ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಸಿಟಿ ಯೋಜನೆ: 190 ಕೋಟಿ ವೆಚ್ಚದಲ್ಲಿ 17 ಟೆಂಡರ್‌ಶ್ಯೂರ್ ರಸ್ತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನ ಇನ್ನೂ 17 ರಸ್ತೆಗಳು ಇನ್ನೂ ಸ್ಮಾರ್ಟ್ ಆಗಲಿವೆ. ಟೆಂಡರ್ ಶ್ಯೂರ್ ಯೋಜನೆಯಡಿಯಲ್ಲಿ 190 ಕೋಟಿ ವೆಚ್ಚದಲ್ಲಿ 17 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಾಜಿನಗರ, ಗಾಂಧಿನಗರ, ಮಲ್ಲೇಶ್ವರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 16 ವಾರ್ಡ್ ಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

17 more tendersure road will come to Bengaluru city

ಮೊದಲ ಭಾಗವಾಗಿ 17 ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ. 17.79 ಕಿ,ಮೀ ಉದ್ದದ 17 ರಸ್ತೆಗಳನ್ನು ಮೇಲ್ದರ್ಜೆಗೇರಿಸಲು 190.30 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.

ಟೆಂಡರ್‌ಶ್ಯೂರ್ ರಸ್ತೆಗಳ ವಿಶೇಷತೆಯೇನು?: ಆಟೋ ನಿಲುಗಡೆ, ಸ್ಮಾರ್ಟ್ ಕಾರ್ಡ್ ಬಳಸುವ ಸೈಕಲ್ ನಿಲುಗಡೆ ತಾಣ, ಇ-ಶೌಚಗೃಹ, ಕುಡಿಯುವ ನೀರಿನಘಟಕ ಮತ್ತು ಎಟಿಎಂ, ಸೆನ್ಸಾರ್ ಆಧರಿತ ಡಸ್ಟ್ಬಿನ್, ಪಾದಚಾರಿ ಮಾರ್ಗದಡಿ ಒಡಫ್‌ಸಿ, ನೀರಿನ ಪೈಪ್, ವಿದ್ಯುತ್ ತಂತಿಗಳ ಅಳವಡಿಕೆ ವ್ಯವಸ್ಥೆ ಮಾಡಲಾಗುತ್ತದೆ.
ಬೆಂಗಳೂರು ಸ್ಮಾರ್ಟ್‌ಸಿಟಿಗಾಗಿಯೇ ಪ್ರತ್ಯೇಕ ಲೋಗೋ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದರಂತೆ ಸಾರ್ವಜನಿಕರು ಲೋಗೋ ಸಿದ್ಧಪಡಿಸಿ [email protected] ಗೆ ಕಳುಹಿಸಬೇಕಾಗಿದೆ.

ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆವರೆಗಿನ 715 ಮೀಟರ್ ಉದ್ದದ ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ.

ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಗ್ರಾನೈಟ್ ಕಾಬಲ್ ಸ್ಟೋನ್ ಬಳಸಿ ರಸ್ತೆ ನಿರ್ಮಿಸಿರುವುದು ಇಲ್ಲಿ ಮಾತ್ರ. ಹೀಗಾಗಿ,ಐಷಾರಾಮಿ ಮಳಿಗೆಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳು, ಹೋಟೆಲ್ ಗಳು, ಪಬ್ ಗಳನ್ನು ಒಳಗೊಂಡಿರುವ ಚರ್ಚ್ ಸ್ಟ್ರೀಟ್ ರಸ್ತೆಯು ವಿಶೇಷ ಮೆರುಗು ಪಡೆದುಕೊಂಡಿದೆ.

ಈ ಮೊದಲು ಎಂಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಅಡ್ಡಾಡಲು ಮುಗಿಬೀಳುತ್ತಿದ್ದ ಜನರನ್ನು ಚರ್ಚ್ ಸ್ಟ್ರೀಟ್ ತನ್ನತ್ತ ಸೆಳೆದುಕೊಳ್ಳಲಿದೆ. ರಸ್ತೆಯ ಇಕ್ಕೆಲಗಳಲ್ಲಿ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿನ ಓಡಾಟವು ಖುಷಿ ಕೊಡುತ್ತಿದೆ. ಫುಟ್ ಪಾತ್ ಗಳಲ್ಲಿ ಅನಧಿಕೃತ ವಾಹನ ಸಂಚಾರ ನಿರ್ಭಂಧಿಸುವ ಸಲುವಾಗಿ ಅಲ್ಲಲ್ಲಿ ಕಬ್ಬಿಣದ ಕಂಬಗಳನ್ನು ನೆಡಲಾಗಿದೆ.

ಕಾರು ದ್ವಿಚಕ್ರ ವಾಹನ ಮತ್ತು ಸೈಕಲ್ ನಿಲುಗಡೆಗೆ ಪ್ರತ್ಯೇಕ ಬೇ ಗಳನ್ನು ನಿರ್ಮಿಸಲಾಗಿದೆ. 103 ದ್ವಿಚಕ್ರ ವಾಹನ, 16 ಕಾಡು ಹಾಗೂ 20 ಸೈಕಲ್ ಗಳ ನಿಲುಗಡೆ ಗೆ ಅನುವುಮಾಡಿಕೊಡಲಾಗಿದೆ.

ಸೈಕಲ್ ಗಳಿಗೆ ಬೀಗ ಹಾಕಿ ನಿಲ್ಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಎಂಪೈರ್ ಹೋಟೆಲ್ ಐ ಲ್ಯಾಂಡ್ ನಿರ್ಮಿಸಿದ್ದು, ಗಮನ ಸೆಳೆಯುತ್ತಿದೆ. ರಸ್ತೆಯಲ್ಲಿ ಓಡಾಡುವವರ ಮನರಂಜನೆಗಾಗಿ ವಿದ್ಯುದ್ದೀಪದ ಕಂಬಗಳಲ್ಲಿ ಸ್ಪೀಕರ್ ಅಳವಡಿಸಲಾಗಿದೆ.

English summary
Central government to construct 17 more tendersure roads in the city under smartcity project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X