• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಎನ್ ಟಾಟಾಗೆ 178, ಐಐಎಸ್ಸಿಯಿಂದ ವಿಜ್ಞಾನ ಪ್ರದರ್ಶನ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 02: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‍ ಸ್ಟಿಟ್ಯೂಟ್ ಆಫ್ ಸೈನ್ಸ್-ಐಐಎಸ್‍ಸಿ)ಯ ಸಂಸ್ಥಾಪಕರ ದಿನದ ನಿಮಿತ್ತ ಟಾಟಾ ಸೆಂಟ್ರಲ್ ಆರ್ಕೈವ್ಸ್ ವಸ್ತು ಪ್ರದರ್ಶನವನ್ನು ಏರ್ಪಡಿಸಿದೆ.

ಈ ಸಂಸ್ಥೆಯನ್ನು ಆರಂಭಿಸಿದ ಖ್ಯಾತ ಉದ್ಯಮಿ ಜೆಮ್‍ ಶಡ್ಜಿ ಎನ್. ಟಾಟಾ ಅವರ 178 ನೇ ಜನ್ಮದಿನವನ್ನಾಗಿಯೂ ಆಚರಿಸಲಾಗುತ್ತಿದೆ.
ಐಐಎಸ್‍ಸಿಯನ್ನು ಕಟ್ಟಿ ಬೆಳೆಸಿದ ಜೆಮ್‍ ಶೆಡ್‍ ಜಿ ಎನ್. ಟಾಟಾ ಅವರ ನೆನಪಿಗಾಗಿ ಟಾಟಾ ಸೆಂಟ್ರಲ್ ಆರ್ಕೈವ್ಸ್ ಆಯೋಜಿಸಿರುವ ಈ ಪ್ರದರ್ಶನ ಕನ್ನಡ ಮತ್ತು ಇಂಗ್ಲೀಷ್‍ನಲ್ಲಿರುತ್ತದೆ.

ಜೆಮ್‍ ಶೆಡ್‍ ಜೀ ಟಾಟಾ ಅವರು ಸ್ಥಾಪಿಸಿದ ಉದ್ಯಮಗಳು, ಶಿಕ್ಷಣ, ಪರಿಸರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಮಾಡಿದ ಸೇವೆಗಳನ್ನು ಈ ವಸ್ತು ಪ್ರದರ್ಶನ ಪ್ರತಿಬಿಂಬಿಸಲಿದೆ.

ಮಾರ್ಚ್ 4, 2017 ರ ಶನಿವಾರ ಆರಂಭವಾಗುವ ಈ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. (ಮಾರ್ಚ್ 5, 2017 ರಂದು ಭಾನುವಾರ ರಜಾದಿನವಾದ್ದರಿಂದ ಪ್ರದರ್ಶನ ಇರುವುದಿಲ್ಲ). ಈ ಪ್ರದರ್ಶನವನ್ನು ಸಾರ್ವಜನಿಕರು ಮಾರ್ಚ್ 9, 2017 ರವರೆಗೆ ವೀಕ್ಷಿಸಬಹುದಾಗಿದೆ.

ಪ್ರದರ್ಶನದ ದಿನಾಂಕ: ಶನಿವಾರ, ಮಾರ್ಚ್ 4, 2017(ಉದ್ಘಾಟನಾ ದಿನ).

ಮಾರ್ಚ್ 6, 2017 ರಿಂದ ಮಾರ್ಚ್ 9, 2017 ರವರೆಗೆ.

ಸಮಯ: ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ.

ಸ್ಥಳ: ರಿಸೆಪ್ಷನ್ ಹಾಲ್, ಮುಖ್ಯ ಕಟ್ಟಡ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು-560012.(ಒನ್ಇಂಡಿಯಾ ಸುದ್ದಿ)

English summary
Tata Central Archives in IISc, Bengaluru has organised a unique exhibition on 178th birth anniversary of Jamsetji N. Tata
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X