ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ವಾರದಲ್ಲಿ ಕನ್ನಡಿಗರಲ್ಲಿ ಕಿಚ್ಚುಹೊತ್ತಿಸಿದ ಆ ಮೂರು ಟ್ವೀಟ್ ಗಳು..!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಕಳೆದ ಒಂದು ವಾರಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಮೂರು ಟ್ವೀಟ್ ಗಳು!

ಬಿಹಾರ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮಾಡಿದ ಟ್ವೀಟ್ , ಆ ನಂತರ ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಟ್ವೀಟ್ ಹಾಗೂ ಅದಕ್ಕೆ ಸಂಸದ ಡಿವಿ ಸದಾನಂದ ಗೌಡ ಅವರು ನೀಡಿದ ಪ್ರತಿಕ್ರಿಯೆ ಇವು ಸಾಮಾಜಿಕ ಜಾಲತಾಣಗಳಲ್ಲಿರುವ ಕನ್ನಡಿಗರಲ್ಲಿ ಕಿಚ್ಚುಹೊತ್ತಿಸಿತ್ತು.

ದೇಶದ್ರೋಹಿ ಹೇಳಿಕೆಗೆ ಕ್ಷಮೆ ಕೋರುತ್ತೇನೆ, ಆದರೆ ಹಿಂಪಡೆಯೊಲ್ಲ: ಡಿವಿಎಸ್ದೇಶದ್ರೋಹಿ ಹೇಳಿಕೆಗೆ ಕ್ಷಮೆ ಕೋರುತ್ತೇನೆ, ಆದರೆ ಹಿಂಪಡೆಯೊಲ್ಲ: ಡಿವಿಎಸ್

ಕರ್ನಾಟಕದ ಜನರ ಆಕ್ರೋಶಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿತ್ತು.

ನರೇಂದ್ರ ಮೋದಿ ಟ್ವೀಟ್

ನರೇಂದ್ರ ಮೋದಿ ಟ್ವೀಟ್

"ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸಂತ್ರಸ್ಥರಿಗೆ ನೆರವು ನೀಡಲು ಸ್ಥಳೀಯ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ರಾಜ್ಯಕ್ಕೆ ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೂ ಅದನ್ನು ಮಾಡಲು ಕೇಮದ್ರ ಸಿದ್ಧವಿದೆ" ಎಂದು ಸೆಪ್ಟೆಂಬರ್ 30 ರಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು

ಚಕ್ರವರ್ತಿ ಸೂಲಿಬೆಲೆ ಟ್ವೀಟ್

ಚಕ್ರವರ್ತಿ ಸೂಲಿಬೆಲೆ ಟ್ವೀಟ್

ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಹವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಬೇಸರ ತಂದಿದೆ. ಆದರೆ ಈಗಲೂ ಅವರ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ವಿಶ್ವಸಂಸ್ಥೆಯಲ್ಲಿ ಅವರ ಭಾಷಣ, ಟರ್ಕಿ ವಿಷಯವನ್ನು ಅವರು ನಿರ್ವಹಿಸಿದ ರೀತಿ, ಭಾರತಕ್ಕೆ ಹೂಡಿಕೆದಾರರನ್ನು ಕರೆತರಲು ಅವರು ಮಾಡಿದ ಪ್ರಯತ್ನ ಎಲ್ಲವೂ ಅಸಾಧಾರಣ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.

ಸದಾನಂದ ಗೌಡ ಟ್ವೀಟ್

ಸದಾನಂದ ಗೌಡ ಟ್ವೀಟ್

'ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಎಂದು ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು ಈ ರೀತಿ ಮಾಡುತ್ತಾರೆ. ಈ ಬಗೆಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರಾಂಡ್‌ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‌ಗಳಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಮತ್ತು ಜನರಿಂದ ಬಹಳ ನೋವಾಗಿದೆ' ಎಂದು ಡಿವಿ ಸದಾನಂದಗೌಡ ಟ್ವೀಟ್ ಮಾಡಿದ್ದರು

ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿತ್ತು...

ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿತ್ತು...

ಕನ್ನಡಿಗರಲ್ಲಿ ಈ ಮೂರು ಟ್ವೀಟ್ ಗಳು ಅದೆಷ್ಟು ಕಿಚ್ಚು ಹೊತ್ತಿಸಿದವು ಎಂದರೆ ನೆರೆ ಪರಿಹಾರದ ಸುತ್ತಮುತ್ತಲೇ ಬಂದ ಈ ಟ್ವೀಟ್ ಗಳು ಮೋದಿಯವರ ಅಭಿಮಾನಿಗಳಲ್ಲೇ ಅಸಮಾಧಾನ ಉಂಟುಮಾಡಿತ್ತು. ಬಿಜೆಪಿಯಲ್ಲೇ ಎರಡು ಪಂಗಡಗಳಾದವು. ಸೂಲಿಬೆಲೆ ಪರ ಕೆಲವರು ಬ್ಯಾಟ್ ಮಾಡಿದರೆ ಡಿವಿ ಸದಾನಂದ ಗೌಡ ಅವರ ಪರ ಮತ್ತಷ್ಟು ಜನ ಮಾತನಾಡಿದರು. ಇವರೆಲ್ಲರ

English summary
3 tweets Of PM narendra Modi, DV Sadananda Gowda and Chakravarty Sulibele that Create a Fire in Karnataka and Kannadiga people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X