ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲ್ಯಾಕ್ ಫಂಗಸ್; ಹೆಚ್ಚುವರಿ 29,250 ವಯಲ್ಸ್ ಆಂಫೋಟೆರಿಸಿನ್ ಬಿ ಹಂಚಿಕೆ

|
Google Oneindia Kannada News

ಬೆಂಗಳೂರು, ಮೇ 26: ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಮ್ಯೂಕರ್ ಮೈಕೋಸಿಸ್ ಚಿಕಿತ್ಸೆಗೆ ಬಳಸಲಾಗುವ ಆಂಫೋಟೆರಿಸಿನ್ ಬಿ ಔಷಧದ 29,250 ವಯಲ್ಸ್ ಗಳನ್ನು ಹೆಚ್ಚುವರಿಯಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ದೇಶದಲ್ಲಿ 11717 ಕಪ್ಪು ಶಿಲೀಂದ್ರ ಪ್ರಕರಣಗಳು ವರದಿಯಾಗಿದ್ದು ಬೇರೆ ಬೇರೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 29250 ವಯಲ್ಸ್ ಆಂಫೋಟೆರಿಸಿನ್- ಬಿ ಹಂಚಲಾಗಿದೆ. 481 ಕಪ್ಪುಶಿಲೀಂದ್ರ ಪ್ರಕರಣಗಳು ಕಂಡುಬಂದಿರುವ ರಾಜ್ಯಕ್ಕೆ 1221 ವಯಲ್ಸ್ ಒದಗಿಸಲಾಗಿದೆ. ಹಂಚಿಕೆ ನಿರಂತರವಾಗಿ ನಡೆಯಲಿದೆ. ಸೋಂಕಿಗೆ ತುತ್ತಾದ ರೋಗಿಗಳ ಆಧಾರದ ಮೇಲೆ ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ದೇಶಾದ್ಯಂತ ಒಟ್ಟು ಎಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ, ಎಲ್ಲಿ ಹೆಚ್ಚು?ದೇಶಾದ್ಯಂತ ಒಟ್ಟು ಎಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ, ಎಲ್ಲಿ ಹೆಚ್ಚು?

ಇದಕ್ಕೂ ಮೊದಲು ಮೇ 24 ರಂದು ಹೆಚ್ಚುವರಿ 19,420 ಆಂಫೋಟೆರಿಸಿನ್ ಬಿ ವಯಲ್ಸ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ 23,680 ವಯಲ್ಸ್ ಗಳನ್ನು ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

29,250 Vials Of Amphotericin B Given To States Says DV Sadananda Gowda

ಕರ್ನಾಟಕಕ್ಕೆ ಎಷ್ಟು ಹಂಚಿಕೆ: ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿರುವ 481 ರೋಗಿಗಳಿಗೆ ಹೆಚ್ಚುವರಿಯಾಗಿ 1220 ವಯಲ್‌ ಆಂಫೋಟೆರಿಸಿನ್ ಬಿ ವಯಲ್‌ಗಳನ್ನು ಹಂಚಿಕೆ ಮಾಡಲಾಗಿದೆ. ಮೇ 24 ರಂದು 1030 ವಯಲ್‌ಗಳು ಹಾಗೂ ಮೇ 21ರಂದು 1270 ವಯಲ್‌ಗಳ ಹೊರತಾಗಿ ಹೆಚ್ಚುವರಿ ಔಷಧಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Recommended Video

B S Yediyurappa ನವರನ್ನು ಸದ್ಯದಲ್ಲೇ ಕುರ್ಚಿಯಿಂದ ಇಳಿಸಿದ್ದಾರಾ | Oneindia Kannada

ರಾಜ್ಯಗಳಲ್ಲಿನ ಕಪ್ಪು ಶಿಲೀಂಧ್ರ ಪ್ರಕರಣಗಳ ಪಟ್ಟಿಯನ್ನೂ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಆ ಪಟ್ಟಿಯ ಪ್ರಕಾರ ಗುಜರಾತ್‌ನಲ್ಲಿ 2,859 ಮಂದಿ ರೋಗಿಗಳು ಹೆಚ್ಚಿದ್ದು, ಅತಿ ಹೆಚ್ಚಿನ ಪ್ರಕರಣಗಳಿರುವ ರಾಜ್ಯವಾಗಿದೆ. ಮಹಾರಾಷ್ಟ್ರದಲ್ಲಿ 2,770, ಆಂಧ್ರದಲ್ಲಿ 768, ಮಧ್ಯ ಪ್ರದೇಶದಲ್ಲಿ 752, ತೆಲಂಗಾಣದಲ್ಲಿ 744 ಹಾಗೂ ಉತ್ತರ ಪ್ರದೇಶದಲ್ಲಿ 701 ಪ್ರಕರಣಗಳಿವೆ. ರಾಜ್ಯಗಳಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾದಂತೆ, ಅಂಫೊಟೆರಿಸಿನ್ ಬಿ ಮದ್ದಿಗೆ ಬೇಡಿಕೆಯೂ ಹೆಚ್ಚಾಗಿದೆ.

English summary
Union Minister for Chemicals and Fertilisers D V Sadananda Gowda on Wednesday said an additional 29,250 vials of Amphotericin-B drug has been allocated to all the states and union territories
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X