ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂಪಾ ಸೇರಿ 70 ಸಾಧಕರಿಗೆ 2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: 2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಸಾಹಿತಿ ಚಂಪಾ ಸೇರಿದಂತೆ 70 ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಚಂದ್ರು ಕೂಡ ಒಬ್ಬರು. ಬಿಬಿಎಂಪಿಯು ಪ್ರತಿ ವರ್ಷವು ಆ ವರ್ಷದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿತ್ತು.

ಪ್ರಕಾಶ್ ಕಂಬತ್ತಳ್ಳಿಗೆ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆಯ 'ಪುಸ್ತಕ ಸಂಸ್ಕೃತಿ' ಪ್ರಶಸ್ತಿಪ್ರಕಾಶ್ ಕಂಬತ್ತಳ್ಳಿಗೆ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆಯ 'ಪುಸ್ತಕ ಸಂಸ್ಕೃತಿ' ಪ್ರಶಸ್ತಿ

ಅದರಂತೆ ಸಮಿತಿಯೂ ವಿವಿಧ ಕ್ಷೇತ್ರಗಳ 70 ಸಾಧಕರನ್ನು ಈ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಸೆಪ್ಟೆಂಬರ್​ 4ರಂದು ಡಾ.ರಾಜ್​ಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

2019 Kempegowda Award Declared

ಪ್ರಶಸ್ತಿಯೂ 25 ಸಾವಿರ ನಗದು ಹಾಗೂ ಕೆಂಪೇಗೌಡರ ಸ್ಮರಣಿಕೆಯನ್ನು ಹೊಂದಿರುತ್ತದೆ. ಇದೇ ವೇಳೆ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸ್ಮರಣಾರ್ಥ ಹತ್ತು ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ನಗರದ ಸಾಧಕರಿಗೆ 'ನಮ್ಮ ಬೆಂಗಳೂರು' ಪ್ರಶಸ್ತಿ ಗೌರವನಗರದ ಸಾಧಕರಿಗೆ 'ನಮ್ಮ ಬೆಂಗಳೂರು' ಪ್ರಶಸ್ತಿ ಗೌರವ

-ಚಂಪಾ (ಸಾಹಿತ್ಯ)
-ಮುಖ್ಯಮಂತ್ರಿ ಚಂದ್ರು (ಸಿನಿಮಾ)
-ಪ್ರೊ.ರವಿವರ್ಮ ಕುಮಾರ್ (ಕಾನೂನು)
-ಅಬ್ದುಲ್ ಬಷೀರ್ (ಸಾಹಿತ್ಯ)
-ಬಿಂದುರಾಣಿ (ಕ್ರೀಡೆ)
-ಶಾಂತರಾಮಮಮೂರ್ತಿ(ಕ್ರೀಡೆ)
-ಸೈಯ್ಯದ್ ಇಬಯಾಯತುಲ್ಲಾ (ಅಂಗವಿಕಲ ಕ್ರೀಡಾಪಟು)
-ಕುಮಾರಿ ಪ್ರತ್ಯಕ್ಷಾ- (ಬಾಲ ಪ್ರತಿಭೆ)
-ಪ್ರೊ. ನಾಗೇಶ್ ಬೆಟ್ಟಕೋಟೆ (ರಂಗಭೂಮಿ)
-ಡಿ.ರೂಪಾ (ಸರ್ಕಾರಿ ಸೇವೆ)
-ಮಂಜುಳಾ ಗುರುರಾಜ್ (ಸಂಗೀತ)
-ಅನುಚೇತ್​ ಮತ್ತು ತಂಡ (ಗೌರಿ ಹತ್ಯೆ ಪ್ರಕರಣ ಬೇಧಿಸಿದ್ದಕ್ಕೆ)

English summary
Including Champa 70 Persons To Get Kempegowda Award This Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X