ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದಮ್ಯ ಚೇತನದಿಂದ ಸತತ 160 ವಾರಗಳ ಗಿಡನೆಡುವ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು ಜನವರಿ 20 2018: 160 ವಾರಗಳಿಂದ ಸತತವಾಗಿ ಹಸಿರ ಭಾನುವಾರ ಆಚರಿಸುವ ಮೂಲಕ ಅದಮ್ಯ ಚೇತನ ಸಂಸ್ಥೆ ಹೊಸದೊಂದು ಮೈಲುಗಲ್ಲನ್ನು ಸಾಧಿಸಿದೆ. 1 ಕೋಟಿ ಗಿಡ ನೆಡುವ ದಿವಂಗತ ಅನಂತಕುಮಾರ್ ಅವರ ಆಶಯವನ್ನು ಸಾಕಾರಗೊಳಿಸುತ್ತ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಹೇಳಿದರು.

ನಗರದ ಕೆಂಪಾಂಬುಧಿ ಕೆರೆಯ ಅವರಣದಲ್ಲಿ ಪೌರ ಕಾರ್ಮಿಕರ ಮಕ್ಕಳ ಕೈಯಲ್ಲಿ ಗಿಡ ನೆಡೆಸುವ ಮೂಲಕ ಈ 160 ನೇ ಹಸಿರು ಭಾನುವಾರವನ್ನು ವಿಶಿಷ್ಷವಾಗಿ ಆಚರಿಸಲಾಯಿತು.

ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿದೆ? ಹೆಮ್ಮೆ ಮೂಡಿಸಿದ ತೇಜಸ್ವಿನಿ ನಡೆಇದಕ್ಕಿಂತ ಶ್ರದ್ಧಾಂಜಲಿ ಬೇರೇನಿದೆ? ಹೆಮ್ಮೆ ಮೂಡಿಸಿದ ತೇಜಸ್ವಿನಿ ನಡೆ

ಹಸಿರು ಭಾನುವಾರ ಆಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್, ಕೆಂಪಾಂಬುಧಿ ಕೆರೆಯ ಅಭಿವೃದ್ಧಿಗೆ ಅನಂತ ಕುಮಾರ್ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು.

160th Green Bengaluru Program by Adamya Chetana

ಅಲ್ಲದೆ, ತಮ್ಮ ಅಷ್ಟೇ ಅಲ್ಲದೆ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದಲ್ಲಿ ಅಭಿವೃದ್ದಿ ಕಾರ್ಯಕ್ಕೂ ಕೈ ಹಾಕಿದ್ದರು. ಈ ಪ್ರಯತ್ನದ ಫಲವಾಗಿ ಜನವರಿ ತಿಂಗಳಿನಲ್ಲಿಯೂ ಕೆರೆಯಲ್ಲಿ ನೀರನ್ನು ಕಾಣಬಹುದಾಗಿದೆ. ಇದು ಒಳ್ಳೆಯ ಬೆಳವಣಿಗೆ ಯಾಗಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

160th Green Bengaluru Program by Adamya Chetana

ಕೆರೆಯ ಆವರಣದಲ್ಲಿ ವಾಸಿಸುತ್ತಿರುವ ಮಕ್ಕಳ ಕೈಯಲ್ಲಿ ಗಿಡ ನೆಡುಸುವ ಮೂಲಕ ಮಕ್ಕಳಲ್ಲಿಯೂ ಪರಿಸರ ಕಾಳಜಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಈ ಮಕ್ಕಳೇ ಮುಂದೆ ಈ ಗಿಡ ಮರಗಳ ಬೆಳವಣಿಗೆಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷ ಸದಾಶಿವ ಸೇರಿದಂತೆ ಹಲವರು ಭಾಗವಹಿಸಿದ್ದರು.

English summary
Late Ananth Kumar had a dream of creating a Green Bengaluru, his wife Tejaswini chief of Adamya chethana organisation, had organised a programme to plant a saplings at Kempambudhi Lake, Bengaluru This is the 160th Green Bengaluru programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X