ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಟ್‌ಫಿನಿಕ್ಸ್ ಎಕ್ಸ್‌ಚೇಂಜ್ ಹ್ಯಾಕ್, ದಂಪತಿ ಬಂಧನ: ಶ್ರೀಕಿಯ ನಂಟು ಕುರಿತು ತನಿಖೆ?

|
Google Oneindia Kannada News

ಬೆಂಗಳೂರು, ಮಾ. 14: ಸದ್ದಿಲ್ಲದೇ ತೆರೆಮರೆಗೆ ಸರಿದಿದ್ದ ಬಿಟ್ ಕಾಯಿಕ್ ಪ್ರಕರಣಕ್ಕೆ ಮತ್ತೆ ರೋಚಕ ಟ್ವಿಸ್ಟ್ ಸಿಕ್ಕಿದೆ. 2016 ರಲ್ಲಿ ಬಿಟ್ ಕಾಯಿನ್ ಎಕ್ಸ್ ಚೇಂಜ್ ಹ್ಯಾಕ್ ಮಾಡಿ ಬಿಟ್ ಕಾಯಿನ್ ದೋಚಿದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ಇಲ್ಯಾ ಲಿಚೆಸ್ಟೀನ್ ಮತ್ತು ಹೀಥರ್ ಮೋರ್ಗನ್ ಎಂಬ ದಂಪತಿಯನ್ನು ಎಫ್‌ಬಿಐ ಬಂಧಿಸಿದ್ದು, ಈ ದಂಪತಿಗೆ ಭಾರತದ ನಂಟು ಇರುವುದು ತನಿಖೆ ವೇಳೆ ದೃಢಪಟ್ಟಿದೆ. ಹೀಗಾಗಿ ಬಿಟ್ ಕಾಯಿನ್ ಅಕ್ರಮದ ಸೂತ್ರಧಾರ ಹ್ಯಾಕರ್ ಶ್ರೀಕಿಗೂ ಅಮೆರಿಕಾದ ಬಿಟ್ ಫಿನಿಕ್ಸ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿವಿದೆ ಎಂಬ ಅನುಮಾನ ಶುರುವಾಗಿದೆ.

ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ಸಂಬಂಧ ಹ್ಯಾಕರ್ ಶ್ರೀಕೃಷ್ಣ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಕರ್ನಾಟಕದ ಬಿಟ್ ಕಾಯಿನ್ ಅಕ್ರಮ ಬಯಲಿಗೆ ಬಂದಿತ್ತು. ಮಾತ್ರವಲ್ಲ ಅಮೆರಿಕದ ಬಿಟ್ ಫಿನೆಕ್ಸ್ ಬಿಟ್ ಕಾಯಿನ್ ಎಕ್ಸ್ ಚೇಂಜ್‌ನ್ನು 2016 ರಲ್ಲಿ ಹ್ಯಾಕ್ ಮಾಡಿದ್ದ ಪ್ರಕರಣದಲ್ಲಿ ಶ್ರೀಕಿ ಪಾತ್ರವಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಅಲ್ಲದೇ ಕರ್ನಾಟಕ, ಆಂಧ್ರ ಪ್ರದೇಶದ ಇ- ಪೋರ್ಟಲ್ ಹ್ಯಾಕ್ ಮಾಡಿ, ಕೋಟಿ ಕೋಟಿ ಹಣವನ್ನು ಟ್ರಸ್ಟ್ ವೊಂದಕ್ಕೆ ವರ್ಗಾವಣೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದ ಅಕ್ರಮವೂ ಇದೇ ವೇಳೆ ಬಯಲಿಗೆ ಬಂದಿತ್ತು.

ಬಿಟ್‌ಕಾಯಿನ್ ಖರೀದಿಯಲ್ಲಿ ವಂಚನೆ: ಆರೋಪಿ ಜಾಮೀನು ರದ್ದುಗೊಳಿಸಲು ಒಪ್ಪದ ಹೈಕೋರ್ಟ್ಬಿಟ್‌ಕಾಯಿನ್ ಖರೀದಿಯಲ್ಲಿ ವಂಚನೆ: ಆರೋಪಿ ಜಾಮೀನು ರದ್ದುಗೊಳಿಸಲು ಒಪ್ಪದ ಹೈಕೋರ್ಟ್

ದಿನಗಳು ಕಳೆದಂತೆ ಕರ್ನಾಟಕ ಬಿಟ್ ಕಾಯಿನ್ ಪ್ರಕರಣ ತೆರೆ ಮೆರೆಗೆ ಸರಿದಿತ್ತು. ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿದ್ದ ಹ್ಯಾಕರ್ ಶ್ರೀಕಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಜೀವನಭೀಮಾ ನಗರದ ಹೋಟೆಲ್ ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಹ್ಯಾಕರ್ ಶ್ರೀಕಿ ಬಂಧನಕ್ಕೆ ಒಳಗಾಗಿದ್ದ.

2016 Bitcoin Exchange Hack Case; FBI Arrested Couple in America

ಆನಂತರ ಜಮೀನು ಪಡೆದು ಬಿಡುಗೆಯಾದ ಬಳಿಕ ಪುನಃ ಎಲ್ಲಿದ್ದಾನೆ ಎಂಬುದರ ಸುಳಿವು ಇಲ್ಲ. ಪ್ರಭಾವಿ ರಾಜಕಾರಣಿಗಳ ಪುತ್ರರು ಶ್ರೀಕಿ ಜತೆ ನಂಟು ಹೊಂದಿರುವ ಸಂಗತಿಗಳು ಹೊರ ಬೀಳುತ್ತಿದ್ದಂತೆ, ಬಿಟ್ ಕಾಯಿನ್ ಪ್ರಕರಣ ಸದ್ದಿಲ್ಲದೇ ತೆರೆಮರೆಗೆ ಸರಿದಿತ್ತು. ಇದೀಗ ಅಮೆರಿಕಾದಲ್ಲಿ ಬಿಟ್ ಫಿನಿಕ್ಸ್ ಹ್ಯಾಕಿಂಗ್ ಪ್ರಕರಣದಲ್ಲಿ ಅಮೆರಿಕಾದ ದಂಪತಿ ಬಂಧನಕ್ಕೆ ಒಳಗಾಗಿದ್ದು, ಭಾರತದ ನಂಟು ಇರುವುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಅಮೆರಿಕಾದ ಎಫ್ ಬಿಐ ತನಿಖಾ ಸಂಸ್ಥೆಯ ಅಧಿಕಾರಿಗಳು ಕರ್ನಾಟಕ್ಕೆ ಭೇಟಿ ಕೊಟ್ಟು ಬಿಟ್ ಫಿನಿಕ್ಸ್ ಹ್ಯಾಕಿಂಗ್ ಪ್ರಕರಣದ ವಿವರ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

2016 Bitcoin Exchange Hack Case; FBI Arrested Couple in America

ಅಮೆರಿಕಾದಲ್ಲಿ 2016 ರಲ್ಲಿ ಬಿಟ್‌ಫಿನಿಕ್ಸ್ ಕ್ರಿಪ್ಟೋ ಕರೆನ್ಸಿಯ ಎಕ್ಸ್ ಚೇಂಜ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ತನಿಖಾ ಸಂಸ್ಥೆಗಳು ನ್ಯೂಯಾರ್ಕ್ ಮೂಲದ ಹೀಥರ್ ಮೋರ್ಗ್ ಇಲಿಯಾ ಲಿಚೆಸ್ಟಿನ್ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ದಂಪತಿ ಬಿಟ್ ಫಿನಿಕ್ಸ್ ಎಕ್ಸ್ ಚೇಂಜ್ ಹ್ಯಾಕ್ ಮಾಡಿ 25,000 ಬಿಟ್ ಕಾಯಿನ್ ತಮ್ಮ ವಾಲೆಟ್ ಗೆ ವರ್ಗಾವಣೆ ಮಾಡಿಕೊಂಡಿದ್ದರು. ಕ್ರಿಪ್ಟೋ ಕರೆನ್ಸಿ ಬಹುದೊಡ್ಡ ಹಗರಣ ಇದಾಗಿದ್ದು, 72 ಬಿಲಿಯನ್ ಮೊತ್ತದ್ದು ಎಂದು ಅಮೆರಿಕಾ ತನಿಖಾ ಸಂಸ್ಥೆ ಹೇಳಿದೆ.

2016 Bitcoin Exchange Hack Case; FBI Arrested Couple in America

ಹ್ಯಾಕರ್ ದಂಪತಿಯನ್ನು ಬಂಧಿಸಿದ್ದು, 3.6 ಬಿಲಿಯನ್ ಮೊತ್ತದ ಕ್ರಿಪ್ಟೋ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ 4.5 ಬಿಲಿಯನ್ ಆಗಿದೆ ಎಂದು ಹೇಳಲಾಗುತ್ತಿದೆ. ನ್ಯೂಯಾರ್ಕ ನಿವಾಸಿಗಳಾದ ಹೀಥರ್ ಮಾರ್ಗನ್ ಮತ್ತು ಇಲ್ಯಾ ಲಿಚೆಟೆಸ್ಟಿನ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಮಾರು 2000 ಕ್ಕೂ ಹೆಚ್ಚು ಬಿಟ್‌ಕಾಯಿನ್ ಅನಧಿಕೃತ ವಹಿವಾಟು ನಡೆಸಿರುವುದು ದೃಢಪಟ್ಟಿದೆ.

2016 Bitcoin Exchange Hack Case; FBI Arrested Couple in America

25 ಸಾವಿರ ಬಿಟ್‌ಕಾಯಿನ್ ಗಳನ್ನು ಹ್ಯಾಕ್ ಮಾಡಿ, ಈ ದಂಪತಿ ತಮ್ಮ ಸ್ವಂತ ಡಿಜಿಟಲ್ ವಾಲೆಟ್ ಗೆ ವರ್ಗಾವಣೆ ಮಾಡಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಈ ಬೃಹತ್ ಮೊತ್ತದ ಬಿಟ್ ಕಾಯಿನ್ ಹ್ಯಾಕ್ ಮಾಡಿ ವರ್ಗಾವಣೆ ಮಾಡುವ ಮುನ್ನ ಈ ಹ್ಯಾಕರ್ ದಂಪತಿ ವಾಲೆಟ್ ಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಬಿಟ್‌ಕಾಯಿನ್ ಎಕ್ಸ್ ಚೇಂಜ್ ಹ್ಯಾಕ್ ಮಾಡಿದ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಶಾಮೀಲಾಗಿರುವುದು ಸಿಸಿಬಿ ತನಿಖೆ ವೇಳೆ ಬಯಲಾಗಿತ್ತು. ಇದೀಗ ಬಿಟ್ ಫಿನಿಕ್ಸ್ ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಹ್ಯಾಕ್ ಮ್ಯಾಡಿರುವ ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಅಮೆರಿಕಾ ತನಿಖಾ ಸಂಸ್ಥೆಗಳು ಭಾರತದ ನಂಟು ಜಾಡು ಹಿಡಿದು ತನಿಖೆ ನಡೆಸಲಿವೆ. ಕೆಲವೇ ದಿನಗಳಲ್ಲಿ ಅಮೆರಿಕಾ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ಕರ್ನಾಟಕದಲ್ಲಿ ಬೆಳಕಿಗೆ ಬಂದ ಬಿಟ್ ಕಾಯಿನ್ ಹಗರಣದ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹ್ಯಾಕರ್ ಶ್ರೀಕೃಷ್ಣ ಹೋಟೆಲ್ ಗಲಾಟೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಎಲ್ಲಿದ್ದಾನೆ ಎಂಬ ಸಂಗತಿ ಯಾರಿಗೂ ಗೊತ್ತಾದಂತೆ ಕಾಣುತ್ತಿಲ್ಲ. ಹ್ಯಾಕರ್ ಶ್ರೀಕಿ ಜತೆ ಹಲವು ರಾಜಕಾರಣಿಗಳ ನಂಟು ಹೊಂದಿರುವ ಮಾತು ಕೇಳಿ ಬಂದಿತ್ತು. ರಾಜಕಾರಣಿಗಳ ಮಕ್ಕಳು ಹೆಸರು ತಳಕು ಹಾಕಿಕೊಳ್ಳುತ್ತಿದ್ದಂತೆ ಪ್ರಕರಣ ಕೂಡ ಸದ್ದಿಲ್ಲದೇ ತೆರೆಮರೆಗೆ ಸರಿದಿತ್ತು. ಇದೀಗ ಅಮೆರಿಕಾದಲ್ಲಿ ಬಿಟ್ ಕಾಯಿನ್ ಪ್ರಕರಣ ಟಿಸಿಲೊಡೆದಿದ್ದು, ಭಾರತದ ಲಿಂಕ್ ಜಾಡು ಹಿಡಿದು ತನಿಖೆ ನಡೆಸಿದರೆ ಒಂದಷ್ಟು ಮಂದಿಗೆ ಕಂಟಕ ಎದರಾದರೂ ಅಚ್ಚರಿ ಪಡಬೇಕಿಲ್ಲ.

Recommended Video

ನಾಯಕತ್ವ ಬದಲಾವಣೆಯಾದ್ರೆ ಮಾತ್ರ ಮುಂದೆ ಕಾಂಗ್ರೆಸ್ ಗೆಲ್ಲೋದಕ್ಕೆ ಸಾಧ್ಯ!!! | Oneindia Kannada

English summary
2016 Bitfinex bitcoin hack case; FBI Arrested Couple in America and they likely to visit Karnataka to investigate about Hacker Sriki in connection with the case. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X