ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂನಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ, ತಪ್ಪೊಪ್ಪಿಕೊಂಡ ಆರೋಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28 : ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಜನವರಿ 7ರಂದು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.

ಶುಕ್ರವಾರ ಆರೋಪಿ ಮಧುಕರ್ ರೆಡ್ಡಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರ ಮುಂದೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಬೇಡ. ತಪ್ಪು ಮಾಡಿದ್ದು ನಾನೇ, ಇಂದೇ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡ.

ಬೆಂಗಳೂರು ಎಟಿಎಂ ದಾಳಿಗೆ 2 ವರ್ಷ, ಇನ್ನೂ ಸಿಕ್ಕಿಲ್ಲ ಆರೋಪಿಬೆಂಗಳೂರು ಎಟಿಎಂ ದಾಳಿಗೆ 2 ವರ್ಷ, ಇನ್ನೂ ಸಿಕ್ಕಿಲ್ಲ ಆರೋಪಿ

ನನ್ನ ಪರವಾಗಿ ಯಾವುದೇ ವಕೀಲರು ಬೇಡ. ನನಗೆ ಹೆಂಡತಿ ಮಕ್ಕಳು ಇದ್ದಾರೆ. ನಾನು ವಾಪಸ್ ಹೋಗಬೇಕು. ದಯವಿಟ್ಟು ಇಂದೇ ನನಗೆ ಶಿಕ್ಷೆ ನೀಡಿ ಎಂದು 65ನೇ ಸೆಷನ್ಸ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ.

ಬೆಂಗಳೂರು ಎಟಿಎಂ ದಾಳಿಗೆ ಒಂದು ವರ್ಷಬೆಂಗಳೂರು ಎಟಿಎಂ ದಾಳಿಗೆ ಒಂದು ವರ್ಷ

ನೀವು ಮಾಡಿರುವುದು ಜೀವಾವಧಿ ಶಿಕ್ಷೆ ನೀಡುವ ಪ್ರಕರಣ. ವಕೀಲರ ನೇಮಕದ ಕುರಿತು ಪೊಲೀಸರ ಜೊತೆ ಚರ್ಚೆ ನಡೆಸಿ ತೀರ್ಮಾನಿಸಿ ಎಂದು ನ್ಯಾಯಾಧೀಶರು ಹೇಳಿದ್ದು, ಪ್ರಕರಣವ ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿದೆ.

ATM attacker

ಏನಿದು ಪ್ರಕರಣ? : 2013ರ ನವೆಂಬರ್ 19ರಂದು ಮುಂಜಾನೆ ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಸರ್ಕಲ್‌ನಲ್ಲಿ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದಿತ್ತು.

ಆಸ್ಪತ್ರೆಯಿಂದ ಮನೆ ಸೇರಿದ ಜ್ಯೋತಿ ಉದಯ್ಆಸ್ಪತ್ರೆಯಿಂದ ಮನೆ ಸೇರಿದ ಜ್ಯೋತಿ ಉದಯ್

ಮಗಳ ಹುಟ್ಟು ಹಬ್ಬಕ್ಕೆ ಉಡುಗೊರೆ ಖರೀದಿ ಮಾಡಲು ಹಣ ಡ್ರಾ ಮಾಡಲು ಜ್ಯೋತಿ ಉದಯ್ ಎಟಿಎಂಗೆ ಹೋಗಿದ್ದರು. ಆಗ ಅವರ ಮೇಲೆ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿದ್ದರು.

English summary
Madhukar Reddy accused of the brutal assault on 48 year old Jyothi Uday confessed before judge on December 28, 2018. Madhukar Reddy arrested after 3 years of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X