ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC: ಬೆಂಗಳೂರಿನ 21 ಖಾಸಗಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ

|
Google Oneindia Kannada News

ಬೆಂಗಳೂರು, ಮೇ 3: ರಾಜ್ಯದಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ಪ್ರೌಢಶಾಲೆಗಳಲ್ಲಿ 21 ಶಾಲೆ ಬೆಂಗಳೂರಿನಲ್ಲಿರುವುದೇ ನೋವಿನ ವಿಷಯವಾಗಿದೆ.

ಈ ಬಾರಿ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ ಎನ್ನುವುದು ಸಮಾಧಾನದ ವಿಚಾರವಾದರೆ ರಾಜ್ಯಾದ್ಯಂತ 46 ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದು ಬೆಳಕಿಗೆ ಬಂದಿವೆ. ಅದರಲ್ಲಿ 21 ಶಾಲೆಗಳು ನಮ್ಮ ಬೆಂಗಳೂರಿನಲ್ಲಿದೆ.

ಅಂಕಿ-ಅಂಶಗಳ ಸಮೇತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಂಪೂರ್ಣ ಮಾಹಿತಿ ಅಂಕಿ-ಅಂಶಗಳ ಸಮೇತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಂಪೂರ್ಣ ಮಾಹಿತಿ

ಇಂತಹ ಕೆಲವು ಶಾಲೆಗಳಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಪರೀಕ್ಷೆಗೆ ಹಾಜರಾದರೆ ಹೆಚ್ಚಿನ ಶಾಲೆಗಳಲ್ಲಿ ಒಂದಕ್ಕಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇಂತಹ ಶಾಲೆಗಳಿಗೆ ಪ್ರೌಢಶಿಕ್ಷಣ ಮಂಡಳಿ ಏಕೆ ಅನುಮತಿ ನೀಡುತ್ತಿದೆ ಸರ್ಕಾರ ಏಕೆ ಅನುದಾನ ನೀಡುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ.

21 private schools of Bengaluru city got zero percentage

ಆದರೆ ಇನ್ನೊಂದು ಧನಾತ್ಮಕ ವಿಚಾರವೆಂದರೆ ಈ ಬಾರಿ ನೂರಕ್ಕೆ ನೂರು ಫಲಿತಾಂಶ ಪಡೆದಿರುವ 1626 ಶಾಲೆಗಳಲ್ಲಿಯೂ 248 ಶಾಲೆಗಳು ಬೆಂಗಳೂರು ನಗರದಲ್ಲಿ ಇರುವುದು ಸಂತಸದ ವಿಷಯವಾಗಿದೆ.

2019ನೇ ಸಾಲಿನಲ್ಲಿ 2,847 ಪರೀಕ್ಷಾ ಕೇಂದ್ರಗಳಲ್ಲಿ 8,41,666 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಮಾರ್ಚ್ 22 ರಿಂದ ಏಪ್ರಿಲ್ 4ರ ತನಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿತ್ತು.

English summary
After the Secondary School Leaving Certificate (SSLC) results were announced . over 46 schools in the state scored zero percentage results , with 21 schools being from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X