ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ 41, ಬೆಂಗಳೂರಲ್ಲಿ 27 ವಿಮಾನ ಹಾರಾಟ ವ್ಯತ್ಯಯ

|
Google Oneindia Kannada News

ಬೆಂಗಳೂರು, ಜನವರಿ 06 : ಶೀತಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರದಲ್ಲಿ ಭಾರೀ ಚಳಿ ಇದೆ. ಮತ್ತೊಂದು ಕಡೆ ದಟ್ಟ ಮಂಜಿನ ಕಾರಣದಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ದೆಹಲಿಯಿಂದ ಹೊರಡಬೇಕಾಗಿದ್ದ 41, ಬೆಂಗಳೂರಿನಿಂದ ಹೊರಡಬೇಕಿದ್ದ 27 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ. ದೆಹಲಿಯಲ್ಲಿ ದಟ್ಟ ಮಂಜಿನ ಕಾರಣದಿಂದಾಗಿ ವಾಯು ಮಾಲಿನ್ಯದ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.

ದಟ್ಟ ಮಂಜು : ಬೆಂಗಳೂರು ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತದಟ್ಟ ಮಂಜು : ಬೆಂಗಳೂರು ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಬೆಂಗಳೂರಿನ ಮೂರು ಪ್ರದೇಶಗಳಲ್ಲಿ ವಾಯು ವಾಲಿನ್ಯ ವಿಪರೀತವಾಗಿದೆ. ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ಜಯನಗರ 5ನೇ ಬ್ಲಾಕ್‌ ಪ್ರದೇಶದಲ್ಲಿ ಉಸಿರಾಡುವ ಗಾಳಿ ವಿಪರೀತವಾಗಿ ಕಲುಷಿತವಾಗಿದೆ.

ಏಳು ಬಣ್ಣವಲ್ಲ ಇದು ಬಿಳಿಯಬಣ್ಣದ ಕಾಮನಬಿಲ್ಲುಏಳು ಬಣ್ಣವಲ್ಲ ಇದು ಬಿಳಿಯಬಣ್ಣದ ಕಾಮನಬಿಲ್ಲು

27 flights in Bengaluru delayed due to fog

ಡಿಸೆಂಬರ್ 6ರಂದು ಮಂಜು ಕವಿದಾಗ ವಿಮಾನಗಳ ಹಾರಾಟಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಘೋಷಣೆ ಮಾಡಿತ್ತು. ಆದರೆ, ಮರುದಿನವೇ 362 ವಿಮಾನಗಳ ವಿಳಂಬವಾದವು, 38 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ಪ್ರಕೃತಿ ವೈಭವ : ಮಡಿಕೇರಿ ಮೇಲ್ ಮಂಜುಪ್ರಕೃತಿ ವೈಭವ : ಮಡಿಕೇರಿ ಮೇಲ್ ಮಂಜು

ಡಿಸೆಂಬರ್ 25ರಂದು 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಪ್ರತಿದಿನ 1300 ವಿಮಾನಗಳು ಆಗಮಿಸುತ್ತವೆ. ಆದರೆ, ಡಿಸೆಂಬರ್ ಮೊದಲ ವಾರದಿಂದಲೇ ಹಾರಾಟ ವಿಳಂಬವಾಗುತ್ತಿದೆ.

English summary
41 flights were scheduled to be delayed at Indira Gandhi International Airport New Delhi and 27 flights delayed in Bengaluru airport, Karnataka due to dense fog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X