ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್ಪೋರ್ಟ್ ಗೆ 5 ಮಾರ್ಗಗಳಿಂದ 23 ವಾಯುವಜ್ರ ಬಸ್ ಸೇವೆ

|
Google Oneindia Kannada News

ಬೆಂಗಳೂರು,ಜೂನ್ 3: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬುಧವಾರ(ಜೂನ್3)ದಿಂದ ಐದು ಮಾರ್ಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ನಲ ನಿಲ್ದಾಣಕ್ಕೆ ವಾಯು ವಜ್ರ ಹವಾನಿಯಂತ್ರಿತ ಬಸ್ ನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳುಗಳ ಕಾಲ‌ ಬಿಎಂಟಿಸಿ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಬಳಿಕ ಒಂದು ವಾರಗಳ‌ ಹಿಂದೆ ಬಿಎಂಟಿಸಿ ಸಾದಾ ಬಸ್ ಗಳ ಓಡಾಟ ಆರಂಭವಾಗಿತ್ತು.
ಇದೀಗ ನಗರದ ಒಟ್ಟು ಐದು ಮಾರ್ಗಗಳಿಂದ ಕೆಐಎಎಲ್ ಗೆ ವಾಯುವಜ್ರ ಬಸ್ ಸಂಚರಿಸಲಿದೆ.

24 ಗಂಟೆ ಕೆಎಸ್ಆರ್ಟಿಸಿ ಬಸ್ ಸೇವೆಗೆ ಸಾರಿಗೆ ಸಚಿವರ ಸೂಚನೆ24 ಗಂಟೆ ಕೆಎಸ್ಆರ್ಟಿಸಿ ಬಸ್ ಸೇವೆಗೆ ಸಾರಿಗೆ ಸಚಿವರ ಸೂಚನೆ

ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೆಐಎಎಲ್, ಮೆಜೆಸ್ಟಿಕ್ ನಿಂದ ಕೆಐಎಎಲ್, ಬನಶಂಕರಿಯಿಂದ ಕೆಐಎಎಲ್, ಬಿಟಿಎಂ ಲೇಔಟ್ ನಿಂದಲೂ ಬಸ್ ಸಂಚರಿಸಲಿದೆ.

23 VayuVajra Buses To Take Passengers To Kempegowda Airport

ಒಟ್ಟು ಬೆಂಗಳೂರಿನಾದ್ಯಂತ 75 ಬಸ್ ಗಳು ಸಂಚರಿಸಲಿವೆ. ಮೆಜೆಸ್ಟಿಕ್, ಕಾಡುಗೋಡಿ, ಸರ್ಜಾಪುರ ರಸ್ತೆ, ಸಿಲ್ಕ ಬೋರ್ಡ್, ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಾಳಕ್ಕೆ ಬಸ್ ಸಂಚರಿಸಲಿದೆ.
ಕೊರೊನಾ ಲಾಕ್ ಡೌನ್ ಗೂ ಮುನ್ನ ಬೆಙಗಳೂರಿನಲ್ಲಿ ಒಟ್ಟು 550 ಹವಾನಿಯಂತ್ರಿತ ಬಸ್ ಗಳು ಸಂಚರಿಸುತ್ತಿದ್ದವು. ಇದೀಗ ಅದರ ಸಂಖ್ಯೆ ಮುಕ್ಕಾಲು ಭಾಗದಷ್ಟು ಕಡಿಮೆಯಾಗಿದೆ. ಕೊರೊನಾ ಸೋಂಕು ಕಡಿಮೆಯಾದರೆ ಬಸ್ ಗಳ ಸಂಖ್ಯೆ ಹೆಚ್ಚಾಗುತ್ತದೆ.

ಲಾಕ್ ಡೌನ್ ಗೂ ಮುನ್ನ ಹವಾನಯಂತ್ರಿತ ಬಸ್ ಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆ ಇತ್ತು ಇದೀಗ ಕೊರೊನಾಗೆ ಹೆದರಿ ಜನರು ಬಸ್ ಏರಲು ಹಿಂಜರಿಯುತ್ತಿರುವ ಕಾರಣ ಬಿಎಂಟಿಸಿಗೆ ದೊಡ್ಡ ಹೊಡೆತ ಬೀಳಲಿದೆ

English summary
The Bangalore Metropolitan Transport Corporation has granted permission To Operate 23 buses from 5 locations To Kempegowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X