ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಹೋರಾಟ: 25 ಲಕ್ಷ ಆರ್ಥಿಕ ನೆರವು ನೀಡಿದ ಜಿಆರ್ ಬಿ ಕಂಪನಿ

|
Google Oneindia Kannada News

ಬೆಂಗಳೂರು, ಏಪ್ರಿಲ್.19: ಕರ್ನಾಟಕದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಜಿಆರ್ ಬಿ ಡೈರಿ ಫುಡ್ಸ್ ಪ್ರವೇಟ್ ಲಿಮಿಟೆಡ್ ಕಂಪನಿಯು 25 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ವಿನಿಯೋಗಗೊಳಿಸುವುದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ದೇಶ ಮತ್ತು ಜಗತ್ತಿನಾದ್ಯಂತ ಮಾರುಕಟ್ಟೆಗಳಲ್ಲಿ ತನ್ನದೇ ಅಸ್ತಿತ್ವವನ್ನು ಹೊಂದಿರುವ ಕಂಪನಿಯು ರಾಜ್ಯದ ಜನತೆಗೆ ಈ ಮೂಲಕ ಆರ್ಥಿಕ ಕೊಡುಗೆಯನ್ನು ನೀಡಿದೆ.

ತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನ

ಸಿಎಂ ಪರಿಹಾರ ನಿಧಿಗೆ ಹಣವನ್ನು ನೀಡುವುದರ ಜೊತೆಗೆ ಆರ್ಥಿಕವಾಗಿ ದುರ್ಬಲ ಸ್ತರದಲ್ಲಿ ಇರುವ ಅಸಹಾಯಕರ ನೆರವಿಗೂ ಕಂಪನಿ ಸಿದ್ಧಹಸ್ತ ತೋರಿದೆ. ಅತಂತ್ರ ಸ್ಥಿತಿಯಲ್ಲಿ ಇರುವ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜನರಿಗೆ ಊಟವನ್ನು ವಿತರಿಸಲಾಗುತ್ತಿದೆ.

25 Lakh Financial Support For Fight Against Coronavirus From GRB Dairy Foods Company

ರಾಜ್ಯದಲ್ಲಿ ಅತಂತ್ರರಿಗೆ ಊಟದ ಕಿಟ್ ವಿತರಣೆ:

ಭಾರತ ಲಾಕ್ ಡೌನ್ ನಡುವೆ ಅತಂತ್ರ ಸ್ಥಿತಿಯಲ್ಲಿ ಇರುವ ಅಸಹಾಯಕ ಜನರಿಗೆ ಅಗತ್ಯ ವಸ್ತುಗಳು ಹಾಗೂ ಸರಕು ಸಾಮಗ್ರಿಗಳ ಕಿಟ್ ನ್ನು ವಿತರಣೆ ಮಾಡಲಾಗುತ್ತಿದೆ. ಜಿಆರ್ ಬಿ ಡೈರಿ ಫುಡ್ಸ್ ಪ್ರವೇಟ್ ಲಿಮಿಟೆಡ್ ಕಂಪನಿಯು 20 ಲಕ್ಷ ರೂಪಾಯಿ ಈ ರೀತಿ ಕಿಟ್ ವಿತರಣೆಗೆ ಖರ್ಚು ಮಾಡಿದೆ. ಇನ್ನು, ಕಂಪನಿಯು ವಿತರಿಸಿದ ಆಹಾರ ಸಾಮಗ್ರಿಗಳ ಕಿಟ್ ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ ಹಾಗೂ ಸಾಂಬರ್ ಪೌಡರ್ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ಒಳಗೊಂಡಿದೆ.

English summary
25 Lakh Finacial Support For Fight Against Coronavirus From GRB Dairy Foods Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X