ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಲಿವರಿ ಬಾಯ್ ವೇಷದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಅಕ್ರಮವಾಗಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಯುವಕರನ್ನು ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Recommended Video

ಹಾರುವ ಹಾವನ್ನು ಹಿಡಿದ ಯುವಕ..? | flying snake | Oneindia Kannada

ಆನ್‌ಲೈನ್‌ ಡಿಲಿವರಿ ಬಾಯ್‌ ವೇಷದಲ್ಲಿ ಹಾಗೂ ಆನ್‌ಲೈನ್‌ ಫುಡ್ ಡಿಲಿವರಿ ಮಾಡಲು ಬಳಸುವ ಬ್ಯಾಗ್‌ನಲ್ಲಿ ಹಾವು ಸಾಗಾಣಿಕೆ ಮಾಡುತ್ತಿದ್ದರು. ಇದು ಬೆಂಗಳೂರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಇಬ್ಬರನ್ನು ಹಾಗೂ ಹಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

2 Delivery Boy Arrested Who Trying To Sell Two Headed Snake

ಅಕ್ರಮವಾಗಿ ಎರಡು ತಲೆ ಹಾವು ಸಾಗಾಟ: ಇಬ್ಬರ ಬಂಧನಅಕ್ರಮವಾಗಿ ಎರಡು ತಲೆ ಹಾವು ಸಾಗಾಟ: ಇಬ್ಬರ ಬಂಧನ

ಕೊರೊನಾ ವೈರಸ್‌ ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಆದರೆ, ಅಗತ್ಯ ವಸ್ತುಗಳ ಪೂರೈಕೆ ಮಾಡುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಇವರಲ್ಲಿ ಆನ್‌ಲೈನ್‌ ಡಿಲಿವರಿ ಬಾಯ್‌ಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಆನ್‌ಲೈನ್ ಮೂಲಕ ಊಟ ಬುಕ್ ಮಾಡಿದವರಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಿದ್ದರಿಂದ ಡಿಲವರಿ ಬಾಯ್‌ಗಳಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೇ ದುರ್ಬಳಕೆ ಮಾಡಿಕೊಂಡ ಇಬ್ಬರು ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲಿಪುರ ಅರಣ್ಯ ಇಲಾಖೆಯಲ್ಲಿ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.

English summary
Central Crime Branch (CCB) Bengaluru has arrested 2 people who were trying to sell a two-headed snake under the cover of being delivery boys for an online delivery service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X