ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಕೊಡಿಸುವ ಸೋಗಿನಲ್ಲಿ 20 ಕೋಟಿ ವಂಚನೆ

|
Google Oneindia Kannada News

ಬೆಂಗಳೂರು, ಜನವರಿ 10: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್‌ಗಳನ್ನು ನೀಡುವಾಗ ಸ್ವಲ್ಪ ಯೋಚಿಸಿ. ಗ್ರಾಹಕರ ಸೋಗಿನಲ್ಲಿ ಬಂದು ವಂಚನೆ ಮಾಡುವವರೂ ಇರುತ್ತಾರೆ. ಫ್ಲಾಟ್ ಕೊಡಿಸುವ ನೆಪದಲ್ಲಿ ಮೋಸಮಾಡುವವರೂ ಇದ್ದಾರೆ.

ಅಪಾರ್ಟ್‌ಮೆಂಟ್ ಗಳಲ್ಲಿ ಫ್ಲಾಟ್ ಖರೀದಿಸುವುದಾಗಿ ಗ್ರಾಹಕರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ನಗರದ ವಿವಿಧ ಬ್ಯಾಂಕ್‌ಗಳಿಂದ ಸುಮಾರು 20 ಕೋಟಿ ರೂ ಸಾಲ ಪಡೆದು ಟೋಪಿ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬಸವೇಶ್ವರನಗರದ ನಿವಾಸಿ ಮಂಜುನಾಥ್ ಹಾಗೂ ಕೆಂಗೇರಿ ದೊಡ್ಡಬೆಲೆಯ ಪ್ರಾವಿಡಂಟ್ ಸನ್ ವರ್ತ್ ಅಪಾರ್ಟ್‌ಮೆಂಟ್ ನಿವಾಸಿ ರಂಗನಾಥ್ ಬಂಧಿತರಾಗಿದ್ದಾರೆ.

ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಶೇ.50ರಷ್ಟು ಕುಸಿತ ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಶೇ.50ರಷ್ಟು ಕುಸಿತ

ಆರೋಪಿಗಳಿಂದ ಆಡಿ ಸೇರಿದಂತೆ ಎರಡು ಐಷಾರಾಮಿ ಕಾರುಗಳು ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಮಿಲ್ಲರ್ಸ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್‌ಗೆ ಫ್ಲಾಟ್ ಖರೀದಿಗೆ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರು. ಈ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ.

20 Crore Rupees Fraud In Flat

ಮೈಸೂರಿನ ಮಂಜುನಾಥ್ , ಬಸವೇಶ್ವರನಗರದಲ್ಲಿ ವಾಸವಾಗಿದ್ದ, ಕೆಲ ತಿಂಗಳ ಹಿಂದೆ ಆತನಿಗೆ ಶಿವು ಎಂಬಾತನ ಪರಿಚಯವಾಗಿತ್ತು. ಆಗ ಮಂಜುನಾಥ್ ತಾನು ಎಬಿಸಿ ಬಿಲ್ಡರ್ಸ್ ಎಂಬುದು ಸೇರಿದಂತೆ ಇತರೆ ರಿಯಲ್ ಎಸ್ಟೇಟ್ ಕಂಪನಿಗಳ ಮಾಲೀಕ. ಫ್ಲಾಟ್ ಖರೀದಿಗೆ ಸಾಲ ಸೌಲಭ್ಯ ಸಹ ಕೊಡಿಸುವ ಕೆಲಸ ಮಾಡಿಸುತ್ತೇನೆ ಬೇಕಿದ್ದರೆ ಸಂಪರ್ಕಿಸಿ ಎಂದು ಹೇಳಿದ್ದ.

ಈ ಮಾತು ನಂಬಿದ ರವಿ ಕುಮಾರ್ ಕೆಲ ದಿನಗಳ ಹಿಂದೆ ಆರೋಪಿಯನ್ನು ಭೇಟಿಯಾಗಿದ್ದನು.ಆಗ ಫ್ಲಾಟ್ ಖರೀದಿಸುವುದಾಗಿ ನಂಬಿಸಿ ಎಲೆಕ್ಟ್ರಾನಿಕ್ ಸಿಟಿ ಸಮೀಪದ ರಾಯನ್ ಸನ್‌ ರೈಸ್ ಅಪಾರ್ಟ್‌ಮೆಂಟ್ ಮಾಲೀಕ ಮಲ್ಲಿಕಾರ್ಜುನ್ ಹೆಸರಲ್ಲಿ ರವಿಕುಮಾರ್ ಪತ್ನಿ ಹೆಸರಿಗೆ ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಮಾಡಿಸಿದ್ದ.

ಬಳಿಕ ಇದೇ ಫ್ಲಾಟ್ ಖರೀದಿಗೆ ಎಲ್‌ ಅಂಡ್ ಟಿ ಬ್ಯಾಂಕ್ ನಲ್ಲಿ ಅವರ ಪತ್ನಿ ಮಂಜುಳಾ ಹೆಸರಲ್ಲಿ 39 ಲಕ್ಷಕ್ಕೆ ಸೇರಿದಂತೆ ಒಟ್ಟು 67.80 ಲಕ್ಷ ಸಾಲ ಪಡೆಯಲಾಗಿತ್ತು.

ಈ ಹಣವು ಮಂಜುನಾಥ್ ಮಾಲಿಕತ್ವದ ಎಬಿಸಿ ಬಿಲ್ಡರ್ ಖಾತೆಗೆ ಜಮಾ ಆಗಿತ್ತು. ಹಾಗೆಯೇ ಇನ್ನೊಂದು ಕಡೆಯೂ ರವಿಕುಮಾರ್ ದಾಖಲೆ ಬಳಸಿ 45 ಲಕ್ಷ ರೂ ಸಾಲ ಪಡೆದಿದ್ದ.

English summary
Think twice While Giving Flat To Customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X