ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ರಾಪ್ತೆಯ ಮೇಲೆ 16 ವರ್ಷದ ಬಾಲಕನಿಂದ ರೇಪ್‌

By Ashwath
|
Google Oneindia Kannada News

ಬೆಂಗಳೂರು, ಮೇ. 21 :ಹದಿನಾಲ್ಕು ವರ್ಷದ ಬಾಲಕಿಯ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪ ನಡೆದಿದೆ.

ಬೇಗೂರು ರಸ್ತೆಯಲ್ಲಿರುವ ವಿಶ್ವಪ್ರಿಯಾ ಲೇಔಟ್‌ನ ಸಮೀಪ ನಿರ್ಮಾ‌ಣದ ಹಂತದ ಕಟ್ಟಡದಲ್ಲಿ ರಾಯಚೂರು ಮತ್ತು ತಮಿಳುನಾಡು ಮೂಲದ ಕಾರ್ಮಿ‌ಕರು ಕೆಲಸ ಮಾಡುತ್ತಿದ್ದರು. ಮೇ. 19 ಸೋಮವಾರ ಬೆಳಗ್ಗೆ ಕುಟುಂಬದ ಕಾರ್ಮಿ‌ಕರು ಯಾರು ಇಲ್ಲದ ವೇಳೆ ಕಾರ್ಮಿಕ ಕುಟುಂಬದ ಬಾಲಕಿಯನ್ನು ಪುಸಲಾಯಿಸಿ ಬಾಲಕ ಶೆಡ್‌‌ಗೆ ಕರೆದು ಅತ್ಯಾಚಾರವೆಸಗಿದ್ದಾನೆ.[ಮ್ಯಾನ್ಮಾರ್‌ ಯುವತಿ ಮೇಲೆ 2 ತಿಂಗಳಿಂದ ಅತ್ಯಾಚಾರ]

miner raped

ಮಧ್ಯಾಹ್ನ ಪುನಃ ಆತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸುವಾಗ ಕಟ್ಟಡ ರೈಟರ್‌ ಆಗಮಿಸಿದ್ದಾರೆ. ರೈಟರ್‌ ತನ್ನನ್ನು ಗಮನಿಸುತ್ತಿರುವುನ್ನು ನೋಡಿದ ಕೂಡಲೇ ಬಾಲಕ ಪರಾರಿಯಾಗಿದ್ದಾನೆ.

ಕಟ್ಟಡ ನಿರ್ಮಿಸುತ್ತಿರುವ ಮಾಲೀಕ ಭಾಸ್ಕರ್‌ ರೆಡ್ಡಿ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. ತಮಿಳುನಾಡಿನ ತಿರುಪುರ್‌ ಮೂಲದ ಬಾಲಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

English summary
Police are searching for a 16-year-old boy who allegedly repeatedly raped a 14-year-old girl at an apartment construction site near Electronics City on Monday. The accused and the survivor worked as daily wage workers at the site owned by Bhaskar Reddy in Vishwapriya layout, Begur Main Road in south-east Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X