕೂ ಒದ್ದಾಡುತ್ತಿದ್ದ ಮಗುವನ್ನು ಗಮನಿಸಿದ ಪೋಷಕರು ಕೂಡಲೇ ಹಳೇ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊದಲು ಎಕ್ಸ್ ರೇ ಮಾಡಿದ ಕೂಡಲೇ ಗಣೇಶನ ವಿಗ್ರಹ ಹೊಟ್ಟೆಯಲ್ಲಿರುವುದು ಗೊತ್ತಾಗಿದೆ. ಒಂದು ಗಂಟೆ ಕಾಲ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮಗುವಿನ ಹೊಟ್ಟೆಯಲ್ಲಿದ್ದ ವಿಗ್ರಹವನ್ನು ವೈದ್ಯ ಶ್ರೀಕಾಂತ್ ಗಣೇಶ್ ಹೊರ ತೆಗೆದು ಜೀವ ಉಳಿಸಿದ್ದಾರೆ.

 Bengaluru: 3 Year old boy who swallowed Ganesha idol Survives after medical intervention by Manipal Hospital

ಎಕ್ಸ್ ರೇ ಮಾಡಿಸಿದಾಗ ಗಂಟಲಲ್ಲಿ ಇದ್ದ ವಿಗ್ರಹ ಹೊಟ್ಟೆಯ ಭಾಗಕ್ಕೆ ಹೋಗಿತ್ತು. ಎಂಡೋಸ್ಕೊಪಿ ಮೂಲಕ ಹೊರ ತೆಗೆಯಲು ಯತ್ನಿಸಲಾಗಿದೆ. ಅನ್ನನಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಈ ವಿಗ್ರಹವನ್ನು ತೆಗೆಯುವುದು ತುಂಬಾ ರಿಸ್ಕ್ ಆಗಿತ್ತು. ಅದನ್ನು ಹೊಟ್ಟೆ ಭಾಗಕ್ಕೆ ತಂದು ಎಂಡೋಸ್ಕೋಪಿ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ದೇಹವನ್ನು ಉಲ್ಟಾ ತಿರುಗಿಸಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದು ಮಗು ಆರೋಗ್ಯವಾಗಿದೆ.

Recommended Video

Olympicsನಲ್ಲಿ ಭಾರತ ಮೊದಲ ದಿನವೇ ಪದಕ ಗೆದ್ದರೆ , ಪಾಕಿಸ್ತಾನ ಮಾಡಿದ ಕೆಲಸ ಇದು | Oneindia Kannada

ಕೆಲ ಕಾಲ ವೀಕ್ಷಣೆ ಮಾಡಿ ಚೇತರಿಸಿಕೊಂಡ ಬಳಿಕ ಮನೆಗೆ ಕಳುಹಿಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಕ್ಕಳು ಆಟ ಆಡುವಾಗ ನುಂಗುವಂತಹ ಚಿಕ್ಕ ವಸ್ತುಗಳನ್ನು ಕೊಡಬಾರದು. ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಮಕ್ಕಳು ಆಟ ಆಡುವಾಗ ಪಾಲಕರು ಎಚ್ಚರಿಕೆ ವಹಿಸಬೇಕು.

English summary
3-year-old boy who swallowed lord Ganesha idol had a miraculous escape after immediate medical intervention by Manipal hospital on Old Airport Road. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X