ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲಿಲ್ಲದಿದ್ದರೂ ಕಂತು ಕಂತು ಲಂಚ: ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ !

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ಆತನನ್ನು ನೋಡಿದ್ರೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ! ಲಂಚ ಕಾಸಿನ ವಿಚಾರಕ್ಕೆ ಬಂದ್ರೆ ಐದು ಪೈಸೆಯೂ ಬಿಡಲ್ಲ, ಯಾರನ್ನೂ ನಂಬಲ್ಲ ! ಇವತ್ತು 20 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಿಬಿಎಂಪಿಯಲ್ಲಿ ಕುಂಟಣ್ಣ ಎಂದೇ ಖ್ಯಾತಿ ಪಡೆದಿರುವ ಬೊಮ್ಮನಹಳ್ಳಿ ವಲಯ ಕಚೇರಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೆಂದ್ರಪ್ಪ ಎಸಿಬಿ ಬೆಲೆಗೆ ಬಿದ್ದ ವಿವರವಿದು.

ವಾಣಿಜ್ಯ ಕಟ್ಟಡಕ್ಕೆ ಒಸಿ ನೀಡಲು 20 ಲಕ್ಷ ರೂ. ಲಂಚ ಸ್ವೀಕರಿಸಿ ಬೊಮ್ಮನಹಳ್ಳಿ ವಲಯದ ನಗರ ಯೋಜನೆ ಸಹಾಯಕ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದೇವೇಂದ್ರಪ್ಪ ಲಂಚದ ಸಮೇತ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಖಾಸಗಿ ಹೋಟೆಲ್ ನಲ್ಲಿ ಸ್ವೀಕರಿಸಿದ್ದ 20 ಲಕ್ಷ ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಸಿಗ್ಮೀಸ್ ಬ್ರೆವರೀಸ್ ಕಂಪನಿ ಖಾಸಗಿ ಕಂಪನಿ ಹುಳಿಮಾವು ಸಮೀಪ ಸಿಗ್ಮೀಸ್ ಘಟಕ ತೆಗೆಯಲು ಬೊಮ್ಮನಹಳ್ಳಿ ನಗರ ಯೊಜನೆ ವಿಭಾಗದದಲ್ಲಿ ಅರ್ಜಿ ಸಲ್ಲಿಸಿ ನಕ್ಷೆ ಮಂಜೂರಾತಿ ಪಡೆದಿತ್ತು. ಅದರಂತೆ ಕಟ್ಟಡ ನಿರ್ಮಾಣ ಮಾಡಿದ್ದು, ಒಸಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಒಸಿ ನೀಡಲು ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ 40 ಲಕ್ಷ ರೂಪಾಯಿ ಹಣ ಲಂಚ ನೀಡುವಂತೆ ಕಂಪನಿ ಮ್ಯಾನೇಜರ್ ಗೆ ಕೇಳಿದ್ದಾರೆ. ಈ ಕುರಿತು ಅರ್ಜಿದಾರರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

20 lakh bribe received: BBMP corrupt babu caught by ACB

ಶುಕ್ರವಾರ ಮಧ್ಯಾಹ್ನ ಮೆಜೆಸ್ಟಿಕ್ ನ ಅಮರ್ ಹೋಟೆಲ್ ಸಮೀಪ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಡಿವೈಎಸ್ಪಿ ತಮ್ಮಯ್ಯ ಹಾಗೂ ಸುಬ್ರಮಣ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ದೇವೇಂದ್ರಪ್ಪ ಸಿಕ್ಕಿಬಿದ್ದಿದ್ದಾನೆ. ನಿಮ್ಮ ಕಾಲಿಗೆ ಬೀಳುತ್ತೇನೆ ಬಿಟ್ಟುಬಿಡಿ ಎಂದು ಎಸಿಬಿ ಪೊಲೀಸರನ್ನು ಕೇಳಿ ಕೊಂಡಿದ್ದಾನೆ. ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧ ದಾಖಲೆಗಳಿದ್ದರೂ ಸಹ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೇವೇಂದ್ರಪ್ಪನ ಧನದಾಹ ಏನೆಂಬುದು ಕಂಡು ಬಂದಿದೆ.

20 lakh bribe received: BBMP corrupt babu caught by ACB

ಏಳು ಲಕ್ಷ ರೂ. ಪತ್ತೆ: ಇನ್ನು ಲಂಚದ ರೂಪದಲ್ಲಿ ಸಂಗ್ರಹಿಸಿ ದೇವೆಂದ್ರಪ್ಪ ಇಟ್ಟಿದ್ದ 7. 43 ಲಕ್ಷ ರೂ. ಅನಧಿಕೃತ ಹಣ ಆರೋಪಿತ ಅಧಿಕಾರಿಯಿಂದ ವಶಪಡಿಸಿಕೊಂಡಿದ್ದಾರೆ. ಎಸಿಬಿ ಬಲೆಗೆ ಬಿದ್ದ ಬಳಿಕ ಹೆಬ್ಬಾಳದ ಮನೆಯಲ್ಲಿ ಶೋಧ ನಡೆಸಲಾಗಿದೆ.

20 lakh bribe received: BBMP corrupt babu caught by ACB

Recommended Video

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ 4ಸಾವಿರ ರೈತರು ಭಾಗಿ | Oneindia Kannada

ಕಾಲಿಲ್ಲದಿದ್ದರು ಕಾಸು: ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕ ದೇವೇಂದ್ರಪ್ಪನಿಗೆ ಒಂದು ಕಾಲು ಇಲ್ಲ. ಆದ್ರೆ ಕಾಸಿನ ವಿಚಾರದಲ್ಲಿ ಕಾಂಪ್ರಮೈಸ್ ಅಗಲ್ಲ. ಹೀಗಾಗಿ ಇಲಾಖೆಯಲ್ಲಿ ಚತುರ ಕುಂಟಣ್ಣ ಎಂದೇ ಹೆಸರು ಗಳಿಸಿದ್ದಾರೆ. ಸದ್ಯ ಭಾರಿ ಮೊತ್ತದ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ತಗಲಾಕ್ಕೊಂಡಿದ್ದಾರೆ.

English summary
Devendrappa, assistant director of town planning Bommanahalli BBMP was arrested by ACB officials this evening while receiving 20 lakh bribe know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X