ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಜುನಾಥನ ಸನ್ನಿಧಿಗೆ ಪಾದಯಾತ್ರೆ ಹೊರಟ ಬೆಂಗಳೂರು ಭಕ್ತರು

|
Google Oneindia Kannada News

ಬೆಂಗಳೂರು, ಫೆ. 8: ಬೆಂಗಳೂರಿನ ಶ್ರೀ ರಾಮಪುರ ಬಡಾವಣೆಯ, ದಯಾನಂದನಗರದ ಧರ್ಮಜ್ಯೋತಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 25ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಇದು ಸತತ 25ವರ್ಷದ ಪಾದಯಾತ್ರೆಯಾಗಿದ್ದು ಅನ್ನದಾನ ಏರ್ಪಡಿಸಲಾಗಿತ್ತು. ಮಾಲೆ ಧರಿಸುವುದರ ಮೂಲಕ ಬೆಂಗಳೂರಿನಿಂದ ಧರ್ಮಸ್ಥಳದ ವರೆಗೂ ಕಾಲ್ನಡಿಗೆಯಲ್ಲಿಯೇ ಸುಮಾರು 10 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ.[ಧರ್ಮಸ್ಥಳ: ವೀರೇಂದ್ರ ಹೆಗ್ಗಡೆಗೆ ಪದ್ಮ ವಿಭೂಷಣ, ಹಬ್ಬದ ಸಂಭ್ರಮ]

dharmastala

ಬೆಂಗಳೂರಿನಿಂದ ಹೊರಟು ಮಾರ್ಗಮದ್ಯೆ ಅಲ್ಲಲ್ಲಿ ತಂಗಿದ್ದು ಯಾತ್ರೆ ಮುಂದುವರಿಸುವ ಭಕ್ತಾದಿಗಳು ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್, ಹಾಳಪ್ಪನಗುಡ್ಡ, ಯಡಿಯೂರು, ಹಿರಿಸಾವೆ, ಉದಯಪುರ , ಶಾಂತಿಗ್ರಾಮ, ಬೇಲೂರು, ಮೂಡಿಗೆರೆ ಕ್ರಾಸ್, ಕೊಟ್ಟಿಗೆಹಾರ, ಉಜಿರೆ ತಲುಪಿ ಹತ್ತನೇ ದಿನ ಅಂದರೆ ಶಿವರಾತ್ರಿಗೆ ಸರಿಯಾಗಿ ಧರ್ಮಸ್ಥಳ ತಲುಪಲಿದ್ದಾರೆ.

ಸಮಿತಿ ಸದಸ್ಯರಾದ ಜಗದೀಶ್, ಚಂದ್ರಶೇಖರ್, ಶಿವ, ಅನು, ಸಂತೋಷ್, ಅಶ್ವತ್‍ನಾರಾಯಣ್, ಅಶೋಕ್, ಶಿವು, ಸಂತು, ವೆಂಕಟೇಶ್, ನವೀನ್, ರಾಜಕುಮಾರ್, ಧನಕುಮಾರ್, ರಮೇಶಣ್ಣ, ರಘು, ಗಂಗನರಸಣ್ಣ , ಹನುಂತರಾಜು ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.

English summary
Bengaluru: Dayananda Nagar Devotes conducting a padayatra to Darmastala regarding Shivaratri. Total 10 day Padayatra end with Shivaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X