• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನ್‌ಲಾಕ್; ಮೊದಲ ದಿನ ಮೆಟ್ರೋ ಎಷ್ಟು ಜನರ ಸಂಚಾರ?

|
Google Oneindia Kannada News

ಬೆಂಗಳೂರು, ಜೂನ್ 22; ಬೆಂಗಳೂರು ನಗರದಲ್ಲಿ 55 ದಿನಗಳ ಬಳಿಕ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಮೊದಲ ದಿನವಾದ ಸೋಮವಾರ ಒಟ್ಟು 160 ರೌಂಡ್ ಟ್ರಿಪ್‌ಗಳಲ್ಲಿ ರೈಲು ಸಂಚಾರ ನಡೆಸಿದೆ.

ಕರ್ನಾಟಕದ ಸರ್ಕಾರದ ಅನ್‌ಲಾಕ್ ಮಾರ್ಗಸೂಚಿ ಪ್ರಕಾರ ಜೂನ್ 21ರ ಸೋಮವಾರ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಪೂರ್ಣ ಪ್ರಮಾಣದಲ್ಲಿ ಇನ್ನೂ ರೈಲುಗಳು ಸಂಚಾರ ನಡೆಸುತ್ತಿಲ್ಲ.

ಮೆಟ್ರೋ ಸಂಚಾರ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಮೆಟ್ರೋ ಸಂಚಾರ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿ

ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ತನಕ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಿದೆ. ಬೆಂಗಳೂರು ನಗರದಲ್ಲಿ ಸಂಜೆ 7 ರಿಂದ ಮುಂಜಾನೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ ಇರುವುದರಿಂದ ಸಂಪೂರ್ಣವಾಗಿ ರೈಲು ಸಂಚಾರ ನಡೆಸುತ್ತಿಲ್ಲ.

14,788 ಕೋಟಿ ವೆಚ್ಚದ ನಮ್ಮ ಮೆಟ್ರೋ 2ಎ, 2ಬಿ ಯೋಜನೆಗೆ ಕೇಂದ್ರ ಸಮ್ಮತಿ 14,788 ಕೋಟಿ ವೆಚ್ಚದ ನಮ್ಮ ಮೆಟ್ರೋ 2ಎ, 2ಬಿ ಯೋಜನೆಗೆ ಕೇಂದ್ರ ಸಮ್ಮತಿ

ಸೋಮವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಅಧಿಕಾರಿಗಳ ಜೊತೆ ಎಂ. ಜಿ. ರಸ್ತೆ ನಿಲ್ದಾಣದಿಂದ ಬಿ. ಆರ್. ಅಂಬೇಡ್ಕರ್ ನಿಲ್ದಾಣ (ವಿಧಾನಸೌಧ) ತನಕ ಪ್ರಯಾಣಿಕರ ಜೊತೆ ಸಂಚಾರ ನಡೆಸಿದರು.

ಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿಕೆಂಗೇರಿವರೆಗೆ ನಮ್ಮ ಮೆಟ್ರೋ ಸಂಚಾರ ಯಾವಾಗ, ದರ ಎಷ್ಟು?, ನಿಲ್ದಾಣಗಳ ಮಾಹಿತಿ

55 ದಿನಗಳ ಬಳಿಕ ಮೆಟ್ರೋ ರೈಲುಗಳ ಸೇವೆ ಆರಂಭವಾಗಿರುವುದಕ್ಕೆ ಜನರು ಸಂತಸ ವ್ಯಕ್ತಪಡಿಸಿದರು. ಸರ್ಕಾರದ ಮುಂದಿನ ಆದೇಶದ ತನಕ ಎರಡೂ ಮಾರ್ಗದಲ್ಲಿ ರೈಲುಗಳು ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ತನಕ ಮಾತ್ರ ಸಂಚಾರ ನಡೆಸಲಿವೆ.

ಸೋಮವಾರ ಒಟ್ಟು 160 ರೌಂಡ್‌ ಟ್ರಿಪ್ಸ್‌ಗಳನ್ನು ನಡೆಸಲಾಗಿದ್ದು, ಸುಮಾರು 24,602 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

   Covid 3rd Wave ಬಗ್ಗೆ ವೈದ್ಯರು ಹೇಳ್ತಿರೋದೇನು | Oneindia Kannada
   English summary
   In a press release Bengaluru Metro Rail Corporation Limited (BMRCL) said that on June 21 24,602 people traveled in metro rail.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X