ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

25 ತಿಂಗಳ ಬಿಲ್ ಪಾವತಿ ಬಾಕಿ: ಕಾರ್ಯನಿರತ ಬಿಬಿಎಂಪಿ ಗುತ್ತಿಗೆದಾರರಿಂದ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ 25 ತಿಂಗಳಿನಿಂದ ಬಿಬಿಎಂಪಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೆ ಉಳಿಸಿಕೊಂಡಿದ್ದು, ಕೂಡಲೇ ಬಿಲ್ ಪಾವತಿ ಮಾಡಬೇಕೆಂದು ಕಾರ್ಯನಿರತ ಗುತ್ತಿಗೆದಾರ ಸಂಘದ ವತಿಯಿಂದ ಬಿಬಿಎಂಪಿ ಕೇಂದ್ರ ಕಚೇರಿ ಅವರಣದಲ್ಲಿ ಪ್ರತಿಭಟನೆ ಮಾಡಲಾಯಿತು.

ಅಧ್ಯಕ್ಷರಾದ ಕೆ.ಟಿ.ಮಂಜುನಾಥ್ ಪದಾಧಿಕಾರಿಗಳಾದ ಎಂ.ದೇವರಾಜ್, ವೆಂಕಟೇಶ್, ರವಿಕುಮಾರ್, ಶಿವಣ್ಣ, ಟಿ.ವೆಂಕಟೇಶ್, ಮಂಜುನಾಥ್ ಮತ್ತು ನೂರಾರು ಗುತ್ತಿಗೆದಾರರು ಭಾಗವಹಿಸಿದ್ದರು.

ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ

ಅಧ್ಯಕ್ಷರಾದ ಕೆ.ಟಿ.ಮಂಜುನಾಥ್ ರವರು ಮಾತನಾಡಿ, ಬಿಬಿಎಂಪಿ ಕಾಮಗಾರಿ ಪೂರ್ಣಗೊಂಡು 25 ತಿಂಗಳು ಆದರೂ ಪಾಲಿಕೆ ವತಿಯಿಂದ ಸಕಾಲಕ್ಕೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಹಣ ತಂದು, ಬಹುತೇಕ ಗುತ್ತಿಗೆದಾರರು ಕಾಮಗಾರಿಗಳನ್ನು ಮಾಡಿರುತ್ತಾರೆ ಎಂದರು.

25-Month Bill Payment Dues: Protests By Working BBMP Contractors

ಬಿಬಿಎಂಪಿಯಲ್ಲಿ ನಿಧಾನಗತಿಯಲ್ಲಿ ಬಿಲ್ ಪಾವತಿ ಮಾಡುವುದರಿಂದ ಬಂದ ಹಣವೆಲ್ಲ ಅಸಲು, ಬಡ್ಡಿಗೆ ಸಮವಾಗುತ್ತದೆ. ಗುತ್ತಿಗೆದಾರರನ್ನು ನಂಬಿಕೊಂಡಿರುವ ಕುಟುಂಬವರ್ಗ ಮತ್ತು ಸಾವಿರಾರು ಕೂಲಿ ಕಾರ್ಮಿಕರು ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಲಂಚ ನೀಡಿದವರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಕೆ.ಟಿ.ಮಂಜುನಾಥ್ ಆರೋಪಿಸಿದರು.

Recommended Video

ಮನ್ಸೂರ್ ವಿಡಿಯೋ ಅಲ್ಲಿ ಹೇಳಿರೋದಾದ್ರು ಏನು? | Oneindia Kannada

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕಾಮಗಾರಿ ಪೂರ್ಣಗೊಂಡ ಆರು ತಿಂಗಳ ಅವಧಿಯಲ್ಲಿ ಬಿಲ್ಲು ಪಾವತಿಯಾಗಬೇಕು ಮತ್ತು ಕಳೆದ 25 ತಿಂಗಳ ಗುತ್ತಿಗೆದಾರರ ಬಿಲ್ ಗಳನ್ನು ತತಕ್ಷಣ ಬಿಡುಗಡೆ ಮಾಡಬೇಕೆಂದು ಆಯುಕ್ತರಿಗೆ ಮನವಿ ಮಾಡಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಹೇಳಿದರು.

English summary
The protest in the BBMP Head office were demanded by the Working Contractor Association to pay the 25-month bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X