ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮತ್ತೆರಡು ಕೊರೊನಾ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ರಾಜ್ಯದಲ್ಲಿ ಮತ್ತೆರಡು ಕೊರೊನಾ ಸೋಂಕಿತರ ಪ್ರಕರಣ ದಾಖಲಾಗಿದೆ. ಈಗ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.

ಬೆಳಿಗ್ಗೆ ಆರೋಗ್ಯ ಇಲಾಖೆ ಪ್ರಕಟ ಮಾಡಿದ್ದ ಮಾಹಿತಿ ಪ್ರಕಾರ, ಇಂದು 11 ಕೊವಿಡ್ ಸೋಂಕಿತರು ವರದಿಯಾಗಿದ್ದರು. ಒಟ್ಟು ಸೋಂಕಿತರ ಸಂಖ್ಯೆ 258 ಆಗಿತ್ತು. ಇದೀಗ, ಸಂಜೆಯೊತ್ತಿಗೆ 2 ಹೊಸ ಕೊರೊನಾ ಕೇಸ್ ಬೆಳಕಿಗೆ ಬಂದಿದ್ದು, 260 ಆಗಿದೆ.

2 New COVID19 Case Reported In Karnataka On April 14th

ಮುಂಬೈ ನಗರದಲ್ಲೇ 1500 ಗಡಿ ದಾಟಿದ ಕೊರೊನಾ ಸೋಂಕುಮುಂಬೈ ನಗರದಲ್ಲೇ 1500 ಗಡಿ ದಾಟಿದ ಕೊರೊನಾ ಸೋಂಕು

ಈ ಕುರಿತು ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. 'ಇಂದು ಸಂಜೆ 5 ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 260 #COVID19 ಪ್ರಕರಣಗಳು ಖಚಿತವಾಗಿರುತ್ತದೆ. ಅವರ ಪೈಕಿ 71 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ.

ಸೋಂಕಿತ ನಂಬರ್ 259: 35 ವರ್ಷದ ಮಹಿಳೆಯಾಗಿದ್ದು, ಬೆಂಗಳೂರು ನಿವಾಸಿ. 199ನೇ ಸೋಂಕಿತೆಯ ಸಂಪರ್ಕದಲ್ಲಿದ್ದರು.

ಕೊರೊನಾ ತಡೆಗೆ ಆಯುಷ್ ಸಲಹೆ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಸೂತ್ರಗಳುಕೊರೊನಾ ತಡೆಗೆ ಆಯುಷ್ ಸಲಹೆ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಸೂತ್ರಗಳು

ಸೋಂಕಿತ ನಂಬರ್ 260: 36 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ. 176ನೇ ಸೋಂಕಿತೆಯ ಪತಿ ಈತ.

ಇನ್ನು ರಾಜ್ಯದಲ್ಲಿ ಒಟ್ಟು 10 ಜನ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಂದು ಬೆಂಗಳೂರಿನಲ್ಲಿ 219ನೇ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.

English summary
According to Karnataka Health department 2 new COVID 19 case reported in karnataka. Bengaluru 1 and Uttara Kannada 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X