ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮೇ 18ರಂದು 10K ಮ್ಯಾರಥಾನ್

By Ashwath
|
Google Oneindia Kannada News

ಬೆಂಗಳೂರು, ಮೇ. 6 : ಈ ವರ್ಷ‌ದ ಟಿಸಿಎಸ್‌ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಟಿಸಿಎಸ್‌ನ ಉಪಾಧ್ಯಕ್ಷ ಹಾಗೂ ಜಾಗತಿಕ ವಹಿವಾಟು ಮುಖ್ಯಸ್ಥ ನಾಗರಾಜ್ ಐಜ್ರಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು ಪ್ರತಿ ವರ್ಷ ಟಿಸಿಎಸ್ ವರ್ಲ್ಡ್ 10ಕೆ ಓಟದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಮೂರು ಸಾವಿರಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿದ್ದಾರೆ ಎಂದು ಹೇಳಿದರು.

ಮೇ 18 ಭಾನುವಾರದಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ 7ನೇ ಆವೃತ್ತಿಯ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಓಟಕ್ಕೆ ಚಾಲನೆ ದೊರೆಯಲಿದ್ದು, ಓಟಕ್ಕೆ ಖ್ಯಾತ ಮಾಜಿ ಅಥ್ಲಿಟ್ ಕಾರ್ಲ್ ಲೂಯಿಸ್ ಅಧಿಕೃತ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಎಚ್‌ಎಲ್‌ ಉಪಾಧ್ಯಕ್ಷ ಸಂದೀಪ್‌ ಜುನೇಜ, ನೈಕಿ ಇಂಡಿಯಾ ಮಾರುಕಟ್ಟೆ ಮುಖ್ಯಸ್ಥ ಅವಿನಾಶ್‌‌ ಪಂತ್‌‌, ಪ್ರೋಕ್ಯಾಮ್‌‌ ಇಂಟರ್‌ನ್ಯಾಷನಲ್‌‌ ನಿರ್ವ‌‌ಹಣೆ ನಿರ್ದೇಶಕ ಪಿ. ಎನ್‌ ಶಂಕರನ್‌‌, ಪ್ರೋಕ್ಯಾಮ್‌‌ ಇಂಟರ್‌ನ್ಯಾಷನಲ್‌ ವ್ಯವಸ್ಥಾಪಕ ನಿರ್ದೆಶಕ ವಿವೇಕ್‌‌. ಬಿ. ಸಿಂಗ್‌, ರೇಡಿಯೋ ಮಿರ್ಚಿ‌ ಕ್ಲಸ್ಟರ್‌ ಹೆಡ್‌ ರಶ್ಮಿ ಶರ್ಮಾ‌ ಉಪಸ್ಥಿತರಿದ್ದರು.

ಮುಂದಿನ ಪುಟದಲ್ಲಿ 7ನೇ ಆವೃತ್ತಿಯ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಮ್ಯಾರಥಾನ್‌ ವಿಶೇಷತೆಯನ್ನು ವಿವರಿಸಲಾಗಿದೆ.

 ಕಾರ್ಲ್‌ ಲೂಯಿಸ್‌ ರಾಯಭಾರಿ:

ಕಾರ್ಲ್‌ ಲೂಯಿಸ್‌ ರಾಯಭಾರಿ:

ಈ ಮ್ಯಾರಥಾನ್‌ಗೆ ಅಧಿಕೃತ ರಾಯಭಾರಿಯಾಗಿ ಮಾಜಿ ವಿಶ್ವಚಾಂಪಿಯನ್‌ ಅಥ್ಲೆಟ್‌ ಅಮೆರಿಕದ‌ ಕಾರ್ಲ್ ಲೂಯಿಸ್ ನೇಮಕವಾಗಿದ್ದಾರೆ. ಒಲಿಂಪಿಕ್ಸ್ಬಲ್ಲಿ 9 ಚಿನ್ನದ ಪದಕ ಪಡೆದಿರುವ ಲೂಯಿಸ್‌ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ನಲ್ಲಿ 8 ಚಿನ್ನದ ಪದಕವನ್ನು ಪಡೆದಿದ್ದಾರೆ.

10 ಲಕ್ಷ ರೂ ಬಹುಮಾನ ಮೊತ್ತ:

10 ಲಕ್ಷ ರೂ ಬಹುಮಾನ ಮೊತ್ತ:

ಈ ಬಾರಿಯ 10ಕೆ ಮ್ಯಾರಥಾನ್ ವಿಜೇತರಾದವರಿಗೆ 1.70 ಸಾವಿರ ಡಾಲರ್ (ಅಂದಾಜು10 ಲಕ್ಷ 20 ಸಾವಿರ ರೂ.) ಬಹುಮಾನ ಪಡೆಯಲಿದ್ದಾರೆ. ಪುರಷರ ವಿಭಾಗದಲ್ಲಿ ವರ್ಲ್ಡ್‌ ಚಾಂಪಿಯನ್‌‌ ಜಫೆಟ್‌ ಕೊರಿರ್‌‌, ಮಹಿಳೆಯರ ವಿಭಾಗದಲ್ಲಿ ಎಮಿಲಿ ಚೆಬೆಟ್‌ ಪಾಲ್ಗೊಳ್ಳಲಿದ್ದಾರೆ.

 ಡಿಎಚ್‌ಎಲ್‌ ಕಾರ್ಪೊರೇಟ್‌ ರೇಸ್‌‌:

ಡಿಎಚ್‌ಎಲ್‌ ಕಾರ್ಪೊರೇಟ್‌ ರೇಸ್‌‌:

ಕಾರ್ಪೊರೇಟ್‌ ವಲಯದ ಉದ್ಯೋಗಿಗಳಿಗೆ ಮ್ಯಾರಥಾನ್‌ ನಡೆಯಲಿದೆ. ಮೂರು ಸದಸ್ಯರು(ಇಬ್ಬರು ಪುರುಷರು, ಓರ್ವ‌ ಮಹಿಳೆ)10 ಕಿ.ಮೀ ಓಡಬೇಕಾಗುತ್ತದೆ.ಮೂವರು ಓಟಗಾರರ ಸರಾಸರಿ ಸಮಯ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತ ತಂಡಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನ ಲಭಿಸಲಿದೆ. ದ್ವಿತೀಯ ಸ್ಥಾನ ಪಡೆದ ತಂಡ 75 ಸಾವಿರ ರೂಪಾಯಿ ನಗದು ಬಹುಮಾನ ಪಡೆಯಲಿದೆ.

 ಮಜ್ಜ ರನ್‌:

ಮಜ್ಜ ರನ್‌:

12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಜ್ಜ ರನ್ (5.7 ಕಿ.ಮೀ) ನಡೆಯಲಿದ್ದು , 10,600 ಮಂದಿ ಈ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ.

 ಹಿರಿಯರಿಗೆ ಓಟ:

ಹಿರಿಯರಿಗೆ ಓಟ:

ಹಿರಿಯ ನಾಗರೀಕರಿಗಾಗಿ ನಡೆಯುವ 4 ಕಿ.ಮೀ ಓಟಕ್ಕೆ 750 ಪ್ರವೇಶಗಳು ಬಂದಿದ್ದರೆ, ದೈಹಿಕ ವಿಕಲಚೇತನರಿಗೆ ನಡೆಯುವ 4 ಕಿ.ಮೀ ಓಟಕ್ಕೆ 250 ಪ್ರವೇಶಗಳು ಬಂದಿವೆ.

 ಸೆಲ್ಫಿ ಸ್ಪರ್ಧೆ:

ಸೆಲ್ಫಿ ಸ್ಪರ್ಧೆ:

ಮ್ಯಾರಥಾನ್‌‌ನಲ್ಲಿ ಭಾಗವಹಿಸಿವವರಿಗೆ ಸೆಲ್ಫಿ ಸ್ಪರ್ಧೆ‌ಯನ್ನು ಆಯೋಜಿಸಲಾಗಿದ್ದು,
ವಿಜೇತರಾದವರಿಗೆ ಕಾರ್ಲ್‌ ಲೆವಿಸ್‌ ಜೊತೆ ಸೆಲ್ಫಿಯಾಗುವ ಅವಕಾಶ ಲಭಿಸಲಿದೆ.

English summary
Procam International, promoters of the Tata Consultancy Services World 10K Bangalore, today announced that the total registrations received for the upcoming run had crossed a phenomenal 25000, crossing last year's count by 3000 registrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X