ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜೆಪಿ ನಗರದಲ್ಲಿ ದುರಂತ: ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಬಾಲಕರು, ಕೋಚ್ ಬಂಧನ

ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳ ಮೃತದೇಹಗಳು ಈಜುಕೊಳದಲ್ಲಿ ಪತ್ತೆಯಾಗಿದ್ದು, ತರಬೇತುದಾರರನ್ನು ಬಂಧಿಸಲಾಗಿದೆ.

|
Google Oneindia Kannada News

ಬೆಂಗಳೂರು, ಜನವರಿ, 31: ಜನವರಿ 30ರ ಸೋಮವಾರ ಬೆಂಗಳೂರಿನ ಜೆಪಿ ನಗರ 7 ನೇ ಹಂತದಲ್ಲಿರುವ ಖಾಸಗಿ ಈಜುಕೊಳದಲ್ಲಿ 13 ವರ್ಷದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂಬ ದುರಂತ ಘಟನೆ ವರದಿಯಾಗಿದೆ.

ಮೃತ ವಿದ್ಯಾರ್ಥಿಗಳನ್ನು ಜರಗನಹಳ್ಳಿ ನಿವಾಸಿಗಳಾದ ಮೋಹನ್ ಮತ್ತು ಜಯಂತ್ ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ತಮ್ಮ ಶಾಲೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತ. ಬಳಿ ಇಬ್ಬರ ಮೃತದೇಹಗಳು ಈಜುಕೊಳದಲ್ಲಿ ಕಂಡುಬಂದಿವೆ.

ಕೆರೆಗೆ ಜಿಗಿದು ಹೆಣ್ಣು ಮಕ್ಕಳ ಜೀವ ರಕ್ಷಿಸಿದ KSRTC ಚಾಲಕ: ಪ್ರಶಂಸೆಕೆರೆಗೆ ಜಿಗಿದು ಹೆಣ್ಣು ಮಕ್ಕಳ ಜೀವ ರಕ್ಷಿಸಿದ KSRTC ಚಾಲಕ: ಪ್ರಶಂಸೆ

ಈಜುಕೊಳದ ತರಬೇತುದಾರ ಬಾಲಕರನ್ನು ಈಜುಕೊಳಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ., ಆದರೆ ದುರಂತ ನಡೆದ ಸಮಯದಲ್ಲಿ ಅವರು ಇರಲಿಲ್ಲ ಎನ್ನಲಾಗಿದ್ದು, ತರಬೇತುದಾರರೇ ಬಾಲಕರ ಶವಗಳನ್ನು ಕೊಳದಲ್ಲಿ ಪತ್ತೆ ಮಾಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

2 teenagers drown in swimming pool, coach arrested

ಪೊಲೀಸರ ಪ್ರಕಾರ, ಇಬ್ಬರು ಬಾಲಕರು ಸೋಮವಾರ ತರಗತಿಗಳನ್ನು ಬಿಟ್ಟು ಜೆಪಿ ನಗರದಲ್ಲಿರುವ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಗೆ ಭೇಟಿ ನೀಡಿ, ಈಜುಕೊಳದಲ್ಲಿ ಆಟವಾಡಿದ್ದಾರೆ. ಈಜುಕೊಳದ ಸರಿಯಾದ ಬಳಕೆಯ ಬಗ್ಗೆ ಬಾಲಕರಿಗೆ ಸೂಚನೆಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತರ ಕುಟುಂಬಸ್ಥರ ಪತ್ತೆಗೆ ಮನೆ ಮನೆಗೆ ತೆರಳಿ ಹುಡುಕಾಟ ಆರಂಭಿಸಿದ್ದಾರೆ. ಹಲವು ಗಂಟೆಗಳ ಹುಡುಕಾಟದ ನಂತರ, ಅವರು ಕುಟುಂಬಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

2 teenagers drown in swimming pool, coach arrested

ಮೃತ ಮೋಹನ್ ಅವರ ತಂದೆ ಈಜುಕೊಳ ನಿರ್ವಹಣೆಯ ವಿರುದ್ಧ ದೂರು ದಾಖಲಿಸಿದ್ದಾರೆ. ನಿರ್ಲಕ್ಷ್ಯ, ಕಳಪೆ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದು, ಈ ಆರೋಪದಲ್ಲಿ ತರಬೇತುದಾರರನ್ನು ಬಂಧಿಸಲಾಗಿದೆ.

ಇನ್ನು, ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಿ ಎಂದು ರಸ್ತೆ ಬದಿ ನಿಂತು ಅಂಗಲಾಚುತ್ತಿದ್ದ ಮಹಿಳೆಯನ್ನು ಕಂಡ ಕೆಎಸ್‌ಆರ್‌ಟಿಸಿ ಬಸ್ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಕೆರೆಗೆ ಜಿಗಿದು ಎರಡು ಜೀವಗಳನ್ನು ಕಾಪಾಡಿದ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.

English summary
Two teenagers drown in aprivate swimming pool in Bengaluru’s JP Nagar, coach arrested. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X