ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಪ್ರದೇಶ ಹೈಡ್ರಾಮ; ಬೆಂಗಳೂರಲ್ಲೇ ಇರುವ ಕಾಂಗ್ರೆಸ್ ಶಾಸಕರು!

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಮಧ್ಯಪ್ರದೇಶ ರಾಜಕೀಯ ಹೈಡ್ರಾಮದ ಸ್ಪಷ್ಟ ಚಿತ್ರಣ ಸೋಮವಾರ ಲಭ್ಯವಾಗಲಿದೆ. ಮುಖ್ಯಮಂತ್ರಿ ಕಮಲನಾಥ್‌ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ. 21 ಕಾಂಗ್ರೆಸ್ ಶಾಸಕರು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ.

22 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.
ಬೆಂಗಳೂರಿನ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿದ್ದ ಶಾಸಕರು ಭಾನುವಾರ ರಮಡ ಹೋಟೆಲ್‌ಗೆ ವಾಸ್ತವ್ಯ ಬದಲಿಸಿದ್ದಾರೆ.

ಮಾ. 16ಕ್ಕೆ ಬಹುಮತ ಸಾಬೀತು ಮಾಡಲು ಕಲಮನಾಥ್‌ಗೆ ಸೂಚನೆಮಾ. 16ಕ್ಕೆ ಬಹುಮತ ಸಾಬೀತು ಮಾಡಲು ಕಲಮನಾಥ್‌ಗೆ ಸೂಚನೆ

ಸೋಮವಾರ ರಾಜ್ಯಪಾಲ ಲಾಲ್‌ಜಿ ಥಂಡನ್ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಕಮಲನಾಥ್ ಬಹುಮತವನ್ನು ಸಾಬೀತು ಮಾಡಬೇಕು. ಆದರೆ, ಇನ್ನೂ ಹಲವು ಶಾಸಕರು ಮಧ್ಯಪ್ರದೇಶಕ್ಕೆ ತಲುಪಿಲ್ಲ.

ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಸಿಎಂ ಕಮಲನಾಥ್ ಕೌಂಟರ್ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಸಿಎಂ ಕಮಲನಾಥ್ ಕೌಂಟರ್

ಮಧ್ಯಪ್ರದೇಶದ ಆರೋಗ್ಯ ಸಚಿವ ಪಿ. ಸಿ. ಶರ್ಮಾ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಜೈಪುರ ಮತ್ತು ಬೆಂಗಳೂರಿನಿಂದ ಬರುವ ಶಾಸಕರನ್ನು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಹೇಳಿದ್ದಾರೆ.

Video; ಬೆಂಗಳೂರು ಪೊಲೀಸರನ್ನು ತಳ್ಳಿದ ಮಧ್ಯಪ್ರದೇಶ ಸಚಿವ..!Video; ಬೆಂಗಳೂರು ಪೊಲೀಸರನ್ನು ತಳ್ಳಿದ ಮಧ್ಯಪ್ರದೇಶ ಸಚಿವ..!

ಬೆಂಗಳೂರಿನಲ್ಲಿಯೇ ಶಾಸಕರ ವಾಸ್ತವ್ಯ

ಬೆಂಗಳೂರಿನಲ್ಲಿಯೇ ಶಾಸಕರ ವಾಸ್ತವ್ಯ

ಮಾರ್ಚ್ 5ರಿಂದ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿದ್ದ ಮಧ್ಯಪ್ರದೇಶದ ಶಾಸಕರು ಭಾನುವಾರ ರಮಡ ಹೋಟೆಲ್‌ಗೆ ವಾಸ್ತವ್ಯ ಬದಲಿಸಿದ್ದಾರೆ. ಇಂದು ಸಂಜೆ ಅಥವ ಸೋಮವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಎಲ್ಲಾ ಶಾಸಕರು ಭೋಪಾಲ್‌ಗೆ ಪ್ರಯಾಣಿಸಲಿದ್ದಾರೆ. ಶಾಸಕರಿರುವ ಹೋಟೆಲ್‌ಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬಹುಮತ ಸಾಬೀತು ಮಾಡಬೇಕು

ಬಹುಮತ ಸಾಬೀತು ಮಾಡಬೇಕು

ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸದಸ್ಯ ಬಲ 230. ಬಹುಮತ ಸಾಬೀತು ಪಡಿಸಲು 115 ಸದಸ್ಯ ಬಲ ಬೇಕು. ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತವನ್ನು ಪಡೆಯಲಿದೆಯೇ? ಕಾದು ನೋಡಬೇಕು. ಕಾಂಗ್ರೆಸ್ ಶಾಸಕರು 114 ಶಾಸಕರ ಬಲವನ್ನು ಹೊಂದಿತ್ತು. ಇವರಲ್ಲಿ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ 109 ಸದಸ್ಯ ಬಲವನ್ನು ಹೊಂದಿದೆ.

ನಾಳೆ ನಮ್ಮದೇ ಜಯ

ಮಧ್ಯಪ್ರದೇಶದ ಸಚಿವ, ಪಕ್ಷೇತರ ಶಾಸಕರ ಪ್ರದೀಪ್ ಜೈಸ್ವಾಲ್ ಭಾನುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿ, "ನಮ್ಮ ಬಳಿ ಸಂಖ್ಯೆ ಇದೆ. ಮುಖ್ಯಮಂತ್ರಿಗಳು ಭರವಸೆಯಿಂದ ಇದ್ದಾರೆ. ನಾಳೆ ವಿಶ್ವಾಸಮತ ಸಾಬೀತಾಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಹೈಡ್ರಾಮ ಅಂತ್ಯ

ರಾಜಕೀಯ ಹೈಡ್ರಾಮ ಅಂತ್ಯ

ಮಧ್ಯಪ್ರದೇಶದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಅವರ ಜೊತೆಗೆ 19 ಶಾಸಕರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ ಆರಂಭವಾಗಿತ್ತು. ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪ ಮೊತ್ತಕ್ಕೆ ಕುಸಿದಿತ್ತು. ಸೋಮವಾರ ರಾಜಕೀಯ ಹೈಡ್ರಾಮಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

ಕಾಂಗ್ರೆಸ್ ಶಾಸಕರು

ಮಧ್ಯಪ್ರದೇಶದ ಕೆಲವು ಕಾಂಗ್ರೆಸ್ ಶಾಸಕರು ರಾಜಸ್ಥಾನದ ಜೈಪುರದ ರೆಸಾರ್ಟ್ ನಲ್ಲಿದ್ದರು. ಭಾನುವಾರ ಅವರು ರಾಜಧಾನಿ ಭೋಪಾಲ್‌ಗೆ ಆಗಮಿಸಿದ್ದಾರೆ. ಸೋಮವಾರ ನಡೆಯುವ ವಿಶ್ವಾಸಮತ ಪ್ರಕ್ರಿಯೆ ಕುತೂಹಲಕ್ಕೆ ಕಾರಣವಾಗಿದೆ.

English summary
21 MadhyaPradesh Congress MLA's shifted from Prestige Golfshire Club to Ramada hotel in Yelahanka. CM Kamal Nath will go for trust vote in the assembly on March 16, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X