ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೆಸ್ಟೀಜ್ ಸ್ಟೀಜ್ ಅಪಾರ್ಟ್‌ಮೆಂಟ್‌ನ 20 ಮಂದಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

|
Google Oneindia Kannada News

ಬೆಂಗಳೂರು, ಏ.9: ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ 20ಕ್ಕೂ ಹೆಚ್ಚು ನಿವಾಸಿಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲುಷಿತ ನೀರು ಕುಡಿದು ಹರಳೂರು ಪ್ರೆಸ್ಟೀಜ್ ಫರ್ಮ್ಸ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನ ನಿವಾಸಿಗಳು ಆಸ್ಪತ್ರೆ ಸೇರಿದ್ದಾರೆ. 10-17ನೇ ಮಹಡಿಯ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತೇಜಸ್, ಕೇಶವ್, ಅದಿತಿ, ನಕ್ಷ, ಅಭಿನವ, ಅರ್ಜಿತ್, ಪರಿಯದರ್ಶನ್, ತನಿಷ್ಕ್, ವೀರ್, ರಾಧಿಕಾ, ಆರವ್ ಹಾಗೂ ಸುಗುಣ ಗೋಪಿನಾಥನ್ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾದಗಿರಿಯಲ್ಲಿ ಕುಡಿಯುವ ನೀರಿಗೇ ವಿಷ ಬೆರೆಸಿದ ಕಿಡಿಗೇಡಿಗಳು ಯಾದಗಿರಿಯಲ್ಲಿ ಕುಡಿಯುವ ನೀರಿಗೇ ವಿಷ ಬೆರೆಸಿದ ಕಿಡಿಗೇಡಿಗಳು

ಇನ್ನುಳಿದ ಮಹಡಿಯ ನಿವಾಸಿಗಳಲ್ಲಿ ಕೂಡ ಇದೇ ರೀತಿ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹೇಳಲಾಗುತ್ತಿದೆ. 2 ವರ್ಷದ ಮಗುವಿನ ಸ್ಥಿತಿ ಸ್ವಲ್ಪ ಗಂಭೀರವಾಗಿದೆ.

20 residents take ill at Prestige apartment

ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 19 ಮಹಡಿಗಳಿವೆ. ಟ್ಯಾಂಕಿಗೆ ನೀರು ಪಂಪ್ ಮಾಡಲಾಗುತ್ತದೆ ಅದರಿಂದ ನಿವಾಸಿಗಳು ಬಳಸಿಕೊಳ್ಳುತ್ತಾರೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

English summary
Around 20 residents, mostly children and the elderly, have taken ill after consuming contaminated water at the Prestige Ferns Residency Apartment on Haralur Road in Bellandur since April 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X