ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ "ರಾಮಾಯಣ ಚಾತುರ್ಮಾಸ್ಯ"

|
Google Oneindia Kannada News

ಬೆಂಗಳೂರು, ಜೂನ್ 5: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ ಬೆಂಗಳೂರಿನ ಗಿರಿನಗರದ ಶಾಖಾಮಠ ಆವರಣದಲ್ಲಿ ನಡೆಯಲಿದೆ.

ಜುಲೈ 16ರಂದು ಆರಂಭವಾಗುವ ಚಾತುರ್ಮಾಸ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸಕ್ಕೆ "ರಾಮಾಯಣ ಚಾತುರ್ಮಾಸ್ಯ" ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ.

ನರಕ ಸದೃಶ ಮನವನ್ನು ನಾಕವಾಗಿಸಲು ಶಂಕರರು ಬೇಕು: ರಾಘವೇಶ್ವರ ಶ್ರೀನರಕ ಸದೃಶ ಮನವನ್ನು ನಾಕವಾಗಿಸಲು ಶಂಕರರು ಬೇಕು: ರಾಘವೇಶ್ವರ ಶ್ರೀ

ಈ ಕುರಿತಾಗಿ ಬೆಂಗಳೂರಿನ ಪದಾಧಿಕಾರಿಗಳು ಹಾಗೂ ಶಿಷ್ಯಭಕ್ತರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ, ಬೆಂಗಳೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವಂತೆ ನಿವೇದಿಸಿದರು.

26th Chaturmasa Vratha of Raghaveshwara Swamiji of Ramachandrapura Math at Bengaluru

ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.

25 ರ ರಜತ ವರ್ಷ ಪೂರೈಸಿ, ಸ್ವರ್ಣ ವರ್ಷದೆಡೆಗೆ ಪಾದಾರ್ಪಣೆ ಮಾಡುವುದು ಈ ವರ್ಷದ ವಿಶೇಷವಾಗಿದೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಚಾತುರ್ಮಾಸ ಸಮಿತಿ ರಚನೆಯಾಗಿದ್ದು, ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.

English summary
26th Chaturmasa Vratha of Raghaveshwara Swamiji of Ramachandrapura Math at Bengaluru from July 16 to September 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X