ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗೆ 204 ಬೋಗಿ ಆಂಧ್ರದಲ್ಲಿ ನಿರ್ಮಾಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆಗೆ 216 ಬೋಗಿಗಳನ್ನು ತಯಾರು ಮಾಡುವ ಟೆಂಡರ್‌ ಅನ್ನು ಚೀನಾದ ಕಂಪನಿಗೆ ನೀಡಿದೆ. ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಕಂಪನಿಗಳಲ್ಲಿ ಚೀನಾದ ಕಂಪನಿಯೇ ಕಡಿಮೆ ಮೊತ್ತದ ಬಿಡ್ ಮಾಡಿತ್ತು.

ಚೀನಾದ CRRC Nanjing Puzhen Co Ltd ಕಂಪನಿ 216 ಬೋಗಿಗಳನ್ನು ತಯಾರು ಮಾಡಲು 1,578 ಕೋಟಿ ರೂ.ಗಳ ಬಿಡ್ ಮಾಡಿತ್ತು. ಕೆನಡಾ ಮೂಲದ ಮತ್ತೊಂದು ಕಂಪನಿ 1,801 ಕೋಟಿ ರೂ. ಬಿಡ್ ಮಾಡಿತ್ತು.

ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿವೆ 216 ಚೀನಾ ಬೋಗಿಗಳುನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿವೆ 216 ಚೀನಾ ಬೋಗಿಗಳು

ಚೀನಾ ಮೂಲದ ಕಂಪನಿ ಟೆಂಡರ್ ಪಡೆದಿದ್ದು 216 ಬೋಗಿಗಳ ಪೈಕಿ 204 ಬೋಗಿಗಳು ಮೇಕ್ ಇನ್ ಇಂಡಿಯಾ ಯೋಜನೆಯಡಿ ಆಂಧ್ರಪ್ರದೇಶದಲ್ಲಿ ತಯಾರಾಗಲಿವೆ. ಬಿಇಎಂಎಲ್ ಸಹ ಟೆಂಡರ್‌ನಲ್ಲಿ ಪಾಲ್ಗೊಂಡು 1,996 ಕೋಟಿ ರೂ. ಬಿಡ್ ಮಾಡಿತ್ತು.

2 ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ದಿನಾಂಕ ನಿಗದಿ 2 ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ದಿನಾಂಕ ನಿಗದಿ

204 Namma Metro Coaches Will Manufacture In Andhra Pradesh

ಒಂದು ವರ್ಷದ ಹಿಂದೆ ಬಿಇಎಂಎಲ್ ಆರು ಬೋಗಿಗಳ 7 ರೈಲನ್ನು ಬಿಎಂಆರ್‌ಸಿಎಲ್‌ಗೆ ಒದಗಿಸುವ 400 ಕೋಟಿಯ ಟೆಂಡರ್ ಪಡೆದಿತ್ತು. ಈ ಬೋಗಿಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತದೆ.

ಮಾಂಸ ಪ್ರಿಯರಿಗೆ ಆಘಾತ ನೀಡಿದ ನಮ್ಮ ಮೆಟ್ರೋ!ಮಾಂಸ ಪ್ರಿಯರಿಗೆ ಆಘಾತ ನೀಡಿದ ನಮ್ಮ ಮೆಟ್ರೋ!

ಒಟ್ಟು 216 ರೈಲುಗಳಲ್ಲಿ ಆರು ಬೋಗಿಗಳ 21 ರೈಲುಗಳನ್ನು ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಓಡಿಸಲಾಗುತ್ತದೆ. 15 ಆರು ಬೋಗಿಯ ರೈಲನ್ನು ಆರ್. ವಿ. ರಸ್ತೆ ಬೊಮ್ಮಸಂದ್ರ ನಡುವಿನ 19 ಕಿ. ಮೀ. ಮಾರ್ಗದಲ್ಲಿ ಓಡಿಸಲಾಗುತ್ತದೆ.

ನಮ್ಮ ಮೆಟ್ರೋ 2ನೇ ಹಂತದ 72 ಕಿ. ಮೀ. ಮಾರ್ಗದಲ್ಲಿ ಎರಡು ಮಾರ್ಗ ಈ ವರ್ಷದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಕನಕಪುರ ಮಾರ್ಗ ಆಗಸ್ಟ್ 15ಕ್ಕೆ, ಮೈಸೂರು ರಸ್ತೆಯ ಮಾರ್ಗ ನವೆಂಬರ್ 1ಕ್ಕೆ ರೈಲು ಸಂಚಾರಕ್ಕೆ ಮುಕ್ತವಾಗಲಿದೆ.

English summary
China's CRRC Nanjing Puzhen Co Ltd had quoted about Rs 1,578 crore for manufacture 216 coaches for BMRCL. In this 204 coach will be manufacture in Andhra Pradesha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X