ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿಲೇಡಿ ಸ್ವ ಇಚ್ಛಾ ಹೇಳಿಕೆ ಬಳಿಕ ಜಾರಕಿಹೊಳಿಗೆ ಇರೋದು ಕೇವಲ 24 ಗಂಟೆ !

|
Google Oneindia Kannada News

ಬೆಂಗಳೂರು, ಮಾರ್ಚ್‌ 30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಎನ್ನಲಾದ ಯುವತಿ ನ್ಯಾಯಾಲಯದಲ್ಲಿ ಸ್ವ ಇಚ್ಛಾ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ. ಆಕೆ ಹೇಳಿಕೆ ದಾಖಲಿಸಿದ ನಂತರ ಎಸ್ಐಟಿ ಅಧಿಕಾರಿಗಳು ತನಿಖೆ ಆರಂಭವಾಗಲಿದೆ. ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ರಮೇಶ್ ಜಾರಕಿಹೊಳಿಗೆ ಕಾನೂನು ಪ್ರಕಾರ ಇರುವುದು ಮೂರು ಆಯ್ಕೆ ಮಾತ್ರ ! ಸಿಡಿಲೇಡಿಯ ಹೇಳಿಕೆ ನಂತರ ಕಾನೂನು ಪರದಿಯಲ್ಲಿ ಆಗುವ ಬೆಳವಣಿಗಳ ಸಮಗ್ರ ವಿವರ ಇಲ್ಲಿದೆ ನೋಡಿ.

Recommended Video

CD lady ಹಿಂದೆ ಇದ್ಯ ಡಿಕೆ ಕೈವಾಡ! | Oneindia Kannada

ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ವರದಿಯಾಗಿ ಒಂದು ತಿಂಗಳು ಮುಗಿದಿದೆ. ವಿಡಿಯೋ ಬಿಡುಗಡ ಮಾಡುವ ಮೂಲಕ ದಿನಕ್ಕೊಂದು ಟ್ವಿಸ್ಟ್ ಕೊಟ್ಟಿದ್ದ ಸಿಡಿಲೇಡಿ ಅಂತಿಮವಾಗಿ ನ್ಯಾಯಾಲಯದಲ್ಲಿ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಒಪ್ಪಿಗೆ ನೀಡುವ ಮೂಲಕ ಸಿಡಿ ರಣರಂಗಕ್ಕೆ ಇಳಿದಿದ್ದಾರೆ. ಆಕೆ ಸ್ವ ಇಚ್ಛಾ ಹೇಳಿಕೆ ದಾಖಲಿಸಿದ ಬಳಿಕ ಪೊಲೀಸರ ಭದ್ರತೆ ಒದಗಿಸಿ ತನಿಖೆಗೆ ಸಹಕರಿಸುವಂತೆ ಸೂಚಿಸಬಹುದು. ಸಿಡಿಲೇಡಿ ಸ್ವ ಇಚ್ಛಾ ಹೇಳಿಕೆ ದಾಖಲಾದ ಬಳಿಕ ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಪ್ರಕರಣದ ತನಿಖಾಧಿಕಾರಿ ತನಿಖೆಯ ಭಾಗವಾಗಿ ಸ್ವ ಇಚ್ಛಾ ಹೇಳಿಕೆಯನ್ನು ಪಡೆದು ತನಿಖೆ ಆರಂಭಿಸಬಹುದು.

ವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲುವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲು

ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ಸಂಬಂಧ ಸಿಆರ್ ಪಿಸಿ ಸೆಕ್ಷನ್ 167 ಪ್ರಕಾರ ಅತ್ಯಾಚಾರಕ್ಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಪೊಲೀಸರು 24 ತಾಸಿನಲ್ಲಿ ವಿಚಾರಣೆಗೆ ಒಳಪಡಿಸಬೇಕು. ತನಿಖೆಯ ಭಾಗವಾಗಿ ವಿಚಾರಣೆಗೆ ಪಡೆದ ಒಂದು ದಿನದ ಒಳಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಎಸ್‌ಐಟಿ ವಶಕ್ಕೆ ಪಡೆಯಬಹುದು. ಇಲ್ಲವೇ ಈಗಾಗಲೇ ವಿಚಾರಣೆ ನಡೆದಿದೆ ಎಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು.

24 Hours Time to Ramesh Jarkiholi After CD Lady Records Statement in CD case

ಈ ಎರಡು ಮಾರ್ಗ ಬಿಟ್ಟರೆ, ಸಿಡಿಲೇಡಿ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳು ತದ್ವಿರುದ್ಧವಿದ್ದರೆ, ಈ ವಿಚಾರದಲ್ಲಿ ಮಹತ್ವದ ಸಾಕ್ಷಾಧಾರಗಳು ಏನಾದರೂ ಲಭ್ಯವಿದ್ದರೆ, ಅತ್ಯಾಚಾರ ನಡೆದಿಲ್ಲ ಎಂಬುದಕ್ಕೆ ಸಮರ್ಥ ದಾಖಲೆಗಳು ಲಭ್ಯವಾದರೆ, ಸಿಆರ್ ಪಿಸಿ ಸೆಕ್ಷನ್ 169 ಅಡಿಯಲ್ಲಿ ತನಿಖಾಧಿಕಾರಿಗಳು ಆರೋಪಿಯನ್ನು ಆರೋಪ ಮುಕ್ತಗೊಳಿಸಿ ವರದಿ ಸಲ್ಲಿಸಬಹುದು. ಇದು ಅತ್ಯಾಚಾರವಲ್ಲ ಎಂಬುದಕ್ಕೆ ಮಹತ್ವದ ಸಾಕ್ಷಾಧಾರಗಳು ಸಿಕ್ಕಿದರೆ ಮಾತ್ರ ಪೊಲೀಸ್ ಅಧಿಕಾರಿಗಳು ಸಿಆರ್ ಪಿಸಿ ಸೆಕ್ಷನ್ 169 ಅಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹಿರಿಯ ವಕೀಲ ಬಿ. ಸಿದ್ದೇಶ್ವರ ಕಾನೂನು ಆಯಾಮ ಕುರಿತು ವಿವರ ನೀಡಿದ್ದಾರೆ.

ಸಿಡಿ ಪ್ರಕರಣ: ಮಹಾನಾಯಕನಾಗಲು ಹೋಗಿ ಜೈಲುಹಕ್ಕಿ ಖಳನಾಯಕನಾದ ಕಥೆಸಿಡಿ ಪ್ರಕರಣ: ಮಹಾನಾಯಕನಾಗಲು ಹೋಗಿ ಜೈಲುಹಕ್ಕಿ ಖಳನಾಯಕನಾದ ಕಥೆ

ಇಲ್ಲಿ ಎಸ್ಐಟಿ ಪೊಲೀಸರ ತನಿಖೆ ಮತ್ತು ಸಾಕ್ಷಿಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ತನಿಖಾಧಿಕಾರಿ ಯಾರನ್ನೋ ಮೆಚ್ಚಿಸಲು ಸುಳ್ಳು ಮಾಹಿತಿ ಆಧರಿಸಿ ಸೆಕ್ಷನ್ 169 ಅಡಿ ಆರೋಪಿಯನ್ನು ಆರೋಪ ಮುಕ್ತಗೊಳಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರಬಲ ಸಾಕ್ಷಾಧಾರಗಳು ಬೇಕು. ಆದರೆ ಯುವತಿ ಸುಳ್ಳು ಹೇಳಿದ್ದಾಳೆ ಎಂದು ಯುವತಿ ನೀಡುವ ಪ್ರಕರಣದಲ್ಲಿ ಆಕೆಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ.

24 Hours Time to Ramesh Jarkiholi After CD Lady Records Statement in CD case

ಯುವತಿ ನ್ಯಾಯಾಲಯದಲ್ಲಿ ಏನು ಆರೋಪ ಮಾಡುತ್ತಾಳೆ. ಅದಕ್ಕೆ ಸಂಬಂಧ ಪಟ್ಟ ಸಾಕ್ಷಾಧಾರಗಳನ್ನು ಒದಗಿಸುತ್ತಾಳೆ, ಆಕೆಯ ಸಾಕ್ಷಾಧಾರಗಳ ಜತೆಗೆ ಎಸ್ಐಟಿ ತನಿಖೆಯಲ್ಲಿ ಏನು ಸಾಕ್ಷಾಧಾರಗಳು ಸಿಗುತ್ತವೆ ಎಂಬುದು ತುಂಬಾ ಮಹತ್ವ ವಹಿಸುತ್ತದೆ. ಎಸ್ಐಟಿ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡಿಸಬೇಕು. ತನಿಖಾ ವರದಿಯಲ್ಲಿ ಯಾವುದೇ ಲೋಪಗಳು ಇರಬಾರದು ಎಂಬುದು ಮುಖ್ಯ. ಜಾರಕಿಹೊಳಿ ನಿಜವಾಗಿಯೂ ಆಕೆ ಮೇಲೆ ಅತ್ಯಾಚಾರ ಮಾಡಿಲ್ಲ ಎಂದರೆ ಉಳಿಯುವ ಏಕೈಕ ಮಾರ್ಗ.

24 Hours Time to Ramesh Jarkiholi After CD Lady Records Statement in CD case

ಸಿಡಿ ಸಂತ್ರಸ್ತ ಯುವತಿ ವಿಚಾರಣೆ: ಈಗಾಗಲೇ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಆದರೆ ಅದರಲ್ಲಿ ಯಾರನ್ನೂ ಸಹ ಶಂಕಿತ ಆರೋಪಿಗಳು ಎಂದು ಹೆಸರು ಉಲ್ಲೇಖಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಡಿ ಯುವತಿಯನ್ನು ವಿಚಾರಣೆ ನಡೆಸಬಹುದು. ಆ ಪ್ರಕರಣದಲ್ಲಿ ಸಿಡಿ ಯುವತಿ ಶಾಮೀಲಾಗಿದ್ದರೆ, ಷಡ್ಯಂತ್ರ ಮಾಡಿರುವ ಸಂಗತಿ ತನಿಖೆಯಲ್ಲಿ ಸಾಬೀತಾದರೆ ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸಿ ಸಿಡಿಲೇಡಿಯನ್ನು ವಶಕ್ಕೆ ಪಡೆದರೂ ಅಚ್ಚರಿ ಪಡಬೇಕಿಲ್ಲ.

English summary
After CD lady records statement in front of CJ, there will 3 option for Ramesh Jarkiholi. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X