ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸ್ಕಾಲರ್ ಶಿಪ್

|
Google Oneindia Kannada News

ಬೆಂಗಳೂರು, ಜ.6: ಬೆಂಗಳೂರು ಇಂದಿರಾನಗರ ಟೊರಿಕ್ ಕಮ್ಯೂನಿಕೆಶನ್ ನ 53 ಜನ ಏಸ್ ವಿದ್ಯಾರ್ಥಿಗಳು ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೆಶನ್ (ಎನ್ ಟಿಎಸ್ ಇ)ಗೆ ಆಯ್ಕೆಯಾಗಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಪಡೆಯಲು ಇದು ಬಹುಮುಖ್ಯ ಪರೀಕ್ಷೆಯಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು ಈಗ ಸ್ಕಾಲರ್ ಶಿಪ್ ಗೆ ಪರೀಕ್ಷೆ ಬರೆಯಲಿದ್ದಾರೆ. ನಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯಿದೆ. ಈ ವರ್ಷವೂ ವಿಶೇಷ ಸಾಧನೆ ಮಾಡಲಿದ್ದಾರೆ ಎಂದು ಏಸ್ ಕ್ರಿಯೆಟಿವ್ ಲರ್ನಿಂಗ್ ಎಂಡಿ ಡಾ. ಶ್ರೀಧರ್ ಹೇಳುತ್ತಾರೆ.[ಅಮೆರಿಕಕ್ಕೆ ಹೊರಟ ಮಂಗಳೂರಿನ ಯುವ ವಿಜ್ಞಾನಿಗಳು]

benguluru

ಪರೀಕ್ಷೆಗಳು ನಿಜಕ್ಕೂ ಕಷ್ಟದಾಯಕವಾಗಿದೆ. ಶಿಕ್ಷಕರ ಸಹಾಯದಿಂದ ಅತ್ಯುತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದ್ದೇನೆ. ನನಗೆ ಇಲೆಕ್ಟ್ರಾನಿಕ್ ಇಂಜಿನಿಯರ್ ಆಗುವ ಆಸೆ ಇದೆ. ಅದನ್ನು ಪೂರೈಸಿಕೊಳ್ಳಲು ಅಗತ್ಯ ಅಭ್ಯಾಸ ಮಾಡುತ್ತಿದ್ದೇನೆ ಎಂದು ಅಕಾಡಮಿಯ ವಿದ್ಯಾರ್ಥಿನಿ ಸ್ನೇಹಾ ಹೇಳುತ್ತಾರೆ.

ಶಿಕ್ಷಕರು ಮಾದರಿ ಪತ್ರಿಕೆಗಳನ್ನು ತಯಾರು ಮಾಡಿ ಹೆಚ್ಚಿನ ಅಭ್ಯಾಸಕ್ಕೆ ಒತ್ತು ನೀಡಿದ್ದಾರೆ. ಪರೀಕ್ಷೆಗಳನ್ನು ಸುಲಭ ಮತ್ತು ಸರಳವಾಗಿ ಎದುರಿಸುವ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಐಶ್ವರ್ಯ ಶ್ರೀರಾಮ್ ಹೇಳುತ್ತಾರೆ.

ಈ ಮೊದಲು 8 ನೇ ತರಗತಿ ವಿದ್ಯಾರ್ಥಿಗಳಿಗಿದ್ದ ಪರೀಕ್ಷೆಯನ್ನು ಈಗ 10 ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿ ಮಾಡಲಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಏಸ್ ಅಕಾಡಮಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.

English summary
Benguluru: Of 53 Ace students who qualified for National Level, 29 students succeeded from the city in the national level test of the National Talent Search Examination (NTSE), a prestigious scholarship exam for students of class X. The National level test was held on October 19th, 2014. These students are now eligible for the scholarship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X