ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಕೋವಿಡ್ ನಿಯಮ ಪಾಲಿಸದ 29 ಮಳಿಗೆಗೆ ಬೀಗ

|
Google Oneindia Kannada News

ಬೆಂಗಳೂರು, ಏಪ್ರಿಲ್ 9; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಜನರು ಗುಂಪು ಗೂಡುವುದನ್ನು ತಪ್ಪಿಸಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಏಪ್ರಿಲ್ 10ರಿಂದ ರಾತ್ರಿ ಕರ್ಫ್ಯೂ ಸಹ ಜಾರಿಗೆ ಬರಲಿದೆ.

ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ರಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮಾರ್ಗಸೂಚಿಯನ್ನು ಪಾಲನೆ ಮಾಡದ 29 ಮಳಿಗೆಗೆ ಬಿಬಿಎಂಪಿ ಬೀಗ ಜಡಿದಿದೆ. ಇವುಗಳಲ್ಲಿ ಜಿಮ್, ಸೂಪರ್ ಮಾರ್ಕೆಟ್, ಸಲೂನ್, ಬೇಕರಿಗಳು ಸೇರಿವೆ.

ಕೋವಿಡ್ 2ನೇ ಅಲೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ ಕೋವಿಡ್ 2ನೇ ಅಲೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ

ಬಿಬಿಎಂಪಿ ಪ್ರತಿ ವಲಯದಲ್ಲಿಯೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದೆ. ಈ ತಂಡ ವಾಣಿಜ್ಯ ಮಳಿಗೆಗಳು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿದೆಯೇ? ಎಂದು ಪರಿಶೀಲನೆ ಮಾಡಲಿದೆ.

ಬೆಂಗಳೂರು; ಅಪಾರ್ಟ್‌ಮೆಂಟ್‌ನಲ್ಲೇ ಕೋವಿಡ್ ಲಸಿಕೆ ಲಭ್ಯ ಬೆಂಗಳೂರು; ಅಪಾರ್ಟ್‌ಮೆಂಟ್‌ನಲ್ಲೇ ಕೋವಿಡ್ ಲಸಿಕೆ ಲಭ್ಯ

29 Shops Closed By BBMP For Not Following COVID Guidelines

ಈ ತಂಡ ಮಳಿಗೆಗೆ ಖುದ್ದಾಗಿ ಭೇಟಿ ನೀಡುತ್ತದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ವಿತರಣೆ ಮುಂತಾದ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಮಾರ್ಗಸೂಚಿ ಪಾಲನೆ ಮಾಡದಿದ್ದರೆ ದಂಡವನ್ನು ವಿಧಿಸಿ, ಮಳಿಗೆ ಮುಚ್ಚಿಸುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಗುರುತು: ಸುಧಾಕರ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಗುರುತು: ಸುಧಾಕರ್

ಬಿಬಿಎಂಪಿ ಪಶ್ಚಿಮ ವಲಯದಲ್ಲಿ 18 ಮಳಿಗೆ ಮುಚ್ಚಿಸಲಾಗಿದ್ದು, 14 ಸಾವಿರ ರೂ. ದಂಡ ವಿಧಿಸಲಾಗಿದೆ. ಮಹದೇವಪುರ ವಲಯದಲ್ಲಿ ಸೂಪರ್ ಮಾರ್ಕೆಟ್ ಸೇರಿ ಮೂರು ಮಳಿಗೆ ಮುಚ್ಚಿದ್ದು, 18 ಸಾವಿರ ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ.

ದಕ್ಷಿಣ ವಲಯದಲ್ಲಿ 6 ಮಳಿಗೆ, ಪೂರ್ವ ವಲಯದಲ್ಲಿ ಮೂರು ಮಳಿಗೆ ಮುಚ್ಚಲಾಗಿದ್ದು ಒಟ್ಟು 61,700 ರೂ. ದಂಡ ಸಂಗ್ರಹವಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ಹೋಟೆಲ್‌ಗಳನ್ನು ಸಹ ಮುಚ್ಚಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

Recommended Video

#Covid19Update : ದೇಶದಲ್ಲಿ 24 ಗಂಟೆಗಳಲ್ಲಿ 1,31,968 ಜನರಿಗೆ ಕೊರೊನಾ ಪಾಸಿಟಿವ್ | Oneindia Kannada

ಗುರುವಾರದ ವರದಿಯಂತೆ ಬೆಂಗಳೂರು ನಗರದಲ್ಲಿ 4,442 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4,64,438ಕ್ಕೆ ಏರಿಕೆಯಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 38,946.

English summary
BBMP health officers team closed restaurants and fined for super market, gym for not following COVID-19 guidelines in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X