ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರನ್‌ ವೇ ಬಿಟ್ಟು ವಿಮಾನ ಓಡಿಸಿ, ಮನೆಗೆ ಹೋದ ಪೈಲಟ್‌ಗಳು!

|
Google Oneindia Kannada News

ಬೆಂಗಳೂರು, ಜನವರಿ 10: ವಿಮಾನವನ್ನು ಸರಿಯಾಗಿ ರನ್‌ವೇನಲ್ಲಿ ಇಳಿಸದೇ ಪಕ್ಕದ ಹುಲ್ಲು ಹಾಸಿನ ಮೇಲೆ ಓಡಿಸಿದ್ದಕ್ಕೆ 'ಗೋ ಏರ್' ವಿಮಾನದ ಇಬ್ಬರು ಪೈಲಟ್‌ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕೆಲಸದಿಂದ ಅಮಾನತು ಮಾಡಿ, ಮನೆಗೆ ಕಳುಹಿಸಿದೆ.

ಕಳೆದ ವರ್ಷ ನವೆಂಬರ್ 11 ರಂದು ಬೆಂಗಳೂರು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಘಟನೆಯನ್ನು ತನಿಖೆ ನಡೆಸಿ, ಡಿಜಿಸಿಎ ಗುರುವಾರ ಈ ಕ್ರಮ ಕೈಗೊಂಡಿದೆ. ನ 11 ರಂದು ನಾಗಪುರದಿಂದ ಬೆಂಗಳೂರಿಗೆ ಬರುತ್ತಿದ್ದ 'ಗೋ ಏರ್' ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಮಂಜು ಮುಸುಕಿದ್ದ ಕಾರಣ ರನ್‌ವೇ ಬಿಟ್ಟಿ ವಿಮಾನವನ್ನು ಪೈಲಟ್‌ಗಳು ಪಕ್ಕದ ಹುಲ್ಲು ಹಾಸಿನ ಮೇಲೆ ಓಡಿಸಿದ್ದಾರೆ.

ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಕಾರ್ಯಾಚರಣೆ

ವಿಮಾನ ಸರಿಯಾಗಿ ಲ್ಯಾಂಡ್ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಪೈಲಟ್‌ಗಳು ವಿಮಾನವನ್ನು ಹೈದರಾಬಾದ್‌ನತ್ತ ತಿರುಗಿಸಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದರು. ಅಂದು ಆ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿತ್ತು. ಪೈಲಟ್‌ಗಳು ಮಂಜು ಮುಸುಕಿದ ವಾತಾವರಣ ಇದ್ದಾಗ ಅನುಸರಿಸ ಬೇಕಾದ ಕ್ರಮಗಳನ್ನು ಬಿಟ್ಟು, ಮನಬಂದಂತೆ ವರ್ತಿಸಿದ್ದಾರೆ. ಹೀಗಾಗಿ ಅಮಾನತು ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

2 Go Air Pilots Suspended By DGCA

ಪೈಲಟ್‌ ಹಾಗೂ ಕೋ ಪೈಲಟ್‌ನ್ನು ಘಟನೆ ನಡೆದ ದಿನದಿಂದ ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಲಾಗಿದೆ. ಈ ಹಿಂದೆ ಕೂಡ ಈ ಇಬ್ಬರೂ ಪೈಲಟ್‌ಗಳು ಅಮಾನತುಗೊಂಡಿದ್ದರು ಎಂಬುದು ತಿಳಿದು ಬಂದಿದೆ.

English summary
2 Go Air Pilots Suspended By DGCA. On November 2019, Go Air plane wrong landed by Pilots in Kempegowda International Airport bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X