ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂ. ವೀರಭದ್ರಪ್ಪ ಅವರಿಗೆ ನೃಪತುಂಗ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ನ. 15 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನೀಡುವ ನೃಪ­ತುಂಗ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2014ನೇ ಪ್ರಶಸ್ತಿಗೆ ಸಾಹಿತಿ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು 2014ನೇ ಸಾಲಿನ 'ನೃಪ­ತುಂಗ' ಪ್ರಶಸ್ತಿಗೆ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ಪ್ರಕಟಿಸಿದ್ದಾರೆ.. ಪ್ರಶಸ್ತಿಯು ರೂ. 7,00,001 ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

Kum Veerabhadrappa

ಕನ್ನಡ ಸಾಹಿತ್ಯಕ್ಕೆ ನೀಡುವ ಕೊಡುಗೆ ಪರಿಗಣಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತವೆ. ಈ ಪ್ರಶಸ್ತಿಯನ್ನು ಯಾವುದೇ ಕೃತಿಗೆ ನೀಡಲಾಗುವುದಿಲ್ಲ. ಡಿಸೆಂಬರ್‌ 12ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. [ಜ್ಞಾನಪೀಠ ಪ್ರಶಸ್ತಿಗೆ ಅನಂತಮೂರ್ತಿ, ಕಾರ್ನಾಡ್ ಅರ್ಹರಲ್ಲ]

17, 18ರಂದು ವಿಚಾರ ಸಂಕಿರಣ : ನೃಪತುಂಗ ಪ್ರಶಸ್ತಿ ಪಡೆದವರ ಬದುಕು-ಬರಹ ಕುರಿತು ಡಿ. 17-18ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಪುಂಡಲೀಕ ಹಾಲಂಬಿ ಅವರು ಹೇಳಿದ್ದಾರೆ.

ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ ಪ್ರಕಟ : ಡಾ. ಕವಿತಾ ರೈ ಅವರಿಗೆ 2014ನೇ ಸಾಲಿನ ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಪುಂಡಲೀಕ ಹಾಲಂಬಿ ಅವರು ಹೇಳಿದ್ದಾರೆ. ನ. 26ರಂದು ಸಾಹಿತ್ಯ ಪರಿ­ಷತ್ತಿಗೆ ಸಭಾಂಗಣ ಪ್ರಶಸ್ತ ಪ್ರದಾನ ಮಾಡಲಿದ್ದು, ಇದು ರೂ. 1,11,111 ನಗದು ಮತ್ತು ಸ್ಮರಣಿಕೆಯನ್ನಯ ಒಳಗೊಂಡಿದೆ.

English summary
Noted Kannada writer Kum. Veerabhadrappa has been chosen for the prestigious Nrupatunga Award of the Kannada Sahitya Parishat for his contribution to Kannada literature. It carries a cash prize of Rs. 7,00,001 and a citation. It will be conferred on the writer on December 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X