ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆದುಳು ನಿಷ್ಕ್ರಿಯಗೊಂಡ ಇಬ್ಬರಿಂದ ಉಳಿಯಿತು ಕನಿಷ್ಠ 12 ಜೀವ

|
Google Oneindia Kannada News

ಬೆಂಗಳೂರು, ಏಪ್ರಿಲ್ 4: ಮೆದುಳು ನಿಷ್ಕ್ರಿಯಗೊಂಡ ಇಬ್ಬರು ರೋಗಿಗಳು ಬುಧವಾರ ಬೆಂಗಳೂರಿನಲ್ಲಿ ಕನಿಷ್ಠ ಹನ್ನೆರಡು ಜೀವಗಳನ್ನು ಉಳಿಸಿದ್ದಾರೆ. ತಮ್ಮ ಆಪ್ತರನ್ನು ಕಳೆದುಕೊಂಡ ಸಂದರ್ಭದಲ್ಲೂ ಇಂಥ ಧೈರ್ಯವಾದ ನಿರ್ಧಾರ ತೆಗೆದುಕೊಂಡ ಕುಟುಂಬದವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ದಾನಿಗಳ ಪೈಕಿ ಒಬ್ಬರು ಹದಿನಾರು ವರ್ಷದ ಯುವತಿ. ಆಕೆಗೆ ಮೆದುಳು ರಕ್ತಸ್ರಾವ ಆಗಿತ್ತು. ಮತ್ತೊಬ್ಬರು ಐವತ್ತು ವರ್ಷದ ವ್ಯಕ್ತಿ, ಅವರಿಗೆ ಅಪಘಾತ ಆಗಿತ್ತು. ಇಬ್ಬರ ಮೆದುಳು ನಿಷ್ಕ್ರಿಯ ಆಗಿತ್ತು. ಅವರ ಅಂಗಗಳು ಇತರರಿಗೆ ದಾನ ಮಾಡಿದರೆ ಅನುಕೂಲ ಆಗುತ್ತಿತ್ತು.

ಸಿಗ್ನಾ 360 ಸಮೀಕ್ಷೆ: ಶೇ82ರಷ್ಟು ಭಾರತೀಯರಿಗಿದೆ ಅಧಿಕ ಒತ್ತಡಸಿಗ್ನಾ 360 ಸಮೀಕ್ಷೆ: ಶೇ82ರಷ್ಟು ಭಾರತೀಯರಿಗಿದೆ ಅಧಿಕ ಒತ್ತಡ

ಪಿಯುಸಿ ವಿದ್ಯಾರ್ಥಿನಿಯನ್ನು ಏಪ್ರಿಲ್ ಎರಡನೇ ತಾರೀಕು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಕೆಯ ಹೃದಯವನ್ನು ದಾನ ಮಾಡಲು ಸಾಧ್ಯವಾಗಿಲ್ಲ. ಆದರೆ ವಾಲ್ವ್ ಅನ್ನು ಮಣಿಪಾಲ್ ಆಸ್ಪತ್ರೆಯ ರೋಗಿಗೆ, ಕಾರ್ನಿಯಾವು ಶಂಕರ್ ಕಣ್ಣಿನ ಆಸ್ಪತ್ರೆಗೆ, ಎರಡನೇ ಕಿಡ್ನಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ.

2 brain dead patients save 12 lives in Bengaluru

ಮತ್ತೊಂದು ಪ್ರಕರಣದಲ್ಲಿ, ಆ ವ್ಯಕ್ತಿಗೆ ತುಮಕೂರು- ಗುಬ್ಬಿ ರಸ್ತೆಯಲ್ಲಿ ಅಪಘಾತ ಆಗಿತ್ತು. ಮಾರ್ಚ್ ಮೂವತ್ತನೇ ತಾರೀಕು ದುರ್ಘಟನೆ ನಡೆದಿತ್ತು. ಏಪ್ರಿಲ್ ಮೂರನೇ ತಾರೀಕು ಮೆದುಳು ನಿಷ್ಕ್ರಿಯೆ ಆಗಿದೆ ಎಂದು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಘೋಷಿಸಲಾಯಿತು.

ಆ ವ್ಯಕ್ತಿಯ ಯಕೃತ್ತು, ಹೃದಯದ ವಾಲ್ವ್, ಕಾರ್ನಿಯಾ, ಕಿಡ್ನಿಗಳನ್ನು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಗತ್ಯ ಇರುವ ರೋಗಿಗಳಿಗೆ ದಾನ ಮಾಡಲಾಗಿದೆ.

English summary
Two brain dead patients in Bengaluru saved the lives of a minimum of 12 persons on Wednesday, as their families braved heart-rending grief and went ahead donating their organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X