ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ; 20 ಸಾವಿರ ಮರಕ್ಕೆ ಕೊಡಲಿ

|
Google Oneindia Kannada News

ಬೆಂಗಳೂರು, ನವೆಂಬರ್ 09 : ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆದಿದೆ. ದಕ್ಷಿಣ ಭಾರತದ ಮೊದಲ ಹಸಿರು ಎಕ್ಸ್‌ಪ್ರೆಸ್ ವೇ ಹೆದ್ದಾರಿಗೆ 20 ಸಾವಿರ ಮರಗಳಿಗೆ ಕೊಡಲಿ ಬೀಳಲಿದೆ.

ಎನ್‌ಎಚ್‌ಎಎಐ ಯೋಜನೆಯನ್ನು ಮೂರು ಭಾಗವಾಗಿ ವಿಭಾಗ ಮಾಡಿದೆ. ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಈಗ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಕರ್ನಾಟಕ 20,748 ಮರಗಳನ್ನು ಕಳೆದುಕೊಳ್ಳಲಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ; ಟೆಂಡರ್ ಆಹ್ವಾನಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ; ಟೆಂಡರ್ ಆಹ್ವಾನ

ಮೊದಲ ಹಂತದ ಯೋಜನೆ ಬೆಂಗಳೂರು ಹೊರವಲಯದಿಂದ ಆರಂಭಗೊಂಡು ಕೋಲಾರ ಜಿಲ್ಲೆಯ ಮುಳಬಾಗಿಲು ಬೇತಮಂಗಲ ಬಳಿ ಕೊನೆಯಾಗಲಿದೆ. ಕೋಲಾರ ಭಾಗದಲ್ಲಿ ಶೇ 85ರಷ್ಟು ಮರಗಳನ್ನು ಕಡಿಯಬೇಕಾಗುತ್ತದೆ.

ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ

20748 Tree Cut For Bengaluru Chennai Expressway

ಇವುಗಳಲ್ಲಿ ನೀಲಗಿರಿ, ಮಾವು, ತೆಂಗು, ಸಾಗುವಾನಿ, ಪೇರಳೆ, ಹುಣಸೆ ಮರಗಳು ಸೇರಿವೆ. ನೀಲಗಿರಿ ಮರಗಳ ಕಡಿತದಿಂದ ಹಾನಿಯಾಗುವುದಿಲ್ಲ. ಆದರೆ, ಉಳಿದ ಮರಗಳನ್ನು ಕಡಿಯುವುದರಿಂದ ರೈತರ ಬದುಕಿನ ಮೇಲೆಯೂ ಪರಿಣಾಮ ಉಂಟಾಗಲಿದೆ.

Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್? Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್?

ಮೊದಲ ಹಂತದ ಮಾರ್ಗಕ್ಕಾಗಿ 1890 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಒಟ್ಟು 72 ಗ್ರಾಮಗಳ ಮೂಲಕ ರಸ್ತೆ ಹಾದು ಹೋಗಲಿದೆ. ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಈಗಾಗಲೇ ಯೋಜನೆಗೆ ಅನುಮತಿಯನ್ನು ನೀಡಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ-ಆಂಧ್ರಪ್ರದೇಶ ಮೂಲಕ ಸಾಗಿ ತಮಿಳುನಾಡು ತಲುಪಲಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವಿನ ದೂರ 250 ಕಿ. ಮೀ.ಗೆ ಕಡಿಮೆಯಾಗಲಿದೆ.

Recommended Video

Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

1990ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಬೆಂಗಳೂರು-ಚೆನ್ನೈ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರ ಈಗ ಯೋಜನೆಗೆ ಚುರುಕು ನೀಡಿದೆ.

English summary
20,748 tree will cut for the Bengaluru-Chennai expressway project. NHAI called for tender to executing the road project. Expressway will connect Bengaluru and Chennai via Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X