ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಚುನಾವಣಾ ಭದ್ರತೆಗೆ 17 ಸಾವಿರ ಪೊಲೀಸರು

By Nayana
|
Google Oneindia Kannada News

ಬೆಂಗಳೂರು, ಮೇ 11:ರಾಜ್ಯ ವಿಧಾನಸಭಾ ಚುನಾವಣೆಗೆ ನಡೆಯುವ ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ 7477 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಭದ್ರತೆಗೆ 17 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಈ ಕುರಿತು ಬೆಂಗಳೂರು ಮಹಾನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಾರ್ಯ ವ್ಯಾಪ್ತಿಗೆ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದ್ದು, ಆ ಪೈಕಿ ಜಯನಗರ ವಿಧಾನಸಭಾ ಮತ ಕ್ಷೇತ್ರದ ಚುನಾವಣೆಯಲ್ಲಿ ಮುಂದೂಡಲಾಗಿದೆ. ಉಳಿದ 27 ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಒಟ್ಟು 7477 ಮತೆಗಟ್ಟೆಗಳಿವೆ. ಇವುಗಳಲ್ಲಿ 1469 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಉಳಿದ 6008 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಿವೆ.

ವಿಧಾನಸಭಾ ಚುನಾವಣೆಗೆ 82 ಸಾವಿರ ಪೊಲೀಸರ ನಿಯೋಜನೆ ವಿಧಾನಸಭಾ ಚುನಾವಣೆಗೆ 82 ಸಾವಿರ ಪೊಲೀಸರ ನಿಯೋಜನೆ

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ 10,500 ಸಾವಿರ ಪೊಲೀಸರಿದ್ದಾರೆ, 4500 ಮಂದಿ ರಾಜ್ಯ ಮೀಸಲು ಪಡೆಯ ಸಿಬ್ಬಂದಿಗಳು, 900 ಮಂದಿ ಸೆಕ್ಟರ್ ಮೊಬೈಲ್ ಸಿಬ್ಬಂದಿಗಳು, 150 ಪಿಐಗಳು, 50 ಎಸಿಪಿ ಮೊಬೈಲ್ ಪಾರ್ಟಿ, 18 ಮತಕ್ಷೇತ್ರದ ಉಸ್ತುವಾರಿ ಡಿಸಿಪಿಗಳು, 1 ಜಂಟಿ ಪೊಲೀಸ್‌ ಆಯುಕ್ತರು, ನಾಲ್ಕು ಮಂದಿ ಅಪರ ಪೊಲೀಸ್‌ ಆಯುಕ್ತರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.

17,000 police security for 7478 polling stations in Bengaluru

ಕಳೆದ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ 3603 ಜಾನೀಮು ರಹಿತ ವಾರಂಟ್ ಅಸಾಮಿಗಳನ್ನು ಪತ್ತೆ ಮಾಡಿ ಜಾಮೀನು ರಹಿತ ವಾರಂಟ್‌ಗಳನ್ನು ಕಾರ್ಯಗತಗೊಳಿಸಲಾಗಿದೆ. ಚುನಾವಣೆ ಘೋಷಣೆಯಾದ ನಂತರ 7518 ಶಸ್ತ್ರಗಳನ್ನು ಸ್ಥಳೀಯ ಪೊಲೀಸ್‌ ಠಾಣೆಗಳ ಶಸ್ತ್ರ ಕೊಠಡಿಗಳಲ್ಲಿ ಜಮೆ ಮಾಡಲಾಗಿದೆ.

ಶಾಂತಿ ಭಂಗ ಉಂಟು ಮಾಡದಂತೆ ಭದ್ರತಾ ಕಾಯಿದೆಗಳ ಅಡಿಯಲ್ಲಿ 3473 ಪ್ರಕರಣಗಳನ್ನು ದಾಖಲಿಸಿಕೊಂಡು 3302 ಜನರಿಂದ ಮುಚ್ಚಳಿಕೆ ಪಡೆಯಲಾಗಿದೆ. 12,77,69,495 ಕೋಟಿರೂ.ನಗದು 19,10,72,927 ಬಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ , ಎಂದು ಮಾಹಿತಿ ನೀಡಿದ್ದಾರೆ.

English summary
Bengaluru police has deployed around 17,000 police personnel to 7478 polling stations which have included 1467 most sensitive polling booths as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X