ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ವಿನೂತನ ವಿನ್ಯಾಸದ 2,587 ಟ್ರಾನ್ಸ್‍ಫಾರ್ಮರ್ ಅಳವಡಿಕೆ

|
Google Oneindia Kannada News

ಬೆಂಗಳೂರು ಮೇ 13: ಬಂಗಾಳ ಕೊಲ್ಲಿ ವಾಯುಭಾರತ ಕುಸಿತ ಹಿನ್ನೆಲೆ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ವಿದ್ಯುತ್ ಕಂಬಗಳು ನೆಲಕ್ಕಿಚ್ಚಿದೆ. ಜೊತೆಗೆ ಟ್ರಾನ್ಸ್‍ಫಾರ್ಮರ್ ಡ್ಯಾಮೇಜ್ ಆಗಿವೆ. ಈ ನಡುವೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2, 587 ವಿನೂತನ ವಿನ್ಯಾಸದ ಟ್ರಾನ್ಸ್‍ಫಾರ್ಮರ್ ಅಳವಡಿಸುವ ಕಾರ್ಯುಕ್ಕೆ 'ಬೆಸ್ಕಾಂ' ಮುಂದಾಗಿದೆ.

ಏ. 20ರಂದು ಆರಂಭಗೊಂಡ ಎರಡನೆ ಹಂತದಲ್ಲಿ 2, 585 ಹೊಸ ವಿನ್ಯಾಸದ ಟ್ರಾನ್ಸ್‍ಫಾರ್ಮರ್ ಅಳವಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ 3, 196 ವಿನೂತನ ವಿನ್ಯಾಸದ ಟ್ರಾನ್ಸ್‍ಫಾರ್ಮರ್‍ಗಳನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಅಳವಡಿಸಲಾಗಿದೆ' ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು- ಬೆಸ್ಕಾಂ ಸಿಬ್ಬಂದಿಗಳು ಹೈರಾಣಬೆಂಗಳೂರು: ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು- ಬೆಸ್ಕಾಂ ಸಿಬ್ಬಂದಿಗಳು ಹೈರಾಣ

ಪಾದಚಾರಿ ರಸ್ತೆ ಹಾಗೂ ಚರಂಡಿ ಮೇಲಿರುವ 2 ಅಥವಾ 4 ಕಂಬಗಳ ಮೇಲಿರುವ ಟ್ರಾನ್ಸ್‍ಫಾರ್ಮರ್‍ಗಳನ್ನು ಹೊಸ ವಿನ್ಯಾಸದ ಟ್ರಾನ್ಸ್‍ಫಾರ್ಮರ್ ಸ್ಟ್ರಕ್ಚರ್‍ಗಳಿಗೆ ಮೇಲ್ದರ್ಜೆಗೆ ಏರಿಸುವುದು ಹಾಗೂ ಅದನ್ನು ಒಂದೇ ಕಂಬದಲ್ಲಿ 11 ಮೀಟರ್ ಎತ್ತರದ ಜಾಗದಲ್ಲಿ ಅಳವಡಿಸುವ ಯೋಜನೆ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2,587 Transformer Implementation of New Design in Bangalore

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಬೆಸ್ಕಾಂ ಸಿಬ್ಬಂದಿಗಳು ಕಂಗಾಲಾಗಿದ್ದಾರೆ. ಈ ಅನಿರೀಕ್ಷಿತ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಗಾಳಿ, ಮಳೆಯ ಹೊಡೆತಕ್ಕೆ 30 ಕ್ಕೂ ಹೆಚ್ಚು ಟ್ರಾನ್ಸ್​ಫಾರ್ಮರ್​ಗಳು ಡ್ಯಾಮೇಜ್​ ಆಗಿವೆ. ಇವುಗಳನ್ನು ಮಳೆಯ ಮಧ್ಯೆ ಸರಿಪಡಿಸಲು ಬೆಸ್ಕಾಂ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಮಾತ್ರವಲ್ಲದೇ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಸುಮಾರು 500ಕ್ಕೂ ಹೆಚ್ಚು ವಿದ್ಯುತ್​ ಕಂಬಗಳು ಧರೆಗುರುಳಿರೋ ಬಗ್ಗೆ ಮಾಹಿತಿ ಸಿಕ್ಕಿದೆ.

ಬೊಮ್ಮನಹಳ್ಳಿ, ಜಯನಗರ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 30 ಟ್ರಾನ್ಸ್‌ಫಾರ್ಮರ್‌ಗಳು ಡ್ಯಾಮೇಜ್ ಆಗಿವೆ ಎಂದು ಬೆಸ್ಕಾಂ ಜನರಲ್​ ಮ್ಯಾನೇಜರ್​ ನಾಗರಾಜ್​ ಮಾಹಿತಿ ನೀಡಿದ್ದಾರೆ. ಇದರ ನಡುವೆ 2, 587 ವಿನೂತನ ವಿನ್ಯಾಸದ ಟ್ರಾನ್ಸ್‍ಫಾರ್ಮರ್ ಅಳವಡಿಕೆಯಿಂದ ಕೊಂಚ ನೆಮ್ಮದಿ ತಂದಿದೆ.

2,587 Transformer Implementation of New Design in Bangalore

ಇನ್ನೂ ಹವಾಮಾನ ಇಲಾಖೆಯಿಂದ ಮಳೆ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಅಸಾನಿ ಚಂಡಮಾರುತದ ಎಫೆಕ್ಟ್ ಮುಂದುವರೆಯಲಿದೆ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತುಂತುರು ಮಳೆಯಾಗಿದೆ. ಚಂಡಮಾರುತದ ಪರಿಣಾಮ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Recommended Video

ಎಲ್ಲಾ ವದಂತಿಗೆ ಬ್ರೇಕ್ ಹಾಕಿದ ಸುನಿಲ್ ಶೆಟ್ಟಿ! | Oneindia Kannada

English summary
Bescom is leading the implementation of innovative designs 2, 587 transformer in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X