ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕಕ್ಕೆ 3 ಕೋಟಿ ಲಸಿಕೆ ಆರ್ಡರ್ ಮಾಡಿದ್ದು, ಬಂದಾಗ ಕೊಡುತ್ತೇವೆ; ಸಿಎಸ್ ಅಸಹಾಯಕತೆ

|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಎರಡು ಫೇಸ್ ನಲ್ಲಿ ಕೊರೊನಾ ಲಸಿಕೆ ಹಾಕುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಉಚಿತವಾಗಿ ಲಸಿಕೆ ನೀಡುತ್ತಿದೆ. 18-45 ವರ್ಷದೊಳಗಿನವರಿಗೆ ರಾಜ್ಯ ಸರ್ಕಾರವೇ ಖರೀದಿ ಮಾಡಿ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಾವು ಮೂರು ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಅದರಲ್ಲಿ ನಮಗೆ ಒಂದು ಕೋಟಿ ಲಸಿಕೆ ಈಗಾಗಲೇ ಬಂದಿದೆ ಎಂದರು.

ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, 86 ಲಕ್ಷ ಜನರಿಗೆ ಫಸ್ಟ್ ಡೋಸ್ ನೀಡಿದ್ದೇವೆ. ಇದರಲ್ಲಿ 25 ಲಕ್ಷ ಜನರಿಗೆ ಎರಡನೇ ಡೋಸ್ ಕೂಡಾ ನೀಡಿದ್ದೇವೆ, ಇನ್ನೂ 60 ಲಕ್ಷ ಜನರಿಗೆ ಸೆಕೆಂಡ್ ಡೋಸ್ ನೀಡಬೇಕು ಎಂದು ಮಾಹಿತಿ ನೀಡಿದರು.

3 Crore Corona Vaccine Ordered For Karnataka: Chief Secretary P Ravikumar

ಸೆಕೆಂಡ್ ಡೋಸ್ ಕಡಿಮೆ ಆಗುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸಕಾಲದಲ್ಲಿ ಲಸಿಕೆ ಸಿಗದಿದ್ದರೆ ಏನು ಮಾಡುವುದು? ಅವರ ಪರಿಸ್ಥಿತಿ ಏನು? ಪರಿಹಾರ ಏನು? ಎಂದು ಸಹ ಕೇಳಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳುತ್ತದೆ ಅನ್ನುವುದನ್ನು ಕಾದುನೋಡಬೇಕು ಎಂದು ಸಿಎಸ್ ಪಿ.ರವಿಕುಮಾರ್ ಹೇಳಿದರು.

ರಾಜ್ಯಕ್ಕೆ ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎನ್ನುವುದನ್ನು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ, ಉತ್ಪಾದಿಸುವವರು ನಮಗೆ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಸಹಾಯಕತೆ ತೋರಿದರು.

ಮೂರು ಕೋಟಿ ಲಸಿಕೆ ಬರಲು ಎಷ್ಟು ದಿನ? ಎಂಬ ಪ್ರಶ್ನೆಗೆ ದಿನ ಅಲ್ಲ, ತಿಂಗಳುಗಟ್ಟಲೆ ಆಗಬಹುದು. ನಾವೂ ಕಾಯುತ್ತಿದ್ದೇವೆ. ಜನವರಿ 16ರಿಂದ ಶುರು ಮಾಡಿದ್ದು, ಮೇ ತಿಂಗಳಿನಲ್ಲಿದ್ದೇವೆ. ನಾಲ್ಕು ತಿಂಗಳಿನಲ್ಲಿ ಬಂದಿರುವುದು ಒಂದು ಕೋಟಿ ಡೋಸ್ ಬಂದಿದೆ. ಹಾಗೇ ನೋಡಿದರೆ ರಾಜ್ಯಕ್ಕೆ ಆರೂವರೆ ಕೋಟಿ ಡೋಸ್ ಗಳು ಬೇಕಾಗುತ್ತವೆ ಎಂದು ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲರಿಗೂ ಎರಡು ಡೋಸ್ ಹಾಕಬೇಕು. ಇದು ಯಾವಾಗ ಬರುತ್ತದೆ ಎಂದು ನಾನಂತೂ ಹೇಳೋಕೆ ಆಗಲ್ಲ. ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ. ನಾವು ಆರ್ಡರ್ ಕೊಟ್ಟಿದ್ದೇವೆ, ಬಂದಾಗ ಕೊಡುತ್ತೇವೆ ನಮ್ಮ ಕೈಯಲ್ಲಿ ಏನಾಗುತ್ತೋ ಅದೆಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಸ್ ಪಿ.ರವಿಕುಮಾರ್ ಹೇಳಿದರು.

Recommended Video

ಜನರನ್ನು ಒಳಗೆ ಕರೆದು ಬಾಗಿಲು ಹಾಕಿದ ಸೀರೆ ಅಂಗಡಿ ಮಾಲೀಕ | Oneindia Kannada

English summary
We have ordered 3 crore corona vaccine, We have already got 1 crore vaccines in it, said P. Ravikumar, chief secretary Of Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X