ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್‌ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಬೆಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 20 ಸಿಬಿಡಿ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ಕೆಲವೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿವೆ.

ಸೆಂಟ್ರಲ್‌ ಬ್ಯುಸಿನೆಲ್‌ ಡಿಸ್ಟ್ರಿಕ್‌(ಸಿಬಿಡಿ) ರಸ್ತೆಗಳಲ್ಲಿ ವಿಧಾನಸೌಧ ಸುತ್ತ-ಮುತ್ತಲಿನ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಅಧಿವೇಶನ ಆರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ.

 ಮಂಡ್ಯ; ರಸ್ತೆ ಹಂಪ್ ದಾಟುವಾಗ ಬೈಕಿನಿಂದ ಬಿದ್ದು ಮಗು ಸಾವು ಮಂಡ್ಯ; ರಸ್ತೆ ಹಂಪ್ ದಾಟುವಾಗ ಬೈಕಿನಿಂದ ಬಿದ್ದು ಮಗು ಸಾವು

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ರಾಜಭವನ ರಸ್ತೆ ಕಾಮಗಾರಿ ಜನವರಿ 5ರೊಳಗೆ, ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಕಾಮಗಾರಿ 10 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ

20 Major Road Work Taken Up Under Smart City Project

ಒಟ್ಟು 20 ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ರಸ್ತೆಯ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಆಗಬಾರದು ಎಂದು ಸಚಿವರು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 120 ಕಿ.ಮೀ ಉದ್ದದ ಸೈಕಲ್ ಲೇನ್ ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 120 ಕಿ.ಮೀ ಉದ್ದದ ಸೈಕಲ್ ಲೇನ್

ಬೆಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಎರಡು ಭಾಗವಾಗಿ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 255.69 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ 200.81 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದೆ.

Recommended Video

ಮನ್ಸೂರ್ ವಿಡಿಯೋ ಅಲ್ಲಿ ಹೇಳಿರೋದಾದ್ರು ಏನು? | Oneindia Kannada

ನಗರದಲ್ಲಿನ ರಸ್ತೆ ಕಾಮಗಾರಿಗಳ ಸ್ಥಿತಿಗತಿಗಳ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಚಿವರು ವರದಿಯನ್ನು ನೀಡಲಿದ್ದಾರೆ.

English summary
Under smart city project 20 major road work taken up around Vidhana Soudha, Bengaluru. Central Business District roads work will complete in few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X