ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ರಾಜ್ಯದಲ್ಲಿಂದು 2798 ಕೇಸ್, ಬೆಂಗಳೂರಿನಲ್ಲಿ 1533 ಜನರಿಗೆ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಇಂದು 2798 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36216ಕ್ಕೆ ಏರಿಕೆಯಾಗಿದೆ.

Recommended Video

Jaggesh regrets helping Drone Prathap | Oneindia Kannada

ಈ ಪೈಕಿ ಬೆಂಗಳೂರಿನಲ್ಲಿ 1533 ಮಂದಿಗೆ ಕೊವಿಡ್ ದೃಢವಾಗಿದೆ. ಇಂದಿನ ವರದಿ ಬಳಿಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16862ಕ್ಕೆ ಜಿಗಿದಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ 14716 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.

Breaking: ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!Breaking: ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!

2798 COVID19 cases reported in Karnataka on july 11th

ಇನ್ನು 20883 ಪ್ರಕರಣಗಳು ಸಕ್ರಿಯವಾಗಿದೆ.ಇಂದು ಒಂದೇ ದಿನ 70 ಜನರು ಮೃತಪಟ್ಟಿದ್ದು, ಇದುವರೆಗೂ ರಾಜ್ಯದಲ್ಲಿ 613 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 504 ಮಂದಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆವಾರು ಇಂದಿನ ಅಂಕಿ ಅಂಶ ಗಮನಿಸಿದರೆ, ಬೆಂಗಳೂರು ನಗರದಲ್ಲಿ 1533 ಮಂದಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡದಲ್ಲಿ 186 ಕೇಸ್, ಉಡುಪಿ 90 ಕೇಸ್, ಮೈಸೂರು 83 ಕೇಸ್, ತುಮಕೂರು 78 ಪ್ರಕರಣ, ಧಾರವಾಡ 77 ಕೇಸ್, ಯಾದಗಿರಿ 74 ಪ್ರಕರಣ, ದಾವಣಗೆರೆ 72 ಕೇಸ್, ಕಲಬುರಗಿಯಲ್ಲಿ 65 ಸೋಂಕು ವರದಿಯಾಗಿದೆ.

English summary
70 deaths and 2798 COVID19 cases reported in Karnataka on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X