ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೂಟೌಟ್‌ಗೆ ಬಲಿಯಾದ ಗೌತಮಿಗೆ 472 ಅಂಕಗಳು

|
Google Oneindia Kannada News

ಬೆಂಗಳೂರು, ಮೇ 18 : ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಕಾಡುಗೋಡಿಯ ಪ್ರಗತಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಗುಂಡೇಟಿಗೆ ಬಲಿಯಾದ ಗೌತಮಿ ಶೇ 78.66ರಷ್ಟು ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾಳೆ.

ಗೌತಮಿಗಳಿಸಿರುವ ಒಟ್ಟು ಅಂಕ 472. ಕನ್ನಡ 76, ಇಂಗ್ಲಿಷ್ 88, ಭೌತಶಾಸ್ತ್ರ 62, ರಾಸಾಯನ ಶಾಸ್ತ್ರ 71, ಗಣಿತ 80, ಜೀವಶಾಸ್ತ್ರದಲ್ಲಿ 95. ಹೆಚ್ಚು ಅಂಕಗಳಿಸಿ ಓದು ಮುಂದುವರೆಸಬೇಕು ಎಂಬ ಕನಸು ಹೊತ್ತಿದ್ದ ಗೌತಮಿ ಅಟೆಂಡರ್ ಗುಂಡಿಗೆ ಬಲಿಯಾಗಿ ಚಿರನಿದ್ರೆಗೆ ಜಾರಿದ್ದಾಳೆ. [ಪ್ರತೀಕಾರಕ್ಕಾಗಿ ಅಟೆಂಡರ್ ಮಹೇಶ್ ಗೌತಮಿಯನ್ನು ಕೊಂದ]

Gowthami

ಘಟನೆ ವಿವರ : 2015ರ ಮಾರ್ಚ್ 31ರಂದು ರಾತ್ರಿ 10.30ರ ಸುಮಾರಿಗೆ ಕಾಡುಗೋಡಿಯ ಪ್ರಗತಿ ವಸತಿ ಕಾಲೇಜಿನ ಹಾಸ್ಟೆಲ್‌ಗೆ ನುಗ್ಗಿದ ಅಟೆಂಡರ್ ಮಹೇಶ್ ಗೌತಮಿ ಹಾಗೂ ಶಿರಿಷಾ ಮೇಲೆ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿಯಲ್ಲಿ ಗೌತಮಿ ಮೃತಪಟ್ಟರೆ, ಶಿರಿಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾಳೆ. [ದ್ವಿತೀಯ ಪಿಯು ವಿದ್ಯಾರ್ಥಿನಿ ಗುಂಡಿಗೆ ಬಲಿ]

ಗೌತಮಿ ಮೂಲತಃ ತುಮಕೂರು ಜಿಲ್ಲೆ ಪಾವಗಡದವಳು. ತಾಂತ್ರಿಕ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಗೌತಮಿ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಆಗ ಅವಳ ಕೋಣೆಗೆ ನುಗ್ಗಿದ್ದ ಮಹೇಶ್ ಕ್ಷುಲ್ಲಕ ಕಾರಣಕ್ಕೆ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ.[ಪಿಯು ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]

ಏ.1ರಂದು ಮಧ್ಯಾಹ್ನ ಮಹೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪೊಲೀಸರ ವಿಚಾರಣೆ ನಂತರ ಹತ್ಯೆಯ ಕಾರಣ ಬಹಿರಂಗವಾಗಿತ್ತು. ಮಹೇಶ್ ಹಾಸ್ಟೆಲ್ ಕ್ಯಾಂಪಸ್‍ನಲ್ಲಿ ಓಡಾಡಿದ್ದಕ್ಕೆ ಗೌತಮಿ ಮತ್ತು ಇತರ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಹೇಶ್ ಈ ಗುಂಡಿನ ದಾಳಿ ನಡೆಸಿದ್ದ.

English summary
2nd PUC student Gowthami who killed at residential PU college hostel in Kadugodi Bengaluru on March 31, get 472 marks in exam. PUC result announced on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X